‘ಸ್ಪುಟ್ನಿಕ್ ವಿ’ ತಯಾರಿಸಲು ಅನುಮತಿ ಕೋರಿ ಡಿಸಿಜಿಐ ಗೆ ಸೀರಂನಿಂದ ಅರ್ಜಿ

ನವದೆಹಲಿ, ಜೂ. 03: ಕೊರೊನಾ ಲಸಿಕೆ ‘ಸ್ಪುಟ್ನಿಕ್ ವಿ’ ತಯಾರಿಸಲು ಅನುಮತಿ ಕೋರಿ ಸೀರಂ ಇನ್‌ಸ್ಟಿಟ್ಯೂಟ್‌ ಆಫ್ ಇಂಡಿಯಾ ಭಾರತೀಯ ಔಷಧ ನಿಯಂತ್ರಣ ಮಹಾ ನಿರ್ದೇಶನಾಲಯಕ್ಕೆ (ಡಿಸಿಜಿಐ) ಅರ್ಜಿ ಸಲ್ಲಿಸಿದೆ ಎಂದು ಮೂಲಗಳು ತಿಳಿಸಿವೆ.

ಲಸಿಕೆಯ ವಿಶ್ಲೇಷಣೆ ಮತ್ತು ಪರೀಕ್ಷೆಗೆ ಅನುಮೋದನೆ ನೀಡುವಂತೆಯೂ ಕಂಪನಿ ಕೋರಿಕೆ ಸಲ್ಲಿಸಿದೆ. ರಷ್ಯಾ ಅಭಿವೃದ್ಧಿಪಡಿಸಿರುವ ‘ಸ್ಪುಟ್ನಿಕ್ ವಿ‘ ಲಸಿಕೆಯನ್ನು ಪ್ರಸ್ತುತ ಭಾರತದಲ್ಲಿ ಹೈದರಾಬಾದ್‌ನ ಡಾ. ರೆಡ್ಡೀಸ್ ಲ್ಯಾಬೊರೇಟರೀಸ್ ತಯಾರಿಸುತ್ತಿವೆ.

ಜೂನ್‌ ತಿಂಗಳಲ್ಲಿ ಕೋವಿಶೀಲ್ಡ್‌ನ 10 ಕೋಟಿ ಡೋಸ್ಗಳನ್ನು ತಯಾರಿಸಿ ಪೂರೈಸುತ್ತೇವೆ ಎಂದು ಎಸ್‌ಐಐ ಸಂಸ್ಥೆ ಸರ್ಕಾರಕ್ಕೆ ಭರವಸೆ ನೀಡಿದೆ. ಇದೇ ವೇಳೆ ಈ ಕಂಪನಿ ನೋವಾವ್ಯಾಕ್ಸ್ ಲಸಿಕೆಯನ್ನೂ ತಯಾರಿಸುತ್ತಿದ್ದು, ಇದಕ್ಕಾಗಿ ಅಮೆರಿಕದ ಔಷದ ನಿಯಂತ್ರಣ ಸಂಸ್ಥೆಯಿಂದ ಅನುಮತಿಯ ನಿರೀಕ್ಷೆಯಲ್ಲಿದೆ.

Exit mobile version