ವಿಶಿಷ್ಟ ಶಿವಲಿಂಗಗಳ ಬಗ್ಗೆ ಕೇಳಿದ್ದೀರಾ? ; ಇಲ್ಲಿದೆ ಓದಿ ಅಚ್ಚರಿ ಮಾಹಿತಿ

India : ಸಾಮಾನ್ಯವಾಗಿ, ಸೋಮವಾರದ ದಿನ ಶಿವ ಭಕ್ತರು ಉಪವಾಸ ಮಾಡುವುದು,

ಶಿವಲಿಂಗಕ್ಕೆ(Shivalinga) ಅಭಿಷೇಕವನ್ನ ಮಾಡುವುದು ಮತ್ತು ವಿಶೇಷ ಪ್ರಾರ್ಥನೆಯನ್ನು ಸಲ್ಲಿಸುವುದು, ಇಂತಹ ವಿಧಿಗಳನ್ನು ಆಚರಿಸುತ್ತಾರೆ.

ಈ ದಿನ ಶಿವಲಿಂಗದ ಪೂಜೆಗೆ ಹೆಚ್ಚಿನ ಮಹತ್ವವನ್ನು ನೀಡಲಾಗುತ್ತದೆ. ಎಲ್ಲರೂ ಶಿವಲಿಂಗವನ್ನು ನೋಡಿಯೇ ಇರುತ್ತಾರೆ,

ಆದರೆ ಕೆಲವು ಅತೀಂದ್ರಿಯ ಹಾಗೂ ಪವಾಡದ ಶಿವಲಿಂಗಗಳ ಬಗ್ಗೆ ನೀವು ಕೇಳಿರಲಿಕ್ಕಿಲ್ಲ. ಅಂತಹ ಕೆಲವು ಅದ್ಭುತ ಶಿವಲಿಂಗಗಳ ಬಗ್ಗೆ ನಾವಿಂದು ತಿಳಿಸುತ್ತಿದ್ದೇವೆ.


ಬಿಜ್ಲಿ ಮಹಾದೇವ ದೇವಾಲಯ : ಅಪಾರ ಶಕ್ತಿಯುಳ್ಳ ಶಿವಲಿಂಗಗಳಲ್ಲಿ ಈ ಶಿವಲಿಂಗವೂ ಒಂದು. ಈ ದೇವಾಲಯವು ಹಿಮಾಚಲ ಪ್ರದೇಶದ(Himachal Pradesh) ಕುಲ್ಲು ಪರ್ವತದ ಮೇಲಿದೆ.

ಇಲ್ಲಿ ಪ್ರತಿವರ್ಷವೂ ಶಿವಲಿಂಗಕ್ಕೆ ಮಿಂಚು ಬಂದು ಹೊಡೆಯುತ್ತದೆ, ಮಿಂಚು ಬಂದು ಶಿವಲಿಂಗಕ್ಕೆ ಅಪ್ಪಳಿಸುವುದರಿಂದ ಶಿವಲಿಂಗವು ಚೂರಾಗುತ್ತದೆ.

ಇದನ್ನೂ ಓದಿ : https://vijayatimes.com/let-bommai-resign/

ಆದರೆ ದೇವಾಲಯಕ್ಕೆ ಏನೂ ಆಗುವುದಿಲ್ಲ ಎನ್ನುವುದೇ ವಿಶೇಷ!

ಹಾಗಾಗಿ, ಹಿಮಾಚಲದಲ್ಲಿರುವ ಈ ದೇವಾಲಯವನ್ನು ಬಿಜ್ಲಿ ಮಹಾದೇವ ಮಂದಿರ ಎನ್ನುವ ಹೆಸರಿನಿಂದ ಕರೆಯಲಾಗುತ್ತದೆ.

https://youtu.be/NhD-jfgjBXU ವ್ಯೆವಸ್ತೆ ಕಾಣದ ಮಳವಳ್ಳಿ ತಾಲೂಕು, ಕಸಬಾ ಹೋಬಳಿ, ಬಾಣಸಮುದ್ರ ಗ್ರಾಮ ಶಾಲೆ!


