ಪ್ರೀತಿ ಯಾವಾಗಲೂ ಗೆಲ್ಲುತ್ತೆ, ವಾಟ್‌ ಏ ಬ್ಲಾಸ್ಟ್ ; ಪಠಾಣ್‌ ಚಿತ್ರ ಬೆಂಬಲಿಸಿದ ನಟಿ ಆಲಿಯಾ ಭಟ್…

Mumbai : ಪಠಾಣ್‌ (Pathan)ಚಿತ್ರಕ್ಕೆ ಕೇಳಿಬಂದ ಬಹಿಷ್ಕಾರದ ಕೂಗಿಗೆ ಮೊದಲ ಬಾರಿ ನಟಿ ಆಲಿಯಾ ಭಟ್‌(Aliaa Bhat) ಪ್ರತಿಕ್ರಿಯಿಸಿದ್ದು, ಚಿತ್ರವನ್ನು ಬಹಿಷ್ಕರಿಸುವವರಿಗೆ ತಮ್ಮ ಹೇಳಿಕೆಯ(Alia posted Pathan poster) ಮುಖೇನ ತಿರುಗೇಟು ನೀಡಿದ್ದಾರೆ.

ಬಾಲಿವುಡ್‌ ಕಿಂಗ್‌ ಖಾನ್‌ ನಟ ಶಾರುಖ್ ಖಾನ್(Shah Rukh Khan) ಮತ್ತು ನಟಿ ದೀಪಿಕಾ ಪಡುಕೋಣೆ(Deepika Padukone) ನಟನೆಯ ಪಠಾಣ್‌ ಚಿತ್ರಕ್ಕೆ ನಟಿ ಆಲಿಯಾ ಭಟ್ ಆತ್ಮೀಯವಾಗಿ ಬೆಂಬಲ ನೀಡಿದ್ದಾರೆ.

ಈ ಬಗ್ಗೆ ತಮ್ಮ ಇನ್‌ಸ್ಟಾಗ್ರಾಮ್(Instagram) ಸ್ಟೋರಿಗಳಲ್ಲಿ ಪೋಸ್ಟ್‌ ಮಾಡಿರುವ ನಟಿ ಆಲಿಯಾ, ಪಠಾಣ್‌ ಚಿತ್ರದ ಪೋಸ್ಟರ್‌ ಹಾಕಿ, ಪ್ರೀತಿ ಯಾವಾಗಲೂ ಗೆಲ್ಲುತ್ತದೆ, ವಾಟ್ ಎ ಬ್ಲಾಸ್ಟ್ ಎಂದು ಬರೆದು,

ಉತ್ಸಾಹದಿಂದ ಪೋಸ್ಟ್‌ ಮಾಡಿದ್ದಾರೆ, ಈ ಪೋಸ್ಟ್‌(Post) ಮೂಲಕ ಪಠಾಣ್‌ ಚಿತ್ರಕ್ಕೆ ಬಹಿಷ್ಕಾರ ಕೂಗಿ, ವಿವಾದ ಸೃಷ್ಟಿಸಿದವರಿಗೆ ತಿರುಗೇಟು ನೀಡಿದ್ದಾರೆ.

ಪ್ರೀತಿಯನ್ನು ನೀಡುವವರು ಎಂದಿಗೂ ಪ್ರೀತಿಯನ್ನು ಉಳಿಸಿಕೊಳ್ಳುತ್ತಾರೆ! ಪ್ರೀತಿ ಸದಾ ಗೆಲುವನ್ನು ಸಾಧಿಸುತ್ತದೆ ಎಂದು ಹೇಳಿದ್ದಾರೆ.

ಬುಧವಾರ ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡ ಪಠಾಣ್‌ ಚಿತ್ರ ಯಶಸ್ಸಿನ ಹಾದಿಯಲ್ಲಿ ಸಾಗುತ್ತಿದ್ದು, ದಾಖಲೆಗಳನ್ನು ಮುರಿದು ಮುನ್ನುಗ್ಗುತ್ತಿದೆ.

