Passport News: ಸರ್ಕಾರದಿಂದ ಪಾಸ್‌ಪೋರ್ಟ್ ನಿಯಮ ಬದಲಾವಣೆ, ಡಿಜಿಲಾಕರ್ ಮೂಲಕ ದಾಖಲೆಗಳ ಅಪ್‌ಲೋಡ್

Bengaluru: ಪಾಸ್‌ಪೋರ್ಟ್ (apply passport by digilocker) ಪಡೆಯಲು ನೀವೇನಾದ್ರು ಬಯಸಿದ್ದರೆ ಒಂದು ಪ್ರಮುಖ ಸುದ್ದಿ ಇದೆ. ಸರ್ಕಾರವು ಪಾಸ್‌ಪೋರ್ಟ್ ಮಾಡುವ ನಿಯಮಗಳನ್ನು

ಬದಲಾಯಿಸಿದ್ದು, ಈಗ ಪಾಸ್‌ಪೋರ್ಟ್ ಪಡೆಯಲು ಡಿಜಿಲಾಕರ್ (Digi locker) ಬಳಸಬೇಕಾಗುತ್ತದೆ. ಅಂದರೆ ಹೊಸ ಪಾಸ್‌ಪೋರ್ಟ್‌ಗಾಗಿ ಎಲ್ಲಾ ದಾಖಲೆಗಳನ್ನು ಡಿಜಿಲಾಕರ್ ಮೂಲಕ

ಅಪ್‌ಲೋಡ್ (Upload) ಮಾಡಬೇಕು. ಹಾಗಾದರೆ ಡಿಜಿಲಾಕರ್ ಎಂದರೇನು? ಮತ್ತು ಅದರ ಮೂಲಕ ಅರ್ಜಿದಾರರ ಡಾಕ್ಯುಮೆಂಟ್‌ಗಳನ್ನು ಹೇಗೆ ಅಪ್‌ಲೋಡ್ ಮಾಡಬಹುದು ಎಂಬುದನ್ನು

ಈ ಮೂಲಕ ತಿಳಿಯೋಣ

ಪಾಸ್‌ಪೋರ್ಟ್‌ಗೆ(Passport) ದಾಖಲೆಗಳ ಹಾರ್ಡ್ ಕಾಪಿ (Hardcopy) ಅಗತ್ಯವಿಲ್ಲ
ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಪ್ರಕಾರ ಯಾವುದೇ ವ್ಯಕ್ತಿಯು ಪಾಸ್‌ಪೋರ್ಟ್ ಪಡೆಯಲು ಡಿಜಿಲಾಕರ್ (Digi locker) ಮೂಲಕ ತನ್ನ ದಾಖಲೆಗಳನ್ನು ಅಪ್‌ಲೋಡ್ ಮಾಡಿದರೆ

ಆತ ತನ್ನ ಅರ್ಜಿ ಪ್ರಕ್ರಿಯೆಯ ವೇಳೆಯಲ್ಲಿ ದಾಖಲೆಗಳ ಹಾರ್ಡ್ (Hard) ಪ್ರತಿಗಳನ್ನು ತೆಗೆದುಕೊಂಡು ಹೋಗುವ ಅಗತ್ಯವಿಲ್ಲ. ಹಾಗಾಗಿ ಇದರಿಂದ ಪಾಸ್ ಪೋರ್ಟ್ ಪಡೆಯುವ ಕೆಲಸ ಮೊದಲಿಗಿಂತ

ಸುಲಭವಾಗಲಿದೆ. ಅಲ್ಲದೆ ಅರ್ಜಿದಾರರ ಸಮಯವೂ (apply passport by digilocker) ಉಳಿತಾಯವಾಗುತ್ತದೆ.

ಈಗ ಡಿಜಿ ಲಾಕರ್ (Digilocker) ಬಳಸಬೇಕು
ಅರ್ಜಿ ಸಲ್ಲಿಸಲು ಅರ್ಜಿದಾರರು ಪಾಸ್‌ಪೋರ್ಟ್‌ಗಾಗಿ ಸರ್ಕಾರಿ ಪ್ಲಾಟ್‌ಫಾರ್ಮ್ (Platform) ಡಿಜಿಲಾಕರ್ ಅನ್ನು ಉಪಯೋಗಿಸಬಹುದು. ಅರ್ಜಿದಾರರು ಈ ವೇದಿಕೆಯನ್ನು ಬಳಸಿಕೊಂಡು

ಅಗತ್ಯ ದಾಖಲೆಗಳನ್ನು ಅಪ್‌ಲೋಡ್ (Upload) ಮಾಡಬೇಕು ಮತ್ತು ಡಿಜಿ ಲಾಕರ್ ಮೂಲಕ ಈ ಕೆಲಸವನ್ನು ಸುಲಭವಾಗಿ ಮಾಡಬಹುದು. ಎಲ್ಲಾ ದಾಖಲೆಗಳನ್ನು ಅಪ್‌ಲೋಡ್ ಮಾಡಿದ

ನಂತರ ಅಧಿಕೃತ ವೆಬ್‌ಸೈಟ್ www.passportindia.gov.in ನಲ್ಲಿ ಪಾಸ್‌ಪೋರ್ಟ್‌ಗಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ. ಇದರಿಂದ ಅರ್ಜಿ ಪ್ರಕ್ರಿಯೆ ಸುಲಭವಾಗುತ್ತದೆ ಮತ್ತು ಅರ್ಜಿದಾರರ

ಸಮಯವೂ ಉಳಿತಾಯವಾಗುತ್ತದೆ.