ಲುಟರೂ ಮಹಾದೇವ ದೇವಾಲಯ : ಲುಟರೂ ಮಹಾದೇವ ದೇವಸ್ಥಾನವು ಹಿಮಾಚಲದ ಅರ್ಕೀಯ ಸೋಲನ್ ಜಿಲ್ಲೆಯಲ್ಲಿದೆ. ಗುಹೆಯೊಳಗಿನ ಈ ದೇವಾಲಯದ ಶಿವಲಿಂಗವು ಅಸಹಜ ಶಿವಲಿಂಗವಾಗಿದ್ದು,

ಈ ಶಿವಲಿಂಗಲ್ಲಿ ಹಲವಾರು ರಂಧ್ರಗಳಿವೆ. ಆದರೆ, ಈ ಶಿವಲಿಂಗ ಹೆಚ್ಚು ಪ್ರಸಿದ್ಧಿಯಾಗಲು ಇನ್ನೊಂದು ಮುಖ್ಯ ಕಾರಣವಿದೆ.

ಅದೇನೆಂದರೆ, ಈ ಶಿವಲಿಂಗವು ಸಿಗರೇಟ್‌ನ್ನು ಸೇದುತ್ತದೆ. ಹೌದು, ಶಿವ ಭಕ್ತರು ಈ ದೇವಾಲಯದಲ್ಲಿ ಸಿಗರೇಟನ್ನು ಸುಟ್ಟು ಅದನ್ನು ಶಿವಲಿಂಗದಲ್ಲಿನ ರಂಧ್ರದಲ್ಲಿ ಹಾಕುತ್ತಾರೆ,

ಸ್ವಲ್ಪ ಸಮಯದ ನಂತರ ಸಿಗರೇಟು ಹೊಗೆಯಾಡಲು ಪ್ರಾರಂಭಿಸುತ್ತದಂತೆ. ನಿಜವಾಗಿಯೂ ಒಬ್ಬ ವ್ಯಕ್ತಿ ಸಿಗರೇಟು ಸೇದುವ ರೀತಿ, ಈ ಶಿವಲಿಂಗವು ಸಿಗರೇಟನ್ನು ಸೇದುತ್ತದೆ ಎನ್ನುವ ನಂಬಿಕೆ ಭಕ್ತರದ್ದು!


ಅಚಲೇಶ್ವರ ಮಹಾದೇವ ದೇವಾಲಯ : ರಾಜಸ್ಥಾನದ(Rajasthan) ಧೌಲ್‌ಪುರದ ಅಚಲೇಶ್ವರ ಮಹಾದೇವ ದೇವಾಲಯ ಬಹಳ ಪ್ರಸಿದ್ಧವಾಗಿದೆ.

ಏಕೆಂದರೆ, ಈ ದೇವಾಲಯದಲ್ಲಿನ ಶಿವಲಿಂಗವು ದಿನಕ್ಕೆ ಮೂರು ಬಾರಿ ಬಣ್ಣವನ್ನು ಬದಲಾಯಿಸುತ್ತದೆ ಎನ್ನುವ ನಂಬಿಕೆಯಿದೆ. ಬೆಳಗ್ಗೆ ಶಿವಲಿಂಗದ ಬಣ್ಣ ಕೆಂಪಗಿದ್ದರೆ, ಮಧ್ಯಾಹ್ನ ಕೇಸರಿ ಹಾಗೂ ಸಂಜೆ ಶಿವಲಿಂಗವು ನೀಲಿ ಬಣ್ಣಕ್ಕೆ ತಿರುಗುತ್ತದೆ.

https://youtu.be/sZSXRbKedtc ಬೆಂಗಳೂರು : ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ರೈಲ್ವೆ ಅಂಡರ್ ಪಾಸ್ನಲ್ಲಿ ಸಮಸ್ಯೆಗಳ ಸುರಿಮಳೆ!


