ಕರ್ನಾಟಕದ ಜನತೆಗೆ ಶುಭಸುದ್ದಿ: ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ಮತ್ತೆ ಅವಕಾಶ

Bengaluru: ಸರ್ಕಾರ ಬಡವರಿಗಾಗಿ ಕಲ್ಪಿಸಿಕೊಟ್ಟಿರುವ ಪಡಿತರ ಚೀಟಿಯು ದಿನದಿಂದ ದಿನಕ್ಕೆ ಬಹಳ (Apply New Ration Cards) ಪ್ರಾಮುಖ್ಯತೆ ಪಡೆದುಕೊಳ್ಳುತ್ತಿದ್ದು,

ಕೆಲವೊಂದು ಅಗತ್ಯಗಳಿಗೆ ಉಪಯೋಗ ಪಡೆದುಕೊಳ್ಳಲು ಈ ಪಡಿತರ ಚೀಟಿ ಪ್ರಮುಖವಾಗಿರುವ ದಾಖಲೆಯಾಗಿದೆ. ಇನ್ನು ಬಹಳಷ್ಟು ಜನರಿಗೆ ರೇಷನ್ ಕಾರ್ಡ್ (Ration Card)

ಸಿಗದೇ ವಂಚಿತರಾಗಿರೋದ್ರಿಂದ ಅಂಥವರಿಗೆ ಸರ್ಕಾರ ಹೊಸ ಪಡಿತರ (Apply New Ration Cards) ಚೀಟಿಯನ್ನು ಪಡೆದುಕೊಳ್ಳಲು ಅವಕಾಶ ಕಲ್ಪಿಸಿದೆ.

ಹೊಸದಾಗಿ ರೇಷನ್ ಕಾರ್ಡ್ಗೆ ಯಾರು ಅರ್ಜಿ ಸಲ್ಲಿಸಬಹುದು ಅಂದರೆ, ಈಗಷ್ಟೇ ಮದುವೆಯಾಗಿ ಹೊಸದಾಗಿ ಸಂಸಾರ ಆರಂಭಿಸುವ ದಂಪತಿಗಳು, ಕುಟುಂಬದಿಂದ ಬೇರೆಯಾಗಿ

ಜೀವನ ನಡೆಸುತ್ತಿರುವ ದಂಪತಿಗಳು ಅರ್ಜಿ ಸಲ್ಲಿಸಬಹುದು. ಇದರ ಜೊತೆಗೆ ರೇಷನ್ ಕಾರ್ಡ್ ತಿದ್ದುಪಡಿಗು ಅವಕಾಶ ನೀಡಲಾಗಿದೆ. ಹೊಸದಾಗಿ ಮನೆಗೆ ಸೊಸೆ ಬಂದಿದ್ದರೆ ಅಥವಾ

ಮಗುವಿನ ಜನನ ಆಗಿದ್ದರೆ ಅವರ ಹೆಸರು ನಿಮ್ಮ ರೇಷನ್ ಕಾರ್ಡ್ ನಲ್ಲಿ ಸೇರಿಸಲು ಕೂಡ ಅವಕಾಶವಿದೆ.

ಈಗಾಗಲೇ ಎರಡು ದಿನಗಳ ಹಿಂದೆ ಹೊಸದಾಗಿ ರೇಷನ್ ಕಾರ್ಡ್ ಗೆ ಅರ್ಜಿ ತೆಗೆದುಕೊಳ್ಳುವ ಪ್ರಕ್ರಿಯೆ ಆರಂಭವಾಗಿದ್ದು, ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಹತ್ತಿರದ

ಗ್ರಾಮ ಒನ್ (Grama One), ಬೆಂಗಳೂರು ಒನ್, ಹಾಗೂ ಮತ್ತೆ ಸೇವಾ ಕೇಂದ್ರಗಳಲ್ಲಿ ಅವಕಾಶ ಕಲ್ಪಿಸಿಕೊಡಲಾಗಿದೆ.

ಇಲ್ಲಿ ಗಮನಿಸಬೇಕಾಗಿರುವ ಮುಖ್ಯವಾಗಿರುವ ಅಂಶವೆಂದರೆ ಆನ್ಲೈನ್ (online) ಮೂಲಕ ಸೇವಾಕೇಂದ್ರಗಳಲ್ಲಿ ಮಾತ್ರ ಅರ್ಜಿ ಸಲ್ಲಿಸಬಹುದು. ಆದರೆ ಎಲ್ಲಾ ಸಮಯದಲ್ಲಿಯೂ

ಆನ್ಲೈನ್ ಪೋರ್ಟಲ್ (Portal) ತೆರೆದಿರುವುದಿಲ್ಲ. ಹಾಗಾಗಿ ನೀವು ಸೇವ ಕೇಂದ್ರದ ಸಿಬ್ಬಂದಿಗಳ ಬಳಿ ಮಾಹಿತಿ ಪಡೆದುಕೊಂಡು ಆ ಸಮಯಕ್ಕೆ ಹೋಗಿ ಅರ್ಜಿ ಸಲ್ಲಿಸಬೇಕಾಗುತ್ತದೆ.

ಆಹಾರ ಇಲಾಖೆ ಸಚಿವ ಕೆಎಚ್ ಮುನಿಯಪ್ಪ (K H Muniyappa) ಅವರು, ಕಳೆದ ಎರಡುವರೆ ವರ್ಷಗಳಿಂದ ರೇಷನ್ ಕಾರ್ಡ್ ಪಡೆದುಕೊಳ್ಳಲು ಅರ್ಜಿ ಸಲ್ಲಿಸಿರುವ ಅರ್ಜಿಗಳನ್ನು

ವಿಲೇವಾರಿ ಮಾಡಿಲ್ಲ ಸರ್ಕಾರ. ಹಾಗಾಗಿ ಈ ಬಗ್ಗೆ ಈಗ ಮಾಹಿತಿ ನೀಡಲಾಗಿದ್ದು ಸದ್ಯದಲ್ಲಿಯೇ ಹೊಸ ಪಡಿತರ ಚೀಟಿ ವಿತರಣೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಇದನ್ನು ಓದಿ: ಕೆರಗೋಡು ಹನುಮಧ್ವಜ ವಿವಾದ: ಮಂಡ್ಯದ ಕೆರಗೋಡು ಗ್ರಾಮ ಬಂದ್, ಹಿಂದೂಪರ ಕಾರ್ಯಕರ್ತರಿಂದ ಬೈಕ್ ರಾಲಿ

Exit mobile version