ವೃದ್ದರು ಮತ್ತು ವಿಧವೆಯರಿಗೆ ಭರ್ಜರಿ ಗಿಫ್ಟ್ ನೀಡಿದ ಸರ್ಕಾರ

ಅಮರಾವತಿ ಡಿ 16 : ಆಂಧ್ರ ಪ್ರದೇಶ ಮುಖ್ಯಮಂತ್ರಿ ಹೊಸ ವರ್ಷಕ್ಕೆ ರಾಜ್ಯದ ಜನತೆಗೆ ಹೊಸ ಸುದ್ದಿಯೊಂದನ್ನು ನೀಡಿದ್ದಾರೆ. 2022ರ ಹೊಸ ವರ್ಷಕ್ಕೆ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಭರ್ಜರಿ ಗಿಫ್ಟ್ ನೀಡಿದ್ದಾರೆ. ವೃದ್ಧರು ಮತ್ತು ವಿಧವೆಯರಿಗೆ ನೀಡಲಾಗುತ್ತಿರುವ ಮಾಸಿಕ ಪಿಂಚಣಿ( Social Security Pension)ಯನ್ನು 2,500 ರೂ. ಗಳಿಗೆ ಹೆಚ್ಚಿಸಿ ಆದೇಶ ಹೊರಡಿಸಿದ್ದಾರೆ. ಹೊಸ ವರ್ಷದ ಜನವರಿಂದ 250 ರೂ. ಸಾಮಾಜಿಕ ಭದ್ರತಾ ಪಿಂಚಣಿಯನ್ನು ಹೆಚ್ಚಿಸಲಾಗಿದೆ.  

ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳು ಮತ್ತು ಎಸ್ಪಿಗಳ ಜೊತೆಗೆ ವಿಡಿಯೋ ಕಾನ್ಫರೆನ್ಸ್ ಸಭೆ ನಡೆಸಿದ ಜಗನ್ ಯಾವ ಯಾವ ಯೋಜನೆಗಳನ್ನು ಯಾವಾಗ ಜಾರಿಗೆ ತರಬೇಕು ಎಂಬ ತೀರ್ಮಾನಗಳ ಬಗ್ಗೆ ತಿಳಿಸಿದ್ದಾರೆ.  ಜನವರಿ 31ರೊಳಗೆ ‘ಪೆಡಲಂಡಿರಿಕಿ ಇಲ್ಲು ವಸತಿ ಯೋಜನೆ’ಯಡಿ ಮನೆಗಳ ನಿರ್ಮಾಣ ಪ್ರಾರಂಭಿಸಲು ಸಿಎಂ ಕೋರಿದ್ದಾರೆ. ಫಲಾನುಭವಿಗಳಿಗೆ ಬ್ಯಾಂಕ್‌ಗಳಿಂದ 25 ಪೈಸೆ ಬಡ್ಡಿಯಲ್ಲಿ ವಸತಿ ಸಾಲ ನೀಡುವಂತೆ ಅವರು ತಿಳಿಸಿದ್ದಾರೆ.

ಇದೇ ತಿಂಗಳ ಡಿ.21ರಂದು ‘ಸಂಪೂರ್ಣ ಗೃಹ ಹಕ್ಕು ಯೋಜನೆ’ಯನ್ನು ಜಾರಿಗೆ ತರಲಿದ್ದೇವೆ. ಇಲ್ಲಿಯವರೆಗೂ ಸರ್ಕಾರದಿಂದ ಬೇರೆ ಯಾವುದೇ ಯೋಜನೆಗಳ ಲಾಭ ಪಡೆಯದವರಿಗೆ ಇದೇ ತಿಂಗಳು ಅವರಿಗೆ ಈ ಯೋಜನೆಯಲ್ಲಿ ಮನೆಗಳನ್ನು ನೀಡುವ ಕಾರ್ಯಕ್ರಮ ಮಾಡಲಾಗುವುದು ಎಂದು ಹೇಳಿದ್ದಾರೆ. ಜನವರಿ 9ರಂದು 45 ರಿಂದ 60 ವರ್ಷ ವಯೋಮಿತಿಯ ಕಡುಬಡವ(ECB) ಮಹಿಳೆಯರಿಗೆ ವರ್ಷಕ್ಕೆ 15 ಸಾವಿರ ರೂ. ಹಣ ನೀಡಲಿದ್ದೇವೆ. ಇದೇ ರೀತಿ 3 ವರ್ಷಗಳವರೆಗೂ ನೀಡಲಾಗುವುದು. ಜನವರಿಯಲ್ಲಿಯೇ ‘ರೈತ ಭರೋಸಾ ಯೋಜನೆ’(Rythu Bharosa)ಯ 3ನೇ ಕಂತು ಬಿಡುಗಡೆ ಮಾಡಲಾಗುವುದು ಎಂದು ಘೋಸಿಸಿದ್ದಾರೆ.

Exit mobile version