ಮತಂಗೇಶ್ವರ ಶಿವಲಿಂಗ : ಮಧ್ಯಪ್ರದೇಶದ(Madya Pradesh) ಖುಜರಾಹೋದಲ್ಲಿನ ಮತಂಗೇಶ್ವರ ಶಿವಲಿಂಗವು, ಪ್ರತಿವರ್ಷ ಎಳ್ಳಿನ ಆಕಾರದಲ್ಲಿ ಬೆಳೆಯುತ್ತಿದೆ ಎಂದು ಹೇಳಲಾಗುತ್ತದೆ.

ಈ ಶಿವಲಿಂಗವು ಹೆಚ್ಚು ಕಡಿಮೆ ನೆಲದೊಳಗೆ 9 ಅಡಿಯಷ್ಟಿದ್ದರೆ ಇದ್ದರೆ, ಭೂಮಿಯ ಮೇಲೂ ಕೂಡ ಅಷ್ಟೇ ಎತ್ತರವನ್ನು ಹೊಂದಿದೆ. ಈ ಶಿವಲಿಂಗವನ್ನು ಸಾಕ್ಷಾತ್ ಭಗವಾನ್‌ ರಾಮನೇ ಪೂಜಿಸುತ್ತಿದ್ದನೆಂದು ಹೇಳಲಾಗುತ್ತದೆ.


ಭೂತೇಶ್ವರ ಶಿವ ಮಂದಿರ : ಭೂತೇಶ್ವರ ಶಿವ ದೇವಸ್ಥಾನವು ಛತ್ತೀಸ್‌ಗಢದ ಮರೋದಾ ಗ್ರಾಮದಲ್ಲಿದೆ. ಈ ಮಂದಿರದಲ್ಲಿನ ಶಿವಲಿಂಗವು ಪ್ರತಿವರ್ಷ ಸುಮಾರು 6 ರಿಂದ 8 ಇಂಚುಗಳಷ್ಟು ಬೆಳೆಯುತ್ತದಂತೆ.

ಪ್ರಸ್ತುತ ಈ ಶಿವಲಿಂಗವು 18 ಅಡಿಯಷ್ಟು ಎತ್ತರವಾಗಿದ್ದು, ರಾಜ್ಯ ಕಂದಾಯ ಇಲಾಖೆಯು ಪ್ರತಿವರ್ಷ ಈ ಶಿವಲಿಂಗದ ಅಳತೆಯ ದಾಖಲೆ ಮಾಡುತ್ತಿದೆ.


ಮಹಾದೇವಶಾಲಾ ಧಾಮ : ಭಾರತದಲ್ಲಿ ಅನೇಕ ಮುಕ್ಕಾದ ಶಿವಲಿಂಗಗಳಿವೆ, ಜೊತೆಗೆ ಇವುಗಳನ್ನು ಪೂಜಿಸಲಾಗುತ್ತದೆ ಎನ್ನುವುದು ವಿಶೇಷ. ಮಹಾದೇವಶಾಲಾ ಧಾಮವು ಜಾರ್ಖಂಡ್‌ನ ಗೋಯಿಲ್‌ ಕೆರಾದಲ್ಲಿದೆ.

ಇಲ್ಲಿಯೂ ಸಹ ಛಿದ್ರಗೊಂಡ ಅಥವಾ ಮುಕ್ಕಾದ ಶಿವಲಿಂಗವನ್ನು ಪೂಜಿಸಲಾಗುತ್ತದೆ.

ಇದನ್ನೂ ಓದಿ : https://vijayatimes.com/un-report-over-population/

ಶಿವಲಿಂಗದ ಎರಡು ತುಣುಕುಗಳನ್ನು ಇಲ್ಲಿ ಪೂಜಿಸಲಾಗುತ್ತದೆ.

ಇನ್ನು, ಜಾರ್ಖಂಡ್‌ನ ದಿಯೋಘರ್ ಜಿಲ್ಲೆಯಲ್ಲಿನ ಬಾಸುಕೀನಾಥ ದೇವಾಲಯದಲ್ಲಿ ಸಹ ತುಂಡಾದ ಶಿವಲಿಂಗವನ್ನು ಪೂಜಿಸಲಾಗುತ್ತದೆ.

Exit mobile version