ವಿಮಾನದಲ್ಲಿ ಪ್ರಾಣಿಗಳು: ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ 234 ಪ್ರಾಣಿಗಳ ವಶ ಪ್ರಯಾಣಿಕನ ಬ್ಯಾಗ್ ಅಲ್ಲಿ ಜೀವಂತ ಪ್ರಾಣಿಗಳು ಮತ್ತು ಸರೀಸೃಪಗಳು

Bengaluru: ಬೆಂಗಳೂರಿನ ಕೆಂಪೇಗೌಡ ನಿಲ್ದಾಣಕ್ಕೆ ಬಂದ ಪ್ರಯಾಣಿಕನ ಬ್ಯಾಗ್​ ಅನ್ನು ತೆಗೆದು ನೋಡಿದಾಗ (animals on board) ಅದರಲ್ಲಿ ಜೀವಂತ ಪ್ರಾಣಿಗಳು ಮತ್ತು ಸರೀಸೃಪಗಳು

ಕಂಡುಬಂದಿದೆ. ಮರಿ ಕಾಂಗರೊಂದು (Kangaroo) ಉಸಿರುಗಟ್ಟಿ ಮೃತಪಟ್ಟಿತ್ತು ಎಂದು ಕಸ್ಟಮ್ಸ್ (Customs) ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ

ಎಂದು ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ.

ಆರೋಪಿಯ ಟ್ರ್ಯಾಲಿ ಬ್ಯಾಗ್​​ನಲ್ಲಿ (Trolley Bag) ಹೆಬ್ಬಾವು, ಊಸರವಳ್ಳಿ, ಆಮೆ, ಮೊಸಳೆ ಮರಿ ಇರಲು ಸಾಧ್ಯವಿಲ್ಲ ಎಂದು ಭಾವಿಸಬೇಡಿ ಯಾಕಂದರೆ ಈ ಸಂಗತಿಯೊಂದು ನಡೆದಿರುವುದು

ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೌದು ಅನುಮಾನವೇ ಬೇಡ. ಬರೀ ಇಷ್ಟೇ ಅಲ್ಲ, ಒಟ್ಟು 234 ಪ್ರಾಣಿಗಳು ಇದ್ದುದು ಪತ್ತೆಯಾಗಿದ್ದು, ವಿಮಾನ ನಿಲ್ದಾಣದಲ್ಲಿ ಜಪ್ತಿ ಮಾಡಲಾಗಿದೆ.

ಕೆಂಪೇಗೌಡ ಏರ್‌ಪೋರ್ಟ್‌ನ (Kempegowda Airport) ಕಸ್ಟಮ್ಸ್‌ ಅಧಿಕಾರಿಗಳ ಕಾರ್ಯಾಚರಣೆಯಲ್ಲಿ ಇಂಥದ್ದೊಂದು ಅಪರೂಪದ ವಿದ್ಯಮಾನ ಬೆಳಕಿಗೆ ಬಂದಿದೆ.

ವಿದೇಶದಿಂದ ಆಗಮಿಸಿದ್ದ ಪ್ರಯಾಣಿಕರೊಬ್ಬರು ಈ ಪ್ರಾಣಿಗಳನ್ನು ಟ್ರ್ಯಾಲಿ ಬ್ಯಾಗ್‌ನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದರು. ಬ್ಯಾಂಕಾಕ್‌ನಿಂದ (Bangkok)ಎಫ್‌ಡಿ 137’ ವಿಮಾನದಲ್ಲಿ ಬಂದಿದ್ದ ಪ್ರಯಾಣಿಕ ವಿವಿಧ

ರೇಷನ್ ಕಾರ್ಡ್ ದೋಖಾ! ರೇಷನ್ ಕಾರ್ಡ್ ಬಳಕೆದಾರರ ಬ್ಯಾಂಕ್ ಖಾತೆಗೆ ಖನ್ನಾ ಹಾಕ್ತಿದ್ದಾರೆ ಖದೀಮರು

