ನಲ್ಲೂರು ಸೆ 24 : ಪತ್ನಿ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ವಿಡಿಯೋವನ್ನು ಪತಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ವಿಕೃತಿ ಮೆರೆದಿರುವ ಘಟನೆ ಆಂಧ್ರ ಪ್ರದೇಶದ ನಲ್ಲೂರು ಜಿಲ್ಲೆಯಲ್ಲಿ ನಡೆದಿದೆ.
ಮೃತಪಟ್ಟವರನ್ನು ಕೊಂಡಮ್ಮ ಎಂದು ಗುರುತಿಸಲಾಗಿದ್ದು, ಕಳೆದ ಕೆಲವು ವರ್ಷಗಳಿಂದ ಪತಿ ಮೊದ್ದು ಪೆಂಚಲಯಾ ಆಕೆಯ ಶೀಲ ಶಂಕಿಸಿ ಆಗಾಗ ಜಗಳವಾಡುತ್ತಿದ್ದ, ಮಂಗಳವಾರ ಕೂಡ ಹೀಗೆ ಜಗಳವಾಡಿ ನೀನು ಸತ್ತರೆ ಸಮಸ್ಯೆಯೆಲ್ಲಾ ಪರಿಹಾರವಾಗುತ್ತದೆ ಎಂದು ಗಂಡ ದೂಷಿಸಿದ್ದು, ಇದರಿಂದ ಮನನೊಂದ ಪತ್ನಿ, ಗಂಡನ ಎದುರೇ ಸೀರೆಯಿಂದ ಫ್ಯಾನ್‌ಗೆ ನೇಣುಹಾಕಿಕೊಂಡಿದ್ದಾಳೆ. ಇಷ್ಟೆಲ್ಲಾ ಗಂಡನ ಕಣ್ಣುಮುಂದೆ ನಡೆಯುತ್ತಿದ್ದರೂ ಕೂಡ ಅವನು ಅದನ್ನು ತಡೆಯದೆ ಎಲ್ಲಾ ದೃಶ್ಯವನ್ನು ಮೊಬೈಲ್‌ನಲ್ಲಿ ಚಿತ್ರೀಕರಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ವಿಕೃತಿ ಮೆರೆದ್ದಿದ್ದಾನೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಸಾಕಷ್ಟು ಜನ ಆಕ್ರೋಶ ವೆಕ್ತಪಡಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪತಿಯನ್ನು ಅಟ್ಮಕೂರು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.