ಅಂಜೂರ ಜ್ಯೂಸ್ ಕುಡಿಯಿರಿ, ಆರೋಗ್ಯವಾಗಿರಿ!

ಅಂಜೂರ ಹಣ್ಣಿನಿಂದ ಮಾಡಿದ ಜ್ಯೂಸ್ ಕುಡಿಯುವುದರಿಂದ ನಮ್ಮ ದೇಹಕ್ಕೆ ಯಥೇಷ್ಟವಾದ ಪೋಷಕಾಂಶಗಳು ಹಾಗೂ ಖನಿಜಗಳು ಸಿಗುತ್ತವೆ. ಈ ಹಣ್ಣಿನಲ್ಲಿ ವಿಟಮಿನ್‌-ಸಿ, ಕ್ಯಾಲ್ಸಿಯಂ, ಪೊಟಾಸಿಯಂ ರಂಜಕ ಹಾಗೂ ಫೈಟೊನ್ಯೂಟ್ರಿಯೆಂಟ್‌ಗಳು ಬೇಕಾದಷ್ಟಿವೆ.  ಪಿತ್ತಜನಕಾಂಗದ ಕೆಲಸವನ್ನು ಸರಾಗವಾಗಿ ನಡೆಸಲು ಇದು ಸಹಾಯಕವಾಗಿದೆ. ರೋಗನಿರೋಧಕ ಶಕ್ತಿಯನ್ನು ಇದು ಹೆಚ್ಚಿಸುತ್ತದೆ. ದೇಹದಲ್ಲಿರುವ ಕೊಬ್ಬನ್ನು ಕರಗಿಸುತ್ತದೆ. ರಕ್ತವನ್ನು ಶುದ್ಧೀಕರಿಸುತ್ತದೆ.ಅಂಜೂರದ ಒಣಹಣ್ಣುಗಳನ್ನು ರಾತ್ರಿ ಹಾಲಲ್ಲಿ ನೆನೆಸಿಟ್ಟು ಬೆಳಿಗ್ಗೆ ಅದನ್ನು ಮಿಕ್ಸಿಗೆ ಹಾಕಿ ಹಾಲು ಬೆರೆಸಿ ಜ್ಯೂಸ್ ತಯಾರಿಸಿ ನಿತ್ಯ ಕುಡಿಯಬೇಕು.

ಇದರಲ್ಲಿ ಕ್ಯಾಲ್ಸಿಯಂ ಹೇರಳವಾಗಿರುವುದರಿಂದ ದೇಹದ ಮೂಳೆಗಳನ್ನು ಗಟ್ಟಿಯಾಗಿಸಲು ಸಹಾಯಕವಾಗಿದೆ. ಅಂಜೂರ ಹಣ್ಣನ್ನು ನಿಯಮಿತವಾಗಿ ಸೇವಿಸುವುದರಿಂದ ಜೀರ್ಣಕ್ರಿಯೆಯನ್ನು ಸರಾಗಗೊಳಿಸಿ ಮಲಬದ್ದತೆಯನ್ನು ನಿವಾರಿಸುತ್ತದೆ.  ಸಕ್ಕರೆ ಕಾಯಿಲೆಯನ್ನೂ ನಿಯಂತ್ರಣದಲ್ಲಿಡುತ್ತದೆ. ಅನಿಯಮಿತವಾದ ಹೃದಯ ಬಡಿತವನ್ನು ನಿಯಮಿತಗೊಳಿಸುತ್ತದೆ. ಈ ಮೂಲಕ ಪಾರ್ಶ್ವವಾಯು, ಸ್ನಾಯು ಸೆಳೆತ, ಆಯಾಸ ಮುಂತಾದ ಕಾಯಿಲೆಗಳನ್ನು ನಿಯಂತ್ರಣ ಮಾಡುತ್ತದೆ. ಪೊಟಾಸಿಯಂ ಸಮತೋಲನವನ್ನು ಕಾಪಾಡುತ್ತದೆ, ಕಣ್ಣಿನ ಮಂದತೆಯನ್ನು ನಿವಾರಿಸುತ್ತದೆ.

Exit mobile version