ಸಿಎಂ ಬದಲಾವಣೆಯ ಹಿನ್ನೆಲೆ ರಾಜ್ಯಕ್ಕೆ ಅಮಿತ್ ಶಾ ಎಂಟ್ರಿ??

BJP

ರಾಜ್ಯ(State) ರಾಜಕಾರಣದ ವಲಯದಲ್ಲಿ ಮುಖ್ಯಮಂತ್ರಿ(Chiefminister) ಸ್ಥಾನ ಬದಲಾವಣೆಯಾಗಲಿದೆ? ಯಾರು ಸಿಎಂ ಸ್ಥಾನಕ್ಕೆ ಏರಲಿದ್ದಾರೆ?

ಗೃಹ ಸಚಿವ(HomeMinister) ಅಮಿತ್ ಶಾ(Amith Shah) ಆಗಮನದ ಉದ್ದೇಶವೇನು ಎಂಬ ಹಲವು ಚರ್ಚೆಗಳು ಬುಗಿಲೆದ್ದಿದೆ! ಈ ಗಾಳಿಸುದ್ದಿಗಳ ನಡುವೆಯೇ ತಡರಾತ್ರಿ ಕೇಂದ್ರ ಗೃಹ ಸಚಿವ ಕರ್ನಾಟಕಕ್ಕೆ ಆಗಮಿಸಿದ್ದು, ಬಸವರಾಜ್ ಬೊಮ್ಮಾಯಿ(Basavaraj Bommai) ಅವರ ಮನೆಗೆ ಧಾವಿಸಿದರು. ಅಮಿತ್ ಶಾ ಅವರ ಬೆಂಗಳೂರು ಪ್ರವಾಸದ ಉದ್ದೇಶದ ಲೆಕ್ಕಾಚಾರ ಹೀಗಿದೆ. ಸಚಿವರೊಡನೆ ಉತ್ತಮ ಮಾತುಕತೆ ನಡೆಸಿ ರಾಜ್ಯದ ಆಯಾ ಕ್ಷೇತ್ರದಲ್ಲಿ ಜನಪರ ಕೆಲಸ,

ಭ್ರಷ್ಟ ರಹಿತ ಆಡಳಿತ, ಪಕ್ಷದ ವರ್ಚಸ್ಸು ಹೆಚ್ಚಿಸುವ ಕಾರ್ಯಕ್ರಮ ಸೇರಿದಂತೆ ಹಲವು ಮಾನದಂಡ ಇಟ್ಟುಕೊಂಡು ಮಾಹಿತಿ ಸಂಗ್ರಹಿಸಲಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಕನಿಷ್ಠ 150 ಸ್ಥಾನಗಳಲ್ಲಿ ಜಯ ಸಾಧಿಸಬೇಕು. ಮುಂದಿನ ಯುವಪೀಳಿಗೆಗೆ ಬಿಜೆಪಿ ಪಕ್ಷವನ್ನು ಸದೃಢವಾಗಿ ಮುನ್ನಡೆಸಲು 40 ಮಂದಿ ಹೊಸ ಯುವಕರಿಗೆ ಪ್ರಾಮುಖ್ಯತೆ ನೀಡುವುದು ಅಗತ್ಯ ಎಂದು ಹೈಕಮಾಂಡ್ ನಿರ್ಧರಿಸಿದೆ. ಚುನಾವಣೆ ಮುಂದಿಟ್ಟುಕೊಂಡು ಜಾತಿವಾರು ಲೆಕ್ಕಾಚಾರದಂತೆ ರಾಜ್ಯಾಧ್ಯಕ್ಷರನ್ನು ನೇಮಿಸಲು ತಂತ್ರೊಪಾಯಗಳು ನಡೆಯುತ್ತಿವೆ.

ಈ ಸಾಲಿನಲ್ಲಿ ಬಿಜೆಪಿ ಕಾರ್ಯದರ್ಶಿ ಸಿ.ಟಿ ರವಿ ಮತ್ತು ಅರವಿಂದ್ ಬೆಲ್ಲದ್ ಪ್ರಮುಖರಾಗಿದ್ದಾರೆ.

Exit mobile version