Tel Aviv: ಜಾಗತಿಕ ಮಟ್ಟದ ಪ್ರಮುಖ ಸುದ್ದಿ ವಾಹಿನಿ ಹಾಗೂ ಕಟ್ಟರ್ ಮುಸ್ಲಿಂ ರಾಷ್ಟ್ರ ಕತಾರ್ ದೇಶದ ಮುಖವಾಣಿ ಎಂದೇ ಕುಖ್ಯಾತಿ ಗಳಿಸಿರುವ ಕತಾರ್ ಮೂಲದ ಅಲ್ ಜಜೀರಾ ಸುದ್ದಿ ವಾಹಿನಿಯನ್ನು ಇಸ್ರೇಲ್ನಲ್ಲಿ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಇಸ್ರೇಲ್ ಸಂಸತ್ತು ಬಹುಮತದೊಂದಿಗೆ ಅಲ್ ಜಜೀರಾ (Al Jazeera) ಸುದ್ದಿ ವಾಹಿನಿಯನ್ನು ನಿಷೇಧಿಸುವ ಮಸೂದೆಯನ್ನು ಪಾಸ್ ಮಾಡಿದೆ. ಈ ಮಸೂದೆಯನ್ನು ಸಂಸತ್ತಿನಲ್ಲಿ ಮತಕ್ಕೆ ಹಾಕಿದಾಗ 70 ಮಂದಿ ಸಂಸದರು ಒಪ್ಪಿಗೆ ನೀಡಿದರೆ 10 ಸಂಸದರು ಈ ಮಸೂದೆಯನ್ನು ವಿರೋಧಿಸಿದ್ದರು.
ಅಂತಿಮವಾಗಿ ಈ ಮಸೂದೆಯನ್ನು ಪಾಸು ಮಾಡಲಾಗಿದ್ದು. ಈ ಮಸೂದೆಯು ರಾಷ್ಟ್ರೀಯ ಭದ್ರತೆಗೆ ಹಾನಿಯುಂಟುಮಾಡುವ ವಿದೇಶಿ ವಾಹಿನಿಗಳ ಪ್ರಸಾರವನ್ನು ನಿಷೇಧಿಸುವ ಅಧಿಕಾರ ಮತ್ತು ವಾಹಿನಿಗಳ ಕಚೇರಿಗಳನ್ನು ಮುಚ್ಚಲು ಅಧಿಕಾರ ನೀಡುತ್ತದೆ. ಈ ಮಸೂದೆ ಅಧಿಕೃತವಾಗಿ ಕಾನೂನಾಗಿ ಜಾರಿಗೆ ಬಂದ ನಂತರ ಇಸ್ರೇಲ್ನಲ್ಲಿ (Israel) ಅಲ್ ಜಜೀರಾ ನಿಷೇಧಿಸಲು ಕ್ರಮ ತೆಗೆದುಕೊಳ್ಳುವುದಾಗಿ ಪ್ರಧಾನಿ ನೆತನ್ಯಾಹು ಹೇಳಿದ್ದಾರೆ.
ಇನ್ನು ಅಲ್ ಜಜೀರಾ ಜಾಗತಿಕ ಉಗ್ರ ವಾಹಿನಿಯಾಗಿದ್ದು, ಮತಾಂಧ ಸುದ್ದಿಗಳನ್ನು ಪ್ರಕಟಿಸುವ ಮೂಲಕ ನಮ್ಮ ರಾಷ್ಟ್ರೀಯ ಭದ್ರತೆಗೆ ಹಾನಿಯುಂಟುಮಾಡುವ ಉದ್ದೇಶವನ್ನು ಹೊಂದಿದೆ. ಕಳೆದ ಅನೇಕ ವರ್ಷಗಳಿಂದ ಈ ವಾಹಿನಿ ಈ ರೀತಿಯ ಕಾರ್ಯದಲ್ಲಿ ತೊಡಗಿಕೊಂಡಿದೆ. ಹೀಗಾಗಿಯೇ ಇಸ್ರೇಲ್ ನಿಷೇಧದಂತಹ ಕಠಿಣ ಕ್ರಮವನ್ನು ಕೈಗೊಂಡಿದೆ. ನಮ್ಮ ರಾಷ್ಟ್ರೀಯ ಭದ್ರತೆಗೆ ಹಾನಿಯುಂಟುಮಾಡುವ ಯಾವುದೇ ಕಾರ್ಯಚಟುವಟಿಕೆಯನ್ನು ನಾವು ಸಹಿಸುವುದಿಲ್ಲ ಎಂದು ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ.
ಇನ್ನು ಗಾಜಾದಲ್ಲಿ (Gaza) ವೈಮಾನಿಕ ದಾಳಿಯಲ್ಲಿ ಕೊಲ್ಲಲ್ಪಟ್ಟ ಅಲ್ ಜಜೀರಾ ಸಿಬ್ಬಂದಿಯನ್ನು ಭಯೋತ್ಪಾದಕರು ಎಂದು ಇಸ್ರೇಲ್ ಹೇಳಿಕೊಂಡಿತ್ತು. ಗಾಯಗೊಂಡ ಚಾನೆಲ್ನ ಇನ್ನೊಬ್ಬ ಪತ್ರಕರ್ತ ಹಮಾಸ್ ಡೆಪ್ಯುಟಿ ಕಂಪನಿ ಕಮಾಂಡರ್ (Hamas Deputy Company Commander)ಎಂದು ಇಸ್ರೇಲ್ ಆರೋಪಿಸಿತ್ತು.
ಅಲ್ ಜಜೀರಾ : ಈ ಸುದ್ದಿ ವಾಹಿನಿಯನ್ನು ಕತಾರ್ (Qatar) ದೇಶದ ಅಲ್ ಜಜೀರಾ ಮೀಡಿಯಾ ನೆಟ್ವರ್ಕ್ ಸಂಸ್ಥೆಯೂ 2006ರಲ್ಲಿ ದೋಹಾದಲ್ಲಿ ಸ್ಥಾಪಿಸಿತು. ಇಸ್ಲಾಂನ ಅಜೆಂಡಾಗಳನ್ನು ಜಾಗತಿಕ ಮಟ್ಟದಲ್ಲಿ ಪ್ರಚುರಪಡಿಸುವ ಮೂಲ ಧ್ಯೇಯವನ್ನು ಹೊಂದಿರುವ ಈ ವಾಹಿನಿ ವಿರುದ್ದ ಅನೇಕ ದೇಶಗಳು ಕಿಡಿಕಾರಿವೆ. ಅರೇಬಿಕ್, ಇಂಗ್ಲಿಷ್ (Arabic, English)ಸೇರಿದಂತೆ ಅನೇಕ ಭಾಷೆಗಳಲ್ಲಿ ಈ ವಾಹಿನಿ ಪ್ರಸಾರಚವಾಗುತ್ತದೆ.