ಚೆನ್ನೈ ತಂಡಕ್ಕೆ ಏಕಾಂಗಿಯಾಗಿ ಹೋರಾಟ ಮಾಡಿದ ಅಂಬಟಿ ರಾಯಡು!

CSK

ಚೆನ್ನೈ ಸೂಪರ್ ಕಿಂಗ್ಸ್(Chennai Super Kings) ತಂಡದ ಸೂಪರ್ ಡೂಪರ್ ಆಟಗಾರ ಅಂಬಾಟಿ ರಾಯುಡು(Ambati Rayadu) ಸೋಮವಾರ ರಾತ್ರಿ ಪಂಜಾಬ್ ಕಿಂಗ್ಸ್(Punjab Kings) ವಿರುದ್ಧ ನಡೆದ ಮತ್ತೊಂದು ಇಂಡಿಯನ್ ಪ್ರೀಮಿಯರ್ ಲೀಗ್(IPL) ಪಂದ್ಯದಲ್ಲಿ ಆಕ್ರಮಣಕಾರಿ, ಆಕರ್ಷಕ ಬ್ಯಾಟಿಂಗ್ ಮಾಡಿದರು.

ಆದ್ರೆ ತಂಡಕ್ಕೆ ಗೆಲುವು ತಂದುಕೊಡುವಲ್ಲಿ ವಿಫಲರಾದರು. ಕಾರಣ 187 ರನ್ಗಳ ಬೆನ್ನಟ್ಟಿದ ಚೆನ್ನೈ, ಆರಂಭದಲ್ಲೇ ಮುಖ್ಯ ವಿಕೆಟ್ಗಳನ್ನು ಕಳೆದುಕೊಂಡಿತು. ಸತತವಾಗಿ ಹೋರಾಟ ಮಾಡಿದ ಅಂಬಾಟಿ ರಾಯುಡುವಿಗೆ ಯಾರು ಸಾಥ್ ನೀಡಲಿಲ್ಲ! ಅಗ್ರ ಕ್ರಮಾಂಕದ ವೈಫಲ್ಯದಿಂದಾಗಿ CSK ಇನಿಂಗ್ಸ್‌ನ ಆರಂಭಿಕ ಓವರ್‌ಗಳಲ್ಲಿ ತತ್ತರಿಸಿಹೋದ ಬಳಿಕ ರಾಯಡು 39 ಎಸೆತಗಳಲ್ಲಿ 78 ರನ್ ಗಳಿಸಿ ಔಟಾದರು. ಆದ್ರೆ, ರಾಯುಡು ಆಡುತ್ತಿದ್ದ ಇನ್ನಿಂಗ್ಸ್‌ನ ಕೊನೆಯಲ್ಲಿ ಅತೀವವಾಗಿ ಉಸಿರುಗಟ್ಟಿರುವುದು ವೀಡಿಯೊದಲ್ಲಿ ಕಂಡುಬಂದಿದೆ.

ಈ ವೀಡಿಯೋ ಗಮನಿಸಿ ಕೆಲವರು ಇದು ಫಿಟ್‌ನೆಸ್ ಕೊರತೆ ಇರಬಹುದು. ಇದೇ ಕಾರಣಕ್ಕಾಗಿಯೇ CSK ಆಟಕ್ಕೆ ಕಾರಣವಾಗಿರಬಹುದು ಎಂದು ಟೀಕೆ ಮಾಡಿದ್ದಾರೆ. ಪಂದ್ಯದ ನಂತರದ ಪತ್ರಿಕಾಗೋಷ್ಠಿಯಲ್ಲಿ ಸಿಎಸ್‌ಕೆ ಕೋಚ್ ಸ್ಟೀಫನ್ ಫ್ಲೆಮಿಂಗ್ ಅವರು ಮೊದಲ ಇನ್ನಿಂಗ್ಸ್‌ನಲ್ಲಿ ಫೀಲ್ಡಿಂಗ್ ಮಾಡುವಾಗ ಅಂಬಟಿ ರಾಯುಡು ಅವರ ಕೈಗೆ ತೀವ್ರವಾಗಿ ಪೆಟ್ಟು ಬಿದ್ದಿತ್ತು ಮತ್ತು ಚಿಕಿತ್ಸೆಯ ಅಗತ್ಯವಿತ್ತು ಎಂದು ಹೇಳಿದರು.

ರಾಯುಡು ಅವರಿಗೆ ಪೆಟ್ಟು ಬಿದ್ದಿದ್ದರು ಕೂಡ ಸಿಎಸ್‌ಕೆ ತಂಡದ ಪರವಾಗಿ ಉತ್ತಮ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾದರು. ಸೋಲಿನ ನಂತರ ಅಂಕಪಟ್ಟಿಯನ್ನು ತಿರುಗಿನೋಡಿದರೆ, CSK ಆಡಿದ ಎಂಟು ಪಂದ್ಯಗಳಲ್ಲಿ ಕೇವಲ ಎರಡು ಪಂದ್ಯಗಳನ್ನು ಗೆದ್ದು ಅಂಕಪಟ್ಟಿಯಲ್ಲಿ ಒಂಬತ್ತನೇ ಸ್ಥಾನವನ್ನು ಅಲಂಕರಿಸಿದೆ. ಇದೇ ಮೇ 1 ರಂದು ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲು ಸಜ್ಜಾಗಲಿದೆ.

Exit mobile version