ಇಂಗ್ಲೀಷ್‍ಗೆ ಪರ್ಯಾಯವಾಗಿ ಹಿಂದಿ ಬಳಕೆಯಾಗಬೇಕೆ ಹೊರತು ಪ್ರಾದೇಶಿಕ ಭಾಷೆಗಳಲ್ಲ : ಅಮಿತ್ ಶಾ!

amit shah

ಇಂಗ್ಲೀಷ್‍ಗೆ(English) ಪರ್ಯಾಯವಾಗಿ ದೇಶದಲ್ಲಿ ಹಿಂದಿ ಭಾಷೆ(Hindi Language) ಬಳಕೆಯಾಗಬೇಕೆ ಹೊರತು ಇತರ ಪ್ರಾದೇಶಿಕ ಭಾಷೆಗಳಲ್ಲ. ಹೀಗೆ ಮಾಡುವುದರಿಂದ ಹಿಂದಿ ಭಾಷೆಯ ಪ್ರಾಮುಖ್ಯತೆ ಹೆಚ್ಚುತ್ತದೆ. ಸರ್ಕಾರ ನಡೆಸುವ ಭಾಷೆಯೇ ಅಧಿಕೃತ ಭಾಷೆ(Official Language) ಎಂದು ಪ್ರಧಾನಿ(PrimeMinister) ನರೇಂದ್ರ ಮೋದಿ(Narendra Modi) ನಿರ್ಧರಿಸಿದ್ದಾರೆ ಎಂದು ಕೇಂದ್ರ(Central) ಗೃಹ ಸಚಿವ(Home Minister) ಅಮಿತ್ ಶಾ(Amit Shah) ಹೇಳಿದ್ದಾರೆ.

37ನೇ ಸಂಸದೀಯ ಅಧಿಕೃತ ಭಾಷಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಧಿಕೃತ ಭಾಷೆಯಾದ ಹಿಂದಿಯನ್ನು ದೇಶದ ಏಕತೆಯ ಪ್ರಮುಖ ಭಾಗವನ್ನಾಗಿ ಮಾಡುವ ಸಮಯ ಇದೀಗ ಬಂದಿದೆ. ಹೀಗಾಗಿ ಇಂಗ್ಲೀಷ್‍ಗೆ ಪರ್ಯಾಯವಾಗಿ ಹಿಂದಿಯನ್ನು ಹೆಚ್ಚಾಗಿ ಬಳಸಬೇಕು. ಬೇರೆ ಸ್ಥಳೀಯ ಭಾಷೆಗಳ ಪದಗಳನ್ನು ಸ್ವೀಕರಿಸಿ ಹಿಂದಿಯನ್ನು ಹೊಂದಿಕೊಳ್ಳುವಂತೆ ಮಾಡಬೇಕು ಎಂದು ಕರೆ ನೀಡಿದರು.

ಇನ್ನು ಕೇಂದ್ರ ಸಚಿವ ಸಂಪುಟದ ಶೇಕಡಾ 70 ರಷ್ಟು ಕಾರ್ಯಸೂಚಿ ಹಿಂದಿಯಲ್ಲಿ ಸಿದ್ದವಾಗಿದೆ. ಅಧಿಕೃತ ಭಾಷೆಯಾಗಿ ಹಿಂದಿಯನ್ನು ಬೆಳೆಸಬೇಕಿದೆ. ವಿವಿಧ ಭಾಷೆಗಳನ್ನು ಮಾತನಾಡುವ ಜನರು ಪರಸ್ಪರ ಸಂವಹನ ನಡೆಸಿದಾಗ ಅದು ಭಾರತದ ಭಾಷೆಯಾಗುತ್ತದೆ. ಹೀಗಾಗಿ ಹಿಂದಿ ಭಾಷೆಯ ಪ್ರಾಮುಖ್ಯತೆ ಹೆಚ್ಚುತ್ತದೆ ಎಂದು ಗೃಹ ಸಚಿವರು ಹೇಳಿದರು. ಇನ್ನು ಅಮಿತ್ ಶಾ ಮೂರು ಪ್ರಮುಖ ಅಂಶಗಳಿಗೆ ಒತ್ತು ನೀಡಿದರು. ಅವುಗಳೆಂದರೆ.

  1. 1-10ನೇ ಸಂಪುಟಗಳಲ್ಲಿ ಮಾಡಿದ ಶಿಫಾರಸುಗಳನ್ನು ಅನುಷ್ಠಾನ ಮಾಡಲು ಜುಲೈನಲ್ಲಿ ಸಭೆ ನಡೆಸುವುದು.
  2. 9ನೇ ತರಗತಿವರೆಗೆ ಹಿಂದಿ ಭಾಷೆಯ ಪ್ರಾಥಮಿಕ ಜ್ಞಾನ ನೀಡುವುದು.
  3. ಹಿಂದಿ ನಿಘಂಟನ್ನು ಪರಿಷ್ಕರಿಸುವುದು ಮತ್ತು ಪ್ರಕಟಿಸುವುದು.
    ಇನ್ನು ಈ ಸಭೆಯಲ್ಲಿ ಕೇಂದ್ರ ಗೃಹ ಖಾತೆ ರಾಜ್ಯ ಸಚಿವರಾದ ಅಜಯ್‍ಕುಮಾರ್ ಮಿಶ್ರಾ, ನಿಸಿತ್ ಪ್ರಮಾಣಿಕ್, ಅಧಿಕೃತ ಭಾಷಾ ಸಂಸದೀಯ ಸಮಿತಿ ಉಪಾಧ್ಯಕ್ಷ ಭರ್ತೃಹರಿ ಮಹತಾಬ್ ಮತ್ತು ಸಮಿತಿಯ ಇತರ ಸದಸ್ಯರು ಹಾಜರಿದ್ದರು.
Exit mobile version