ಮಹಿಳೆಯರಿಗೆ ಶುಭಸುದ್ದಿ: ಪ್ರಧಾನ ಮಂತ್ರಿ ಉಜ್ವಲ್‌ ಯೋಜನೆಯಡಿ ಫ್ರೀ ಗ್ಯಾಸ್‌ ಸಂಪರ್ಕಕ್ಕೆ ಮತ್ತೆ ಅವಕಾಶ, ಆನ್‌ಲೈನ್‌ ಮೂಲಕ ಅರ್ಜಿ

Mysore: ಪ್ರಧಾನ ಮಂತ್ರಿ ಉಜ್ವಲ್‌ ಯೋಜನೆಯಡಿ ಕೇಂದ್ರ ಸರ್ಕಾರವು ಮಹಿಳೆಯರಿಗೆ ಸಿಹಿ ಸುದ್ದಿ ಕೊಟ್ಟಿದೆ. ಉಜ್ವಲ (apply for free Gas Connection) ಯೋಜನೆ 2.0 ಆರಂಭಿಸಿದ್ದು, ಗ್ರಾಹಕರು

ನೇರವಾಗಿ ಆನ್‌ಲೈನ್‌ (Online) ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಹೇಗೆ ಅರ್ಜಿ ಸಲ್ಲಿಸುವುದು? ಏನೆಲ್ಲಾ ದಾಖಲೆ ಬೇಕು? ಇಲ್ಲಿದೆ ಮಾಹಿತಿ.

ನಾನಾ ತೈಲ ಕಂಪನಿಯ ಗ್ಯಾಸ್‌ ಸಂಪರ್ಕ ನೀಡುವ ಗ್ಯಾಸ್‌ ಏಜೆನ್ಸಿಗಳನ್ನು (Gas Agency) ಗ್ರಾಹಕರೇ ನೇರವಾಗಿ ಆಯ್ಕೆ ಮಾಡಿಕೊಂಡು ಉಜ್ವಲ್‌ ಯೋಜನೆಯಡಿ ಸಂಪರ್ಕ ನೀಡುವಂತೆ ಆನ್‌ಲೈನ್‌

ಮೂಲಕ ಅರ್ಜಿಯೊಂದಿಗೆ ಅಗತ್ಯ (apply for free Gas Connection) ದಾಖಲಾತಿ ಸಲ್ಲಿಸಬೇಕಿದೆ.

ಈಗಾಗಲೇ ದೇಶದೆಲ್ಲೆಡೆ ಪ್ರಧಾನ ಮಂತ್ರಿ ಉಜ್ವಲ್‌ ಯೋಜನೆಯಡಿ 10.35 ಕೋಟಿ ಮಂದಿಗೆ ಅನಿಲ ಸಂಪರ್ಕ ಕಲ್ಪಿಸಲಾಗಿದ್ದು, ಕೇಂದ್ರ ಸರ್ಕಾರವೇ ದೇಶದಲ್ಲಿರುವ ಬಿಪಿಎಲ್‌ ಕಾರ್ಡ್‌ (BPL Card)

ಹೊಂದಿರುವ ಫಲಾನುಭವಿಗಳ ಮಾಹಿತಿ ಇರುವ ಎಸ್‌ಇಸಿಸಿ ದತ್ತಾಂಶವನ್ನು ಐಒಸಿ, ಎಚ್‌ಪಿಸಿಎಲ್‌ (HPCL), ಬಿಪಿಸಿಎಲ್‌ ತೈಲ ಕಂಪನಿಗಳಿಗೆ ನೀಡಿದ್ದು, ತೈಲ ಕಂಪನಿಗಳು ಉಜ್ವಲ್‌ ಯೋಜನೆಯಡಿ

ತಮ್ಮ ವ್ಯಾಪ್ತಿಯಲ್ಲಿರುವ ಬಿಪಿಎಲ್‌ ಕುಟುಂಬದ ಮಹಿಳೆಯರಿಗೆ ಕಡ್ಡಾಯವಾಗಿ ಅನಿಲ ಸಂಪರ್ಕ ಕಲ್ಪಿಸುವಂತೆ ಗ್ಯಾಸ್‌ ಏಜೆನ್ಸಿಗಳಿಗೆ ಟಾರ್ಗೆಟ್‌ ನೀಡಲಾಗಿತ್ತು.

