ಕಾಂಗ್ರೆಸ್ ತಮಿಳುನಾಡು-ಕರ್ನಾಟಕದ ನಡುವೆ ಬಿರುಕು ಮೂಡಿಸಲು ಪ್ರಯತ್ನ ಮಾಡುತ್ತಿದೆ : ಅಣ್ಣಾಮಲೈ!

bjp

ಕಾಂಗ್ರೆಸ್(Congress) ಕೆಲ ವಿಚಾರಗಳನ್ನು ಇಟ್ಟುಕೊಂಡು ಕರ್ನಾಟಕ(Karnataka) ಮತ್ತು ತಮಿಳುನಾಡು(Tamilnadu) ರಾಜ್ಯಗಳನ್ನು ಒಡೆಯುವ ಕೆಲಸ ಮಾಡುತ್ತಿದೆ. ಆದರೆ ಎರಡು ರಾಜ್ಯಗಳು ಉತ್ತಮ ಬಾಂಧವ್ಯ ಸಾಧಿಸಲು ಅನೇಕ ವಿಚಾರಗಳಿವೆ ಎಂದು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ(President) ಅಣ್ಣಾಮಲೈ(Annamalai) ಅಭಿಪ್ರಾಯಪಟ್ಟರು.

ಕೋಲಾರದ(Kolar) ಕೆಜಿಎಫ್‍ನಲ್ಲಿ(KGF) ಹಮ್ಮಿಕೊಳ್ಳಲಾಗಿದ್ದ ಬಿಜೆಪಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ನಡುವೆ ಉತ್ತಮ ಬಾಂಧವ್ಯವಿದೆ. ಆದರೆ ಕಾಂಗ್ರೆಸ್ ಪಕ್ಷ ರಾಜಕೀಯ ಕಾರಣಕ್ಕಾಗಿ ಎರಡೂ ರಾಜ್ಯಗಳನ್ನು ಒಡೆಯುವ ಪ್ರಯತ್ನ ಮಾಡುತ್ತಿದೆ. ಕೃಷಿ, ವ್ಯಾಪಾರ, ಉದ್ಯೋಗ ಸೇರಿದಂತೆ ಅನೇಕ ವಿಚಾರಗಳಲ್ಲಿ ಎರಡು ರಾಜ್ಯಗಳು ಪರಸ್ಪರ ಸಹಕಾರದಿಂದ ನಡೆದುಕೊಳ್ಳುತ್ತಿವೆ. ತಮಿಳುನಾಡಿನ ಅನೇಕ ಯುವಕರು ಬೆಂಗಳೂರಿನ ಐಟಿ ಕಂಪನಿಗಳನ್ನು ಕಾರ್ಯನಿರ್ವಹಿಸುತ್ತಿದ್ದಾರೆ.

ಅದೇ ರೀತಿ ಕರ್ನಾಟಕದ ಅನೇಕ ಉದ್ಯಮಗಳು ತಮಿಳುನಾಡಿನಲ್ಲಿವೆ. ಹೀಗೆ ಬಾಂಧವ್ಯಕ್ಕೆ ಅನೇಕ ವಿಚಾರಗಳಿದ್ರು, ಕಾಂಗ್ರೆಸ್ ಎರಡು ರಾಜ್ಯಗಳ ನಡುವೆ ಬಿರುಕು ಸೃಷ್ಟಿಸಲು ಪ್ರಯತ್ನಿಸುತ್ತಿದೆ ಎಂದು ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದರು.ಇನ್ನು ಮೇಕೆದಾಟು ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಮೇಕೆದಾಟು ವಿವಾದ ಸುಪ್ರೀಂಕೋರ್ಟ್‍ನಲ್ಲಿದೆ. ಸುಪ್ರೀಂಕೋರ್ಟ್ ತೀರ್ಪಿನಂತೆ ನಾವು ನಡೆದುಕೊಳ್ಳಬೇಕಿದೆ. ಇದರಲ್ಲಿ ಯಾರಿಗೂ ತೊಂದರೆ ಇಲ್ಲ. ನಾನು ಯೋಜನೆಯ ಪರವೋ..? ವಿರುದ್ದವೋ..? ಎಂಬುದು ಇದರಲ್ಲಿ ಮುಖ್ಯವಲ್ಲ.

ಸುಪ್ರೀಂಕೋರ್ಟ್ ನೀಡಿದ ತೀರ್ಪಿನ ಪ್ರಕಾರ ನಾವು ನಡೆದುಕೊಳ್ಳಬೇಕಿದೆ. ಈಗಾಗಲೇ ಎರಡು ರಾಜ್ಯಗಳ ಮುಖ್ಯಮಂತ್ರಿಗಳು ಇದನ್ನೇ ಹೇಳಿದ್ದಾರೆ. ನಾನು ಏನು ಹೇಳುತ್ತೇನೆ ಎಂಬುದು ಇಲ್ಲಿ ಮುಖ್ಯವಲ್ಲ ಎಂದು ತಿಳಿಸಿದರು. ಇನ್ನು ರಾಜ್ಯದಲ್ಲಿ ಸದ್ದು ಮಾಡುತ್ತಿರುವ ಪಿಎಸ್‍ಐ ನೇಮಕಾತಿ ಅಕ್ರಮದ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನನಗೆ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ. ನಾನು ತಮಿಳುನಾಡು ರಾಜಕೀಯದಲ್ಲಿ ಹೆಚ್ಚು ಬ್ಯುಸಿಯಾಗಿದ್ದೇನೆ.

ಹೀಗಾಗಿ ಈ ವಿಚಾರದ ಬಗ್ಗೆ ನನಗೆ ಮಾಹಿತಿಯ ಕೊರತೆ ಇದೆ. ಹೀಗಾಗಿ ಈ ವಿಚಾರವಾಗಿ ನಾನು ಮಾತನಾಡುವುದಿಲ್ಲ. ಆದರೆ ಅಕ್ರಮದಲ್ಲಿ ಭಾಗಿಯಾದವರಿಗೆ ಶಿಕ್ಷೆಯಾಗಬೇಕು ಎಂದಷ್ಟೇ ಹೇಳುತ್ತೇನೆ ಎಂದರು.

Exit mobile version