ದಿನದಿಂದ ದಿನಕ್ಕೆ ಪಠಾಣ್‌ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ(Box office) ಕಮಾಲ್‌ ಮಾಡುತ್ತಿದ್ದು, ಭರ್ಜರಿ ಗಳಿಕೆಯನ್ನು ಗಳಿಸುತ್ತಿದೆ.

ಆಲಿಯಾ ಭಟ್ ಅವರು ಡಿಯರ್ ಜಿಂದಗಿ(Dear Zindagi) ಚಿತ್ರದಲ್ಲಿ ನಟ ಶಾರುಖ್ ಖಾನ್ ಅವರೊಂದಿಗೆ ಕೆಲಸ ಮಾಡಿದ್ದಾರೆ, ಆದ್ರೆ, ನಟಿ ದೀಪಿಕಾ ಪಡುಕೋಣೆ ಅವರೊಂದಿಗೆ ಯಾವ ಚಿತ್ರದಲ್ಲೂ ಕೆಲಸ ಮಾಡಿಲ್ಲ.

ಈ ಬಗ್ಗೆ ಮುಂದಿನ ದಿನಗಳಲ್ಲಿ ಕೆಲಸ ಮಾಡುವ ಆಶಯವನ್ನು ನಟಿ ಆಲಿಯಾ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್‌ ಈಗ ಕರ್ನಾಟಕದಲ್ಲೂ ಕೊನೆ ಉಸಿರೆಳೆಯುತ್ತಿದೆ ; ಬಿಜೆಪಿ ಲೇವಡಿ

ಇನ್ನು ಇದೇ ರೀತಿ ನಟ, ನಿರ್ದೇಶಕ ಕರಣ್ ಜೋಹರ್(Karan Johar) ಅವರು ಕೂಡ ಪಠಾಣ್ ಚಿತ್ರದ ಬಗ್ಗೆ ಟ್ವೀಟ್‌(Tweet) ಮಾಡಿ ಸಂತಸ ಸೂಚಿಸಿದ್ದಾರೆ.

ಶತಮಾನಕ್ಕೂ ಮೀರಿದ ಹಿಟ್ಸ್! ಒಂದೇ ದಿನದಲ್ಲಿ 100 ಕೋಟಿ ರೂ. ಮತ್ತು ಅದಕ್ಕಿಂತ ಹೆಚ್ಚು ಗಳಿಕೆ!

GOAT ಮೆಗಾ ಸ್ಟಾರ್ SRK, ದಾರ್ಶನಿಕ ಮತ್ತು ದಂತಕಥೆ YRF ಮತ್ತು ಆದಿ… ಸಿದ್, ದೀಪಿಕಾ, ಜಾನ್!! ವಾಹ್ ಎಂದು ಮೊಹಮ್ಮದ್ ಜೀಶನ್ ಅಯ್ಯುಬ್ ಕೂಡ ಟ್ವೀಟ್ ಮಾಡಿ ತಿಳಿಸಿದ್ದಾರೆ.


ಲವ್ ಇನ್ ಆಕ್ಷನ್! ಪಠಾಣ್ ಚಿತ್ರಕ್ಕಿಂತ srk ಅವರಿಗೆ ಹೆಚ್ಚಿನ ಅಭಿನಂದನೆಗಳು ಎಂದು ಪೂಜಾ ಭಟ್(Pooja Bhat) ಟ್ವೀಟ್ ಮಾಡಿದ್ದಾರೆ.

ನಾಲ್ಕು ವರ್ಷಗಳ ನಂತರ ನಟ ಶಾರುಖ್ ಖಾನ್‌ ಅವರು ಪಠಾಣ್‌ ಚಿತ್ರದ ಮೂಲಕ ಬೆಳ್ಳಿತೆರೆಗೆ ಮರಳಿದ್ದಾರೆ.

ನಟಿ ದೀಪಿಕಾ ಪಡುಕೋಣೆ ಮತ್ತು ಶಾರೂಖ್‌ ಖಾನ್‌ ಜೋಡಿ ಒಟ್ಟಿಗೆ ನಟಿಸಿರುವ ಚಿತ್ರಗಳ ಪೈಕಿ ಪಠಾಣ್‌ ನಾಲ್ಕನೇ ಚಿತ್ರವಾಗಿದೆ.

Exit mobile version