ಡಿಜಿಲಾಕರ್ ಎಂದರೇ
ವಾಸ್ತವವಾಗಿ ಡಿಜಿಲಾಕರ್ ಗ್ರಾಹಕರಿಗೆ ಡಿಜಿಟಲ್ ಲಾಕರ್ ಆಗಿದೆ. ಇದನ್ನು ಭಾರತೀಯ ಎಲೆಕ್ಟ್ರಾನಿಕ್ಸ್ (Electronics) ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಸುಗಮಗೊಳಿಸುತ್ತದೆ.

ಆನ್‌ಲೈನ್‌ನಲ್ಲಿ (Online) ಜನರು ತಮ್ಮ ಪ್ರಮುಖ ದಾಖಲೆಗಳನ್ನು ಸುರಕ್ಷಿತವಾಗಿ ಇರಿಸಬಹುದಲ್ಲದೆ ಡಿಜಿ ಲಾಕರ್‌ನಲ್ಲಿ ನಿಮ್ಮ ಡ್ರೈವಿಂಗ್ ಲೈಸೆನ್ಸ್ (Driving License), ವೋಟರ್ ಐಡಿ,

ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ (Pancard), ಮಾರ್ಕ್‌ಶೀಟ್ ಇತ್ಯಾದಿಗಳನ್ನು ಕೂಡ ಆನ್‌ಲೈನ್‌ನಲ್ಲಿ ಸುರಕ್ಷಿತವಾಗಿ ಇಡಬಹುದು. ಇದು ಒಂದು ರೀತಿಯ ಡಿಜಿಟಲ್ ಸೇಫ್ ಆಗಿದ್ದು ಇದರಲ್ಲಿ

ನಿಮ್ಮ ಎಲ್ಲಾ ದಾಖಲಾತಿಗಳನ್ನು ಸೇಫ್ ಆಗಿ ಇರಿಸಬಹುದು.

ಊಟದ ನಂತರ ಕಾಡುವ ಹೊಟ್ಟೆ ಉಬ್ಬರದ ಸಮಸ್ಯೆಗೆ ಸರಳ ಮನೆಮದ್ದುಗಳು..!

ಪ್ಲೇ ಸ್ಟೋರ್‌ (Play store) ಮೂಲಕ ಡಿಜಿಲಾಕರ್ ಅಪ್ಲಿಕೇಶನ್ (Application) ಡೌನ್‌ಲೋಡ್
ಡಿಜಿಲಾಕರ್ ಅನ್ನು ಬಳಸಲು ಮೊದಲು ನೀವು ಗೂಗಲ್ ಪ್ಲೇ ಸ್ಟೋರ್‌ನಿಂದ (Google Play Store) ಡಿಜಿಲಾಕರ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬೇಕು. ಇದರಲ್ಲಿ ಖಾತೆಯನ್ನು ರಚಿಸಲು

ಆಧಾರ್ ಕಾರ್ಡ್ (Aadhar card) ಹೊಂದಿರುವುದು ಮುಖ್ಯ. ಇನ್ನು ಡಿಜಿಲಾಕರ್‌ನ ಬಳಕೆಯಿಂದ ಕಾಗದದ ಬಳಕೆಯನ್ನು ಕಡಿಮೆ ಮಾಡುವುದು ಮತ್ತು ಇ-ದಾಖಲೆಗಳನ್ನು ಉತ್ತೇಜಿಸುವುದು.

ಡಿಜಿ ಲಾಕರ್ ಅಪ್ಲಿಕೇಶನ್ (Application) ಮೂಲಕ ನಿಮ್ಮ ಡ್ಯಾಶ್‌ಬೋರ್ಡ್‌ಗೆ (Dashboard) ಲಾಗ್ ಇನ್ ಮಾಡುವ ಮೂಲಕ ನಿಮ್ಮ ಎಲ್ಲಾ ಡಾಕ್ಯುಮೆಂಟ್‌ಗಳನ್ನು (Document)

ನೀವು ಸುಲಭವಾಗಿ ಪ್ರವೇಶಿಸಬಹುದು.

ಡಿಜಿಟಲ್ ಲಾಕರ್ನ (Locker) ರಚನೆ :
1 ನೇ ಹಂತ – ಮೊದಲಿಗೆ digilocker.gov.in ವೆಬ್‌ಸೈಟ್‌ಗೆ (Website) ಹೋಗಬೇಕು.
2 ನೇ ಹಂತ – ಸೈನ್ ಅಪ್ (Sign up) ಆಯ್ಕೆಯ ಮೇಲೆ ಕ್ಲಿಕ್ (Click) ಮಾಡಬೇಕು.
3 ನೇ ಹಂತ – ತದ ನಂತರ ಅರ್ಜಿದಾರರ ಹೆಸರು, ಹುಟ್ಟಿದ ದಿನಾಂಕ, ಇಮೇಲ್ ಐಡಿ (E-Mail ID), ಮೊಬೈಲ್ ಸಂಖ್ಯೆ ಮತ್ತು ಪಾಸ್ವರ್ಡ್ (Password) ಅನ್ನು
ನಮೂದಿಸಬೇಕು .
4 ನೇ ಹಂತ – ನಂತರ ಪರಿಶೀಲನೆಗಾಗಿ ನೋಂದಾಯಿತ ಮೊಬೈಲ್ ಸಂಖ್ಯೆಗೆ OTP ಬರುತ್ತದೆ.

ಭವ್ಯಶ್ರೀ ಆರ್.ಜೆ

Exit mobile version