Dakshina Kannada: ದಕ್ಷಿಣಕನ್ನಡ (Dakshina Kannada) ಜಿಲ್ಲೆಯ ಅಕ್ಷಯ್ ಕಲ್ಲೇಗ ಕೊಲೆಗೆ ಪ್ರತಿಕಾರ ತೀರಿಸಿಕೊಳ್ಳಲು ಹತ್ಯೆಯ ಆರೋಪಿ ಮನೀಶ್ ಸಹೋದರ ಮನೋಜ್ ಎಂಬುವವರಿಗೆ ಬೆದರಿಕೆ ಕರೆ ಬಂದಿದ್ದ ಹಿನ್ನಲೆ, ಪ್ಲ್ಯಾನ್ ಮಾಡಿದ್ದ ನಾಲ್ವರನ್ನು ಪುತ್ತೂರು (Puttur) ನಗರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದು, ಬಂಟ್ವಾಳ ನಿವಾಸಿ ಕಿಶೋರ್ ಕಲ್ಲಡ್ಕ (Kishore Kalladka) (36), ಪುತ್ತೂರಿನ ಮನೋಜ್ (23), ಆಶಿಕ್ (28) ಹಾಗೂ ಸನತ್ ಕುಮಾರ್ (24) ಎಂಬುವವರು ಬಂಧಿತರಾಗಿದ್ದಾರೆ.
ಬಳಿಕ ಮನೋಜ್ (Manoj) ಚಲನವಲನವನ್ನ ದುಷ್ಕರ್ಮಿಗಳ ತಂಡ ಗಮನಿಸುತ್ತಿದ್ದರು. ಅದರಂತೆ ಪುತ್ತೂರಿನ ಮುಕ್ರಂಪಾಡಿಯಲ್ಲಿ ಕಾರಿನಲ್ಲಿ ನಾಲ್ವರು ದುಷ್ಕರ್ಮಿಗಳ ತಂಡ ತಲ್ವಾರ್ ಸಹಿತ ಅವಿತ್ತಿದ್ದರು. ನಿನ್ನ ತಮ್ಮ ಮನೀಶ್ ಹಾಗೂ ಉಳಿದ ಆರೋಪಿಗಳು ಜೈಲಿನಿದ್ದಾರೆ (Jail). ಆದ್ರೆ, ನಿನ್ನನ್ನ ಬಿಡಲ್ಲ ಎಂದು ಫೋನ್ ಕರೆ ಮಾಡಿದ್ದರು. ಸದ್ಯ ಕಾರು, ತಲ್ವಾರ್ ಸಹಿತ ಆರೋಪಿಗಳನ್ನು ವಶಕ್ಕೆ ಪಡೆದ ಪೊಲೀಸರು, ಆರ್ಮ್ಸ್ ಆ್ಯಕ್ಟ್ (Arms Act) ಅಡಿ ಪ್ರಕರಣ ದಾಖಲಿಸಿದ್ದಾರೆ.
ಏನಿದು ಪ್ರಕರಣ?
ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕಲ್ಲೇಗದಲ್ಲಿ ಕಳೆದ ನವೆಂಬರ್ (November) 6, 2023ರಂದು ಹುಲಿವೇಷ ತಂಡ ಕಲ್ಲೇಗ ಟೈಗರ್ಸ್ ಮುಖ್ಯಸ್ಥ ಅಕ್ಷಯ್ ಕಲ್ಲೇಗ (26)ನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಕೊಲೆ ನಂತರ ಮೂವರು ಆರೋಪಿಗಳ ಪೈಕಿ ಇಬ್ಬರು ಆರೋಪಿಗಳು ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದರು. ಬನ್ನೂರು ನಿವಾಸಿ ಮನೀಷ್, ಚೇತು, ಮಂಜ, ಕೇಶವ ಎಂಬವವರನ್ನು ಬಂಧಿಸಿದ್ದರು.
ಈ ವೇಳೆ ಬಸ್ ಚಾಲಕ ಚೇತು ಎಂಬಾತನ ಬೆಂಬಲಿಗ ಹಾಗೂ ಅಕ್ಷಯ್ ನಡುವೆ ತೀವ್ರ ವಾಗ್ವಾದ ನಡೆದಿತ್ತು. ದ್ವಿಚಕ್ರ ವಾಹನಗಳ ನಡುವೆ ನಡೆದ ಅಪಘಾತ ವಿಚಾರದಲ್ಲಿ ಎರಡು ಸಾವಿರ ನೀಡುವ ಬಗ್ಗೆ ಮಾತುಕತೆ ನಡೆದಿತ್ತು. ಹೀಗೆ ಆರಂಭವಾದ ಗಲಾಟೆ ವಿಕೋಪಕ್ಕೆ ತಿರುಗಿ, ಅಕ್ಷಯ್ನನ್ನ ಅಟ್ಟಾಡಿಸಿ ತಲವಾರಿನಿಂದ ಕೊಚ್ಚಿ ಕೊಲೆ ಮಾಡಿದ್ದರು. ಸದ್ಯಕ್ಕೆ ಹತ್ಯೆ ಪ್ರಕರಣ ಸಂಬಂಧ ಚೇತನ್ (Chethan), ಮನೀಶ್, ಮಂಜ, ಕೇಶವ ಪಡೀಲು ನ್ಯಾಯಾಂಗ ಬಂಧನದಲ್ಲಿದ್ದಾರೆ.