32 ಕೆ.ಜಿ ತೂಕ ಇಳಿಸಿಕೊಂಡು 2300 ಕೋಟಿ ರೂ. ಯೋಜನೆಗೆ ಅನುಮೋದನೆ ಪಡೆದುಕೊಂಡ ಉಜ್ಜಯಿನಿ ಸಂಸದ!

Ujjain

Madhya Pradesh : ಅಚ್ಚರಿಯ ಬೆಳವಣಿಗೆಯಲ್ಲಿ ಉಜ್ಜಯಿನಿ ಲೋಕಸಭಾ(Anil Accepts Gadkari Challenge) ಕ್ಷೇತ್ರದ ಸಂಸದ ತನ್ನ ದೇಹದ ತೂಕವನ್ನು 32 ಕೆಜಿ ಇಳಿಸಿಕೊಂಡು,

ಕೇಂದ್ರ ಸರ್ಕಾರದಿಂದ (Central Government) 2300 ಕೋಟಿ ರೂಪಾಯಿ ಯೋಜನೆಗಳಿಗೆ ಅನುಮೋದನೆ ಪಡೆದುಕೊಂಡಿದ್ದಾರೆ. ಈ ಸಂಗತಿ ಅಚ್ಚರಿ ಎನಿಸಿದರು ಸತ್ಯ.

ಕೇಂದ್ರ ಸಚಿವ ನಿತಿನ್ ಗಡ್ಕರಿ (Nithin Gadkari) ಸವಾಲಿನ ಮೇರೆಗೆ 32 ಕೆಜಿ ತೂಕ ಇಳಿಸಿಕೊಂಡ ಉಜ್ಜಯಿನಿ ಸಂಸದ ಅನಿಲ್ ಫಿರೋಜಿಯಾ ಅವರಿಗೆ 2,300 ಕೋಟಿ ರೂ. ಯೋಜನೆಗೆ ಅನುಮೋದನೆ ನೀಡಲಾಗಿದೆ.

ತಮ್ಮ ಕ್ಷೇತ್ರದ ಅಭಿವೃದ್ಧಿಯ ಪ್ರಸ್ತಾಪಗಳಿಗೆ ಅನುಮೋದನೆ ಪಡೆಯುವುದಕ್ಕೆ ಪ್ರತಿಯಾಗಿ ತೂಕ ಇಳಿಸಿಕೊಳ್ಳುವ ಸವಾಲನ್ನು ಸಂಸದ ಅನಿಲ್ ಫಿರೋಜಿಯಾ ಅವರಿಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ನೀಡಿದ್ದರು.

https://youtu.be/INGJxZauZx0

ಈ ಸವಾಲು ಸ್ವೀಕರಿಸಿದ ಸಂಸದ ಅನಿಲ್ ಫಿರೋಜಿಯಾ, 32 ಕೆಜಿ (Anil Accepts Gadkari Challenge) ದೇಹ ತೂಕವನ್ನು ಕಳೆದುಕೊಂಡಿದ್ದಾರೆ ಮತ್ತು ಉಜ್ಜಯಿನಿ ಕ್ಷೇತ್ರಕ್ಕೆ 2,300 ಕೋಟಿ ಮೌಲ್ಯದ ಯೋಜನೆಗೆ ಒಪ್ಪಿಗೆ ಪಡೆದಿದ್ದಾರೆ.

ಇದನ್ನೂ ಓದಿ : https://vijayatimes.com/health-tips-of-drinking-water/

ಈ ಕುರಿತು ಮಾತನಾಡಿರುವ ಅನಿಲ್ ಫಿರೋಜಿಯಾ, “ನಾನು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿದ್ದೇನೆ ಮತ್ತು ಅವರಿಗೆ ನನ್ನ ದೈಹಿಕ ತೂಕದ ಬಗ್ಗೆ ತಿಳಿಸಿದ್ದೇನೆ,

ಅವರು ತುಂಬಾ ಸಂತೋಷವಾಗಿದ್ದಾರೆ” ಎಂದು ಉಜ್ಜಯಿನಿಯನ್ನು ಪ್ರತಿನಿಧಿಸುವ ಭಾರತೀಯ ಜನತಾ ಪಕ್ಷದ ನಾಯಕ ಫಿರೋಜಿಯಾ ಅವರು ತಿಳಿಸಿದ್ದಾರೆ.

ಸಂಸದ ತೂಕ ಇಳಿಸಿಕೊಂಡಿದ್ದು ಹೇಗೆ? : ನಾನು ಬೆಳಿಗ್ಗೆ 5.30ಕ್ಕೆ ಎದ್ದೇಳುತ್ತೇನೆ ಮತ್ತು ನಂತರ ಬೆಳಗಿನ ನಡಿಗೆಗೆ ಹೋಗುತ್ತೇನೆ. ನನ್ನ ಬೆಳಗಿನ ತಾಲೀಮು ಓಟ, ವ್ಯಾಯಾಮ ಮತ್ತು ಯೋಗವನ್ನು ಒಳಗೊಂಡಿರುತ್ತದೆ.

ನಾನು ಆಯುರ್ವೇದ ಆಹಾರ ಚಾರ್ಟ್ ಅನ್ನು ಅನುಸರಿಸುತ್ತೇನೆ. ನಾನು ಲಘು ಉಪಹಾರವನ್ನು ತೆಗೆದುಕೊಳ್ಳುತ್ತೇನೆ.

ಇದನ್ನೂ ಓದಿ : https://vijayatimes.com/report-on-bilkis-bano-case/

ಮಧ್ಯಾಹ್ನ ಮತ್ತು ರಾತ್ರಿಯ ಊಟಕ್ಕೆ ನಾನು ಸಲಾಡ್ ಅನ್ನು ತಿನ್ನುತ್ತೇನೆ. ಹಸಿರು ತರಕಾರಿಗಳ ಬಟ್ಟಲು, ಮತ್ತು ಮಿಶ್ರ ಧಾನ್ಯಗಳಿಂದ ಮಾಡಿದ ಒಂದು ರೊಟ್ಟಿ. ಕೆಲವೊಮ್ಮೆ ನಾನು ಕ್ಯಾರೆಟ್ ಸೂಪ್ ಅಥವಾ ಡ್ರೈ ಫ್ರೂಟ್ಸ್ ಅನ್ನು ಮಧ್ಯದಲ್ಲಿ ತೆಗೆದುಕೊಳ್ಳುತ್ತೇನೆ…” ಎಂದು ಅನಿಲ್ ಫಿರೋಜಿಯಾ ಹೇಳಿಕೊಂಡಿದ್ದಾರೆ.
Exit mobile version