ರಾಕೇಶ್ ಜುಂಜುನ್ವಾಲಾ ನೀಡಿದ್ದ ‘ಅತ್ಯಂತ ಮೌಲ್ಯಯುತ ಸಲಹೆ’ ಕುರಿತ ಪೋಸ್ಟ್ ಹಂಚಿಕೊಂಡ ಆನಂದ್ ಮಹೀಂದ್ರಾ

Anand Mahindra

ಇತ್ತೀಚೆಗೆ ನಿಧನರಾದ ಭಾರತೀಯ ಮಾರುಕಟ್ಟೆಯ ವಾರೆನ್ ಬಫೆಟ್‌(Waren Buffet) ಎಂದು ಕರೆಯಲ್ಪಡುವ ರಾಕೇಶ್‌ ಜುಂಜುನ್ವಾಲಾ(Rakesh Junjunwala) ಅವರು 2019 ರಲ್ಲಿ ಪ್ರಮುಖ ಮಾಧ್ಯಮ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಹೇಳಿರುವ ಮಾತನ್ನು ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ(Anand Mahindra) ಅವರು ಟ್ವೀಟರ್‌ನಲ್ಲಿ(Twitter) ಹಂಚಿಕೊಂಡಿದ್ದಾರೆ.

ರಾಕೇಶ್‌ ಜುಂಜುನ್ವಾಲಾ ಅವರ ಸಂದರ್ಶನದ ಆಯ್ದ ಭಾಗವನ್ನು ಹಂಚಿಕೊಳ್ಳುತ್ತಾ, “ಇದು ಅತ್ಯಂತ ಮೌಲ್ಯಯುತ ಮತ್ತು ಲಾಭದಾಯಕ ಹೂಡಿಕೆ. ಇದು ಶತಕೋಟಿ ಮೌಲ್ಯದ ಸಲಹೆಯಾಗಿದೆ ಮತ್ತು ಇದರ ಉತ್ತಮ ಭಾಗವೆಂದರೆ, ಇದಕ್ಕೆ ನಿಮ್ಮ ಸಮಯವನ್ನು ಹೂಡಿಕೆ ಮಾಡಬೇಕಾಗುತ್ತದೆ, ನಿಮ್ಮ ಹಣವಲ್ಲ.

ಇದನ್ನೂ ಓದಿ : https://vijayatimes.com/know-more-about-colgate-toothpaste/

#ಸಂಡೇ ಥಾಟ್ಸ್,” ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ ಅವರು ಟ್ವೀಟ್ ಮಾಡಿದ್ದಾರೆ. ಇನ್ನು ಸಂದರ್ಶನದಲ್ಲಿ ರಾಕೇಶ್‌ ಜುಂಜುನ್ವಾಲಾ ಅವರು ತಮ್ಮ ಬದುಕಿನ ಕೆಟ್ಟ ಹೂಡಿಕೆ ನನ್ನ ಆರೋಗ್ಯ. ಹೀಗಾಗಿ ಅದರಲ್ಲಿ ಹೆಚ್ಚು ಹೂಡಿಕೆ ಮಾಡಲು ನಾನು ಪ್ರತಿಯೊಬ್ಬರನ್ನು ಪ್ರೋತ್ಸಾಹಿಸುವುದಾಗಿ ಹೇಳಿದ್ದರು.

ಇನ್ನು ಆಗಸ್ಟ್ 14 ರಂದು ಮುಂಬೈನಲ್ಲಿ ಹೃದಯಾಘಾತದಿಂದ ರಾಕೇಶ್‌ ಜುಂಜುನ್ವಾಲಾ ಅವರು ಕೊನೆಯುಸಿರೆಳೆದಿದ್ದರು. ಅವರು ದೀರ್ಘಕಾಲದ ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿದ್ದರು. ‘ಭಾರತೀಯ ಮಾರುಕಟ್ಟೆಯ ವಾರೆನ್ ಬಫೆಟ್’ ಎಂದು ಕರೆಯಲ್ಪಡುವ ರಾಕೇಶ್‌ ಜುಂಜುನ್ವಾಲಾ ಅವರ ನಿವ್ವಳ ಆಸ್ತಿ ಮೌಲ್ಯವು ಸುಮಾರು $5.8 ಶತಕೋಟಿ ಎಂದು ಅಂದಾಜಿಸಲಾಗಿದೆ.

ಜುಂಜುನ್ವಾಲಾ ಭಾರತದಲ್ಲಿನ ಅತ್ಯಂತ ಪ್ರಭಾವಶಾಲಿ ಹೂಡಿಕೆದಾರರಾಗಿದ್ದರು. ಬ್ಲೂಮ್ಬರ್ಗ್ ಸಂಗ್ರಹಿಸಿದ ಮಾಹಿತಿಯ ಪ್ರಕಾರ, ಟೈಟಾನ್ ಕಂಪನಿಯಲ್ಲಿ ಜುಂಜುನ್ವಾಲಾ ಮತ್ತು ಅವರ ಪತ್ನಿ ರೇಖಾ ಜುಂಜುನ್ವಾಲಾ ಅವರು ಹೂಡಿದ್ದ ಬಂಡವಾಳ ದೊಡ್ಡ ಮತ್ತು ಹೆಚ್ಚು ಲಾಭದಾಯಕ ಹೂಡಿಕೆಗಳಲ್ಲಿ ಒಂದಾಗಿದೆ.

Exit mobile version