ಜೆಡಿಎಸ್ ಸ್ಟ್ರಾಂಗ್ ಎಂದ ಅನಂತ್ ಕುಮಾರ್ ಪುತ್ರಿ: ಮಾಜಿ ಸಿಎಂ ಕುಮಾರಸ್ವಾಮಿ & ಪ್ರಜ್ವಲ್ ರೇವಣ್ಣ ಸ್ವಾಗತ

ಬೆಂಗಳೂರು, ಜು. 29: ಕೇಂದ್ರದ ಮಾಜಿ ಸಚಿವ ದಿ. ಅನಂತ ಕುಮಾರ್ ಅವರ ಪುತ್ರಿ ವಿಜೇತ ಅನಂತ ಕುಮಾರ್ “ಜೆಡಿಎಸ್ ಸ್ಟ್ರಾಂಗ್” ಎಂದು ಟ್ವೀಟ್ ಮಾಡುವ ಮೂಲಕ ಕರ್ನಾಟಕದ ರಾಜಕೀಯದಲ್ಲಿ ಹೊಸ ಕುತೂಹಲವೊಂದಕ್ಕೆ ಕಾರಣರಾಗಿದ್ದಾರೆ.

ರಾಜ್ಯ ರಾಜಕಾರಣದ ಕುರಿತಂತೆ ಎರಡು ಸಾಲಿನಲ್ಲಿ ಟ್ವೀಟ್ ಮಾಡಿರುವ ವಿಜೇತ ಅನಂತ್ ಕುಮಾರ್, “ಕರ್ನಾಟಕದ ರಾಜಕೀಯ ನಿಜವಾಗಿಯೂ ಏಕೆ ಆಸಕ್ತಿದಾಯಕ? ಎಂದು ಪ್ರಶ್ನಿಸಿರುವ ಅವರು, ನಂತರದ ಸಾಲಿನಲ್ಲಿ ಜೆಡಿಎಸ್ ಇನ್ನೂ ಪ್ರಬಲ ರಾಜಕೀಯ ಶಕ್ತಿಯಾಗಿದೆ ಎಂದಿದ್ದಾರೆ. ಆ ಮೂಲಕ ಜೆಡಿಎಸ್ ಸ್ಟ್ರಾಂಗ್ ಎಂದು ವಿಜೇತ ಅನಂತ ಕುಮಾರ್ ಉಲ್ಲೇಖಿಸಿದ್ದಾರೆ.

ಜೆಡಿಎಸ್ ನಲ್ಲಿ ಸಂಚಲನ
ದಿ. ಅನಂತ್ ಕುಮಾರ್ ಪುತ್ರಿ‌ ವಿಜೇತ ಅವರು ಮಾಡಿರುವ ಟ್ವೀಟ್ ಜೆಡಿಎಸ್ ಪಾಳಯದಲ್ಲಿ ಹೊಸ ಸಂಚಲನ‌ ಸೃಷ್ಟಿಸಿದೆ. ಈ ಬಗ್ಗೆ ಟ್ವೀಟ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಅವರು, ದಿ.ಅನಂತಕುಮಾರ್ ಪತ್ನಿ ತೇಜಸ್ವಿನಿ ಅನಂತಕುಮಾರ್ ಹಾಗೂ ಅವರ ಪುತ್ರಿ ವಿಜೇತಾರನ್ನ ಜೆಡಿಎಸ್ ಗೆ ಆಹ್ವಾನಿಸಿದ್ದಾರೆ. ಅವರು ಪಕ್ಷಕ್ಕೆ ಬಂದ್ರೆ ಒಳ್ಳೆಯದು. ವಿಜೇತಾ ಮತ್ತು ತಾಯಿ ನಮ್ಮ ಪಕ್ಷಕ್ಕೆ ಬಂದ್ರೆ ಖುಷಿಯಾಗಿ ಸೇರ್ಪಡೆ ಮಾಡಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ.

ಮತ್ತೊಂದೆಡೆ ದಿ.ಅನಂತ ಕುಮಾರ್ ಪುತ್ರಿ ವಿಜೇತ ಅವರು ಮಾಡಿರುವ ಟ್ವೀಟ್ ಗೆ ರಿಪ್ಲೇ ಮಾಡಿರುವ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ, ಜೆಡಿಎಸ್ ಪಕ್ಷದ ಶಕ್ತಿಯನ್ನು ಗುರುತಿಸಿದ್ದಕ್ಕೆ ಧನ್ಯವಾದಗಳು. ಅನಂತ್ ಕುಮಾರ್ ಅವರು ಸಂಸದರಾಗಿದ್ದ ವೇಳೆ ರಾಜ್ಯದ ಹಿತಾಸಕ್ತಿಯ ಪರ ಕಾಳಜಿ ತೋರುತ್ತಿದ್ದರು. ಈಗ 25 ಮಂದಿ ಬಿಜೆಪಿ ಸಂಸದರಿದ್ದರು ರಾಜ್ಯದ ಪರವಾಗಿ ದನಿ ಎತ್ತುತ್ತಿಲ್ಲ. ಹೀಗಾಗಿ ಅನಂತ್ ಕುಮಾರ್ ಅವರು ರಾಜ್ಯಕ್ಕಾಗಿ ನೀಡಿದ ಕೊಡುಗೆಗೆ ನಾವು ಸದಾ ಕೃತಜ್ಞರಾಗಿದ್ದೇವೆ ಎಂದಿದ್ದಾರೆ.

Exit mobile version