ಪ್ರಾಣಿಗಳನ್ನು ಟ್ರ್ಯಾಲಿ ಬ್ಯಾಗ್​ನಲ್ಲಿ ಮರೆಮಾಚಿ ಸಾಗಿಸುತ್ತಿದ್ದ ವೇಳೆ ಅನುಮಾನಗೊಂಡು ಪರಿಶೀಲನೆ ನಡೆಸಿದಾಗ ಪ್ರಾಣಿಗಳು ಪತ್ತೆಯಾಗಿವೆ. ಆರೋಪಿಯು ಬಾಕ್ಸ್‌ಗಳಲ್ಲಿ (Box) ಪ್ರಾಣಿಗಳನ್ನು

ತುಂಬಿಕೊಂಡು ದೊಡ್ಡ ಬ್ಯಾಗ್​ನಲ್ಲಿಟ್ಟುಕೊಂಡು (animals on board) ಬಂದಿದ್ದ.

ಆರೋಪಿಯು ತಮಿಳುನಾಡು (Tamilnadu) ಮೂಲದ 32 ವರ್ಷ ವಯಸ್ಸಿನ ವ್ಯಕ್ತಿ ಎಂದು ಹೇಳಲಾಗಿದೆ. ಸದ್ಯ ಕಸ್ಟಮ್ಸ್ ಅಧಿಕಾರಿಗಳು ಪ್ರಾಣಿಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ವಶಕ್ಕೆ ನೀಡಿದ್ದು,

ಹೆಚ್ಚಿನ ವಿಚಾರಣೆಗೆ ಆರೋಪಿಯನ್ನು ಕಸ್ಟಮ್ಸ್ ಕಾಯ್ದೆಯ ಸೆಕ್ಷನ್ (Section) 104 ರ ಅಡಿಯಲ್ಲಿ ವಶಕ್ಕೆ ಪಡೆದು ತನಿಖೆ ಮುಂದುವರಿಸಲಾಗುತ್ತಿದೆ.

ಆರೋಪಿಯ ಬ್ಯಾಗ್ (Bag)​ ಅನ್ನು ತೆರೆದು ನೋಡಿದಾಗ ಅದರಲ್ಲಿ ಜೀವಂತ ಪ್ರಾಣಿಗಳು ಮತ್ತು ಸರೀಸೃಪಗಳು ಕಂಡುಬಂದವು.ಇನ್ನು ಮರಿ ಕಾಂಗರೊಂದು ಉಸಿರುಗಟ್ಟಿ ಮೃತಪಟ್ಟಿದೆ ಎಂದು ಕಸ್ಟಮ್ಸ್

ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬ್ಯಾಂಕಾಕ್‌ನಲ್ಲಿ ಈ ಬ್ಯಾಗ್ ತನಗೆ ಹಸ್ತಾಂತರಿಸಲ್ಪಟ್ಟಿತ್ತು. ಅದರಲ್ಲಿ ಏನಿತ್ತು ಎಂಬುದು ತನಗೆ ತಿಳಿದಿಲ್ಲ ಎಂದು ಆರೋಪಿಯು ವಿಚಾರಣೆ ವೇಳೆ ಹೇಳಿಕೊಂಡಿದ್ದಾನೆ.

ಜೊತೆಗೆ ಬ್ಯಾಗನ್ನು ಬೆಂಗಳೂರಿಗೆ (Bengaluru) ಕೊಂಡೊಯ್ಯಲು ತನಗೆ ಅದನ್ನು ಕೊಟ್ಟವರ ಸೂಚನೆ ಇತ್ತು ಎಂದೂ ಹೇಳಿದ್ದಾನೆ. ಆದರೆ ಆತನ ಹೇಳಿಕೆಗಳ ಬಗ್ಗೆ ತನಿಖಾಧಿಕಾರಿಗಳು ತೃಪ್ತಿಹೊಂದಿಲ್ಲ.

ವಿಮಾನ ನಿಲ್ದಾಣದ ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಭವ್ಯಶ್ರೀ ಆರ್.ಜೆ

Exit mobile version