ಉ.ಪ್ರ ಚುನಾವಣೆ ಮೂಂದುಡುವಂತೆ ಚುನಾವಣಾ ಆಯೋಗಕ್ಕೆ ಹೈಕೋರ್ಟ್ ಸೂಚನೆ

ಅಲಹಬಾದ್ ಡಿ 24 : ಪಂಚ ರಾಜ್ಯ ಚುನಾವಣೆ ಸಮೀಪಿಸುತ್ತಿದ್ದ ಹಿನ್ನಲೆಯಲ್ಲಿ ಓಮಿಕ್ರಾನ್‌ ಸೋಂಕು ಕೂಡ ಹೆಚ್ಚಳವಾಗುತ್ತಿದೆ ಈ ಹಿನ್ನಲೆಯಲ್ಲಿ ಉತ್ತರ ಪ್ರದೇಶ  ಚುನಾವಣೆಯನ್ನು ಮುಂದೂಡುವಂತೆ ಅಲಹಾಬಾದ್‌ ಹೈಕೋರ್ಟ್  ಚುನಾವಣಾ ಆಯೋಗಕ್ಕೆ ಸೂಚಿಸಿದೆ. ಚುನಾವಣೆ ನಡೆಯು ವೇಳೆಯಲ್ಲಿ ಸಹಜವಾಗಿ ಜನರು ಹೆಚ್ಚು ಜನರು ಸೇರುವುದರಿಂದ ಒಮಿಕ್ರಾನ್‌ ಹಾಗೂ ಕರೋನ ಸೋಂಕು ಕೂಡ ಹೆಚ್ಚಳವಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಹೀಗಾಗಿ ಕೇಂದ್ರ ಸರ್ಕಾರ ಹಾಗೂ ಕೇಂದ್ರ ಆರೋಗ್ಯ ಇಲಾಖೆ ಹೆಚ್ಚು ಜನರು ಸೇರುವ ಜಾತ್ರೆ, ಉತ್ಸವಗಳನ್ನು ಮಾಡದಂತೆ ಈಗಾಗಲೇ ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆ ನೀಡಿದೆ.

ಮುಂದಿನ ವರ್ಷದ ಆರಂಭದಲ್ಲಿ ಉತ್ತರ ಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಉತ್ತರ ಪ್ರದೇಶದ ವಿಧಾನಸಭೆ ಚುನಾವಣೆಯನ್ನು 1-2 ತಿಂಗಳ ಕಾಲ ತಕ್ಷಣವೇ ಮುಂದೂಡುವಂತೆ ಚುನಾವಣಾ ಆಯೋಗಕ್ಕೆ ಸೂಚನೆ ನೀಡಿದೆ. ಹೆಚ್ಚುತ್ತಿರುವ ಕೋವಿಡ್ -19 ರೂಪಾಂತರದ ಓಮಿಕ್ರಾನ್ ಭಯವನ್ನು ಗಮನದಲ್ಲಿಟ್ಟುಕೊಂಡು, ರಾಜ್ಯದಲ್ಲಿ ರಾಜಕೀಯ ಪಕ್ಷಗಳ ರ್ಯಾಲಿಗಳು ಮತ್ತು ಸಾರ್ವಜನಿಕ ಸಭೆಗಳನ್ನು ತಕ್ಷಣವೇ ನಿಷೇಧಿಸುವಂತೆ ನ್ಯಾಯಾಲಯವು ಪ್ರಧಾನಿ ನರೇಂದ್ರ ಮೋದಿ ಮತ್ತು ಇಸಿಯನ್ನು ಒತ್ತಾಯಿಸಿದೆ.

“ರ್ಯಾಲಿಗಳನ್ನು ನಿಲ್ಲಿಸದಿದ್ದರೆ, ಫಲಿತಾಂಶಗಳು ಎರಡನೇ ಅಲೆಗಿಂತ ಕೆಟ್ಟದಾಗಿರುತ್ತದೆ” ಎಂದು ನ್ಯಾಯಮೂರ್ತಿ ಶೇಖರ್ ಯಾದವ್ ಹೇಳಿದ್ದು, ಇದೇ ವೇಳೆ ಅವರು “ಜಾನ್ ಹೈ ತೊ ಜಹಾನ್ ಹೈ (ಜೀವನವಿದ್ದರೆ, ನಮಗೆ ಜಗತ್ತು ಇದೆ)” ಎಂದು ಹೇಳಿದರು

ಕೋವಿಡ್ -19 ಲಸಿಕೆ ಅಭಿಯಾನಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಶ್ಲಾಘಿಸಿದ ನ್ಯಾಯಾಲಯವು, ಸಾಂಕ್ರಾಮಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವ, ರ್ಯಾಲಿಗಳು, ಸಭೆಗಳನ್ನು ನಿಲ್ಲಿಸುವುದು ಮತ್ತು ಮುಂಬರುವ ರಾಜ್ಯ ಚುನಾವಣೆಗಳನ್ನು ಮುಂದೂಡುವುದನ್ನು ಪರಿಗಣಿಸುವಂತೆ ಮನವಿ ಮಾಡಿದೆ.

Exit mobile version