`ಬ್ರೇಕ್ ಅಪ್’ ಹೀರೋ ರಣಬೀರ್ ಕಪೂರ್ ಕೈಹಿಡಿಯಲಿದ್ದಾರಾ ನಟಿ ಆಲಿಯಾ?

ನಟಿ ಆಲಿಯಾ ಬಟ್ ಅವರು ತಮ್ಮ ನಟನೆಯ ಸ್ಟೂಡೆಂಟ್ ಆಫ್ ದಿ ಇಯರ್ ಸಿನಿಮಾ ಮೂಲಕ ಇಂದು ದೊಡ್ಡ ನಟ, ನಟಿಯರಿಗೆ ಸೆಡ್ದು ಹೊಡೆಯುವಂತೆ ತಮ್ಮದೇ ಚಾಪನ್ನ ಬಾಲಿವುಡ್ ನಲ್ಲಿ ಮೂಡಿಸಿದ್ದಾರೆ. ಈಗ ಇವರು ರಣಬೀರ್ ಕಪೂರ್ ಅವರನ್ನು ಮದುವೆ ಆಗ್ತಾರೆ ಎಂಬ ಸುದ್ದಿ ಸದ್ಯ ಬಾಲಿವುಡ್ ನಲ್ಲಿ ಸದ್ದು ಮಾಡ್ತಿದೆ. ಯಾಕಂದ್ರೆ ರಣಬೀರ್​ ಕಪೂರ್​ ಈಗಾಗಲೇ ದೊಡ್ಡ ದೊಡ್ಡ ಸ್ಟಾರ್ ನಟಿಯರ ಜೊತೆ ಡೇಂಟಿಗ್ ಮಾಡಿ ಬ್ರೇಕ್ ಮಾಡಿಕೊಂಡಿದ್ದಾರೆ.

ಈಗ ಆಲಿಯಾ ಬಟ್ ಮತ್ತು ರಣಬೀರ್ ಕಪೂರ್ ಹೆಚ್ಚಾಗಿ ಹಲವು ವೇದಿಕೆಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಕಾರಣ ಇವರಿಬ್ಬರೂ ಮದುವೆಯಾಗುವ ಮುನ್ಸೂಚನೆ ಇರಬಹುದಾ ಎಂಬ ಪ್ರಶ್ನೆಗಳು ಹರಿದಾಡುತ್ತಿವೆ. ಸ್ಟಾರ್ ನಟಿಯರ ಜೊತೆ ಸ್ಟಾರ್ ಆಗಿ ಸುದ್ದಿಯಾಗುತ್ತಿರುವ ರಣಬೀರ್ ಕಪೂರ್ ಈಗ ಆಲಿಯಾ ಬಟ್ ಜೊತೆ ಕಾಣಿಸಿಕೊಂಡು ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. ಈಗಾಗಲೇ ದೀಪಿಕಾ ಪಡುಕೋಣೆ ಜೊತೆಗೆ ಡೇಟಿಂಗ್‌ ಮಾಡಿ ಬ್ರೇಕಪ್ ಆಗಿದೆ. ತದನಂತರ ಕತ್ರಿನಾ ಕೈಫ್​ ಜೊತೆಗೂ ಕೂಡ ಡೇಟಿಂಗ್‌ ಮಾಡಿದ್ದಾರೆ. ಹಲವು ಸ್ಟಾರ್ ನಟಿಯರ ಜೊತೆಗೆ ಬ್ರೇಕಪ್ ಮಾಡಿಕೊಂಡಿರುವ ರಣಬೀರ್ ಕಪೂರ್ ಮೇಲೆ ಆಲಿಯಾ ಬಟ್ ಗೆ ಏಕೆ ಪ್ರೀತಿ ಹುಟ್ಟಿತು ಎಂಬ ಪ್ರಶ್ನೆ ಎಲ್ಲರಲ್ಲೂ ಕಾಡ್ತಿದೆ. ಆಲಿಯಾ ಬಟ್ ಮುಂದೆ ಯಾವ ನಿರ್ಧಾರ ಕೈಗೊಳ್ತಾರೆ ಅನ್ನೋದು ಸಿನಿ ಪ್ರಿಯರಲ್ಲಿ ಕುತೂಹಲ ಮೂಡಿಸಿದೆ.

ಇನ್ನೂ ಫೆ.25ರಂದು ಆಲಿಯಾ ಬಟ್ ನಟನೆಯ ‘ಗಂಗೂಬಾಯಿ ಕಾಠಿಯಾವಾಡಿ’ ಸಿನಿಮಾ ಬಿಡುಗಡೆಗೊಂಡಿದೆ. ಸಿನಿಮಾ ಪ್ರಚಾರದ ಸಂದರ್ಭದಲ್ಲಿ ರಣಬೀರ್ ಕಪೂರ್ ಬಗ್ಗೆ ಪ್ರಶ್ನೆಗಳು ಸಾಮಾನ್ಯವಾಗಿವೆ. ಅದಕ್ಕೆ ಆಲಿಯಾ ಭಟ್ ಉತ್ತರಿಸಿದ್ದು, ಇದು, ಇಂದು ನಿನ್ನೆಯ ಪ್ರೀತಿಯಲ್ಲ. ನಾನು ಚಿಕ್ಕ ಬಾಲಕಿಯಾಗಿದ್ದಾಗಲೇ ರಣಬೀರ್ ಗೆ ಮನಸೋತಿದ್ದೆ ಎಂದಿದ್ದಾರೆ. ತೆರೆ ಮೇಲೆ ರಣಬೀರ್ ಅವರನ್ನ ನೋಡಿದ ಮೊದಲ ಬಾರಿಯೇ ಮದುವೆ ಆಗುವ ಬಗ್ಗೆ ನಿರ್ಧಾರ ಮಾಡಿದ್ದೆ ಎಂದರು. ನಾನು ಮಾನಸಿಕವಾಗಿ ಈಗಾಗಲೇ ಅವರ ಜೊತೆ ಮದುವೆಯಾಗಿದ್ದೇನೆ. ಒಂದು ಒಳ್ಳೆ ಸಮಯಕ್ಕಾಗಿ ಕಾಯ್ತಾ ಇದ್ದೀನಿ. ಸದ್ಯದಲ್ಲೇ ಮದುವೆ ಆಗಲ್ಲ ಎಂದು ಹೇಳುವ ಮೂಲಕ ಕೊಂಚ ಬ್ರೇಕ್ ಕೊಟ್ಟಿದ್ದಾರೆ.

Exit mobile version