“ಇಸ್ರೇಲ್ ರಕ್ಷಣೆಗೆ ಬದ್ದ” ಇರಾನ್ಗೆ ಎಚ್ಚರಿಕೆ ನೀಡಿದ ಅಮೇರಿಕಾ: ಮಧ್ಯಪ್ರಾಚ್ಯ ಮತ್ತಷ್ಟು ಉದ್ವಿಗ್ನ..!

Tel-Aviv (Israel): ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷ ಇದೀಗ ಮಧ್ಯಪ್ರಾಚ್ಯದಲ್ಲಿ ಅಶಾಂತಿಯನ್ನು ಸೃಷ್ಟಿಸಿದ್ದು, ಏಷ್ಯಾದ ಪ್ರಾದೇಶಿಕ ಶಾಂತಿಯ ಮೇಲೆ ಈ ಸಂಘರ್ಷ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ. ಕಳೆದ ಶನಿವಾರ ರಾತ್ರಿ ಇಸ್ರೇಲ್ ಮೇಲೆ ಇರಾನ್ ಡ್ರೋನ್, ಕ್ಷಿಪಣಿ ದಾಳಿಯನ್ನು ತೀವ್ರವಾಗಿ ಖಂಡಿಸಿರುವ ಅಮೆರಿಕ (America) “ಇಸ್ರೇಲ್ ರಕ್ಷಣೆಗೆ ನಾವು ಬದ್ಧರಾಗಿದ್ದೇವೆ, ಯಾವುದೇ ಪರಿಸ್ಥಿತಿಯಲ್ಲೂ ನಾವು ಇಸ್ರೇಲ್ನೊಂದಿಗೆ ನಿಲ್ಲುತ್ತೇವೆ ಎಂದು ಅಮೆರಿಕ ಘೋಷಿಸಿದೆ.

ತನ್ನ ಮಿತ್ರರಾಷ್ಟ್ರ ಇಸ್ರೇಲ್ (Israel) ಮೇಲೆ ಇರಾನ್ ದಾಳಿ ಮಾಡಿದ ನಂತರ ಜಿ7 ನಾಯಕರ ಸಭೆ ಕರೆದಿರುವ ಅಮೇರಿಕಾ, ಇಸ್ರೇಲ್ಗೆ ಅಗತ್ಯ ನೆರವು ನೀಡುವ ಸಿದ್ದತೆ ನಡೆಸಿದೆ. ಈ ಮಧ್ಯೆ ಇರಾನ್ ಮೇಲೆ ದಾಳಿ ಮಾಡಲು ಸನ್ನದ್ದ ಸ್ಥಿತಿಯಲ್ಲಿ ಇರುವಂತೆ ಸೇನೆಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್ (Joe-Biden) ಸೂಚನೆ ನೀಡಿದ್ದಾರೆ. ಈಗಾಗಲೇ ಅಮೇರಿಕಾ ತನ್ನ ಎರಡು ಯುದ್ದನೌಕೆಗಳನ್ನು ಇಸ್ರೇಲ್ ನೆರವಿಗೆ ಕಳುಹಿಸಿದೆ.

ಶ್ವೇತಭವನದಲ್ಲಿ ಮಾದ್ಯಮಗಳೊಂದಿಗೆ ಮಾತನಾಡಿದ ಅಮೆರಿಕ ಅಧ್ಯಕ್ಷ ಜೋ ಬೈಡನ್ , “ಇಸ್ರೇಲ್ ಮೇಲೆ ದಾಳಿ ಮಾಡಬೇಡಿ, ನಿಮ್ಮ ದಾಳಿ ಮುಂದುವರೆದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ” ಎಂದು ಇರಾನ್ ಗೆ ಸ್ಪಷ್ಟ ಎಚ್ಚರಿಕೆ ನೀಡಿದ್ದು, ನಾವು ಇಸ್ರೇಲ್ ರಕ್ಷಣೆಗೆ ಬದ್ಧರಾಗಿದ್ದೇವೆ. ಇಸ್ರೇಲ್ ಅನ್ನು ಬೆಂಬಲಿಸುತ್ತೇವೆ. ಇರಾನ್ (Iran) ತನ್ನ ಪ್ರಯತ್ನದಲ್ಲಿ ಯಶಸ್ವಿಯಾಗುವುದಿಲ್ಲ ಎಂದು ತಿಳಿಸಿದ್ದಾರೆ.

G-7 ನಾಯಕರ ಸಭೆ ಕರೆದ ಅಮೆರಿಕ : ಇಸ್ರೇಲ್ ಮೇಲೆ ಇರಾನ್ ನಡೆಸಿರುವ ಕ್ಷಿಪಣಿ ದಾಳಿಯನ್ನು ಖಂಡಿಸಿರುವ ಅಮೆರಿಕ ಅಧ್ಯಕ್ಷ ಜೋ ಬೈಡನ್ , ತುರ್ತಾಗಿ ಜಿ7 ನಾಯಕರ ಸಭೆ ಕರೆದಿದ್ದಾರೆ. ಇರಾನ್ಗೆ ತಕ್ಕ ತಿರುಗೇಟು ನೀಡಲು ಅಮೇರಿಕಾ ಸಿದ್ದತೆ ನಡೆಸಿದೆ. ಯೆಮೆನ್, ಸಿರಿಯಾ (Yemen, Seria) ಮತ್ತು ಇರಾಕ್ನಿಂದ ಕಾರ್ಯನಿರ್ವಹಿಸುತ್ತಿರುವ ಇರಾನ್ ಮತ್ತು ಇರಾನ್ ಬೆಂಬಲಿತ ಉಗ್ರ ಸಂಘಟನೆಗಳ ಮೇಲೆ ದಾಳಿ ನಡೆಸಲು ಯೋಜನೆ ರೂಪಿಸಲಾಗುತ್ತಿದೆ. ಈ ಮಧ್ಯೆ ಬ್ರಿಟನ್ (Briton) ಕೂಡಾ ಇಸ್ರೇಲ್ ಬೆಂಬಲಕ್ಕೆ ನಿಂತಿದ್ದು, ಇರಾನ್ ದಾಳಿಯನ್ನು ತೀವ್ರವಾಗಿ ಖಂಡಿಸಿದೆ.

ಇಸ್ರೇಲ್-ಇರಾನ್ಗೆ ಹೋಗಬೇಡಿ – ವಿದೇಶಾಂಗ ಇಲಾಖೆ: ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷ ತೀವ್ರ ಸ್ವರೂಪ ಪಡೆಯುವ ಸಾಧ್ಯತೆ ಇದ್ದು, ಇಸ್ರೇಲ್ ಮತ್ತು ಇರಾನ್ಗೆ ಭಾರತೀಯರು ಹೋಗಬಾರದು ಎಂದು ಭಾರತೀಯ ವಿದೇಶಾಂಗ ಸಚಿವಾಲಯ ತಿಳಿಸಿದೆ. ಇನ್ನು ಇರಾನ್ ಮತ್ತು ಇಸ್ರೇಲ್ನಲ್ಲಿರುವ ಭಾರತೀಯರು (Indians) ತನ್ನ ಮಾಹಿತಿಯನ್ನು ಭಾರತೀಯ ದೂತವಾಸ ಕಚೇರಿಯೊಂದಿಗೆ ಹಂಚಿಕೊಳ್ಳಬೇಕೆಂದು ಸೂಚನೆ ನೀಡಿದೆ.

Exit mobile version