ಗ್ಯಾಸ್‌ ಏಜೆನ್ಸಿಗಳ ಮಾಲೀಕರು, ತಮಗೆ ನೀಡಿದ್ದ ಗುರಿ ತಲುಪಲು ನಗರ ಸೇರಿದಂತೆ ಗ್ರಾಮೀಣ ಪ್ರದೇಶ ವ್ಯಾಪ್ತಿಯಲ್ಲಿರುವ ಕಡು ಬಡ ಕುಟುಂಬಗಳನ್ನು ಪತ್ತೆ ಹಚ್ಚಿ ಅವರಿಗೆ ಉಚಿತವಾಗಿ ಗ್ಯಾಸ್‌ ಸಂಪರ್ಕ

ನೀಡುವ ಮೂಲಕ ಯೋಜನೆಯ ಯಶಸ್ವಿಗೆ ಶ್ರಮಿಸಿದ್ದರು. ಮೈಸೂರಿನಲ್ಲಿಯೇ 50 ಸಾವಿರಕ್ಕೂ ಹೆಚ್ಚು ಮಂದಿ ಉಜ್ವಲ್‌ ಯೋಜನೆಯ ಫಲಾನುಭವಿಗಳಿದ್ದಾರೆ.

ರಾಜ್ಯದೆಲ್ಲೆಡೆ ನಿಗದಿತ ಗುರಿಗಿಂತ ಮೈಸೂರು (Mysore) ಸೇರಿದಂತೆ ಹೆಚ್ಚು ಮಂದಿಗೆ ಉಜ್ವಲ್‌ ಯೋಜನೆಯಡಿ ಅನಿಲ ಸಂಪರ್ಕ ಕಲ್ಪಿಸಿ, ಗ್ಯಾಸ್‌ ಸಂಪರ್ಕದೊಂದಿಗೆ ಸ್ಟೌ, ರೆಗ್ಯುಲೇಟರ್‌ (Regulator),

ರಬ್ಬರ್‌ ಟ್ಯೂಬ್‌ಗಳನ್ನು ನೀಡಲಾಗಿತ್ತು. ಈ ಹೆಚ್ಚುವರಿ ಹಣವನ್ನು ಕಂತಿನ ರೂಪದಲ್ಲಿ ಪಡೆಯಲು ಗ್ರಾಹಕರಿಗೆ ನೀಡಲಾಗುತ್ತಿದ್ದ ಸಬ್ಸಿಡಿ ಹಣವನ್ನು ಕಡಿತಗೊಳಿಸಲಾಗುತ್ತಿತ್ತು.

ಆನ್‌ಲೈನ್‌ ಮೂಲಕ ಅರ್ಜಿ
ಬಿಪಿಎಲ್‌ ಕಾರ್ಡ್‌ ಹೊಂದಿರುವ ಮಹಿಳೆಯರು ನೇರವಾಗಿ ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ವೆಬ್‌ಸೈಟ್‌ನಲ್ಲಿ (Website) ಹೆಸರು, ವಿಳಾಸ,

ಆಧಾರ್‌ ಕಾರ್ಡ್‌ (Aadhar Card), ಬಿಪಿಎಲ್‌ ಕಾರ್ಡ್‌ ಸಂಖ್ಯೆಯನ್ನು ಅಪ್‌ಲೋಡ್‌ ಮಾಡಬೇಕು. ಗ್ಯಾಸ್‌ ಏಜೆನ್ಸಿಗಳಿಂದ ಗ್ರಾಹಕರು ತಮಗೆ ಬೇಕಾದ ಸಂಪರ್ಕ ಪಡೆಯಲು ತಾವೇ ಆಯ್ಕೆ

ಮಾಡಿಕೊಳ್ಳಬಹುದಾಗಿದ್ದು, ಯೋಜನೆಯಡಿ 14.2 ಕೆಜಿಯ ಒಂದು ಸಿಲಿಂಡರ್‌ (Cylinder) ಪಡೆಯಲು ಮಾತ್ರ ಅವಕಾಶವಿದೆ ಮತ್ತು 5 ಕೆಜಿಯ ಎರಡು ಸಿಲಿಂಡರ್‌ ಪಡೆಯಬಹುದು.

ವೆಬ್‌ಸೈಟ್‌ ವಿಳಾಸ – https://www.pmuy.gov.in/ujjwala2.html

ಇದನ್ನು ಓದಿ: ರೇಷನ್ ಕಾರ್ಡ್ ತಿದ್ದುಪಡಿ ಅವಧಿ ವಿಸ್ತರಣೆ; ಯಾವ ಜಿಲ್ಲೆಯಲ್ಲಿ ಯಾವಾಗ ತಿದ್ದುಪಡಿಗೆ ಅವಕಾಶ..? ಇಲ್ಲಿದೆ ಮಾಹಿತಿ

Exit mobile version