ಪ್ರತಿ ವಿವಾಹ ಕಾರ್ಯಕ್ರಮಕ್ಕೂ ಓರ್ವ ಮಾರ್ಷಲ್ ನೇಮಕ: ಡಾ. ಕೆ. ಸುಧಾಕರ್

ಬೆಂಗಳೂರು, ಫೆ. 22: ರಾಜ್ಯದಲ್ಲಿ ಸಭೆ, ಸಮಾರಂಭ, ಸಮಾವೇಶದಲ್ಲಿ ಹೆಚ್ಚಿನ ಜನರು ಸೇರುತ್ತಾ ಇದ್ದಾರೆ. ಹೀಗಾಗಿ ಮುಂಜಾಗ್ರತೆ ತೆಗೆದುಕೊಳ್ಳಲೇಬೇಕು. ಮಾರ್ಗಸೂಚಿಗೆ ವಿರುದ್ಧವಾಗಿ ನಡೆಯುತ್ತಿವೆ. ಮದುವೆ ಸಮಾರಂಭಗಳು ಹಾಗೆ ನಡೆಯುತ್ತಿವೆ. ಮಾಸ್ಕ್ ಹಾಕುವುದನ್ನೇ ಬಿಟ್ಟಿದ್ದಾರೆ. ಜನ, ವಿಐಪಿ, ವಿವಿಐಪಿಗಳು ಹಾಕ್ತಿಲ್ಲ. ಇದು ನಿಜಕ್ಕೂ ಅಪಾಯಕಾರಿ. ಹೀಗಾಗಿ ಮದುವೆ ಸಮಾರಂಭಕ್ಕೆ ಮಾರ್ಷಲ್ ಹಾಕ್ತೇವೆ. ಇಂದು ಅಧಿಕೃತ ಸುತ್ತೋಲೆ ಹೊರಡಿಸ್ತೇವೆ. ಫುಡ್ ಮಾಡುವವರು, ಹಂಚುವವರ ಮೇಲೆ ನಿಗಾ ವಹಿಸಲಾಗುತ್ತದೆ. ಇವರೆಲ್ಲರಿಗೆ ಕೊರೋನಾ ಟೆಸ್ಟ್ ಕಡ್ಡಾಯ ಮಾಡ್ತೇವೆ ಎಂಬುದಾಗಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

ಈ ಕುರಿತಂತೆ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದಂತ ಅವರು, ಡಿಸಿ, ಎಸ್ಪಿ, ಸಿಇಒ, ಆರೋಗ್ಯಾಧಿಕಾರಿಗಳ ಜೊತೆಗೆ ವಿಡಿಯೋ ಸಂವಾದವನ್ನ ಮಾಡಿದ್ದೇವೆ. ಕೇರಳ, ಮಹಾರಾಷ್ಟ್ರದಲ್ಲಿ ಸೋಂಕು ಹೆಚ್ಚಾಗ್ತಿದೆ. ಹೀಗಾಗಿ ಗಡಿಯಲ್ಲಿ ಮತ್ತಷ್ಟು ನಿಗಾವಹಿಸಿದ್ದೇವೆ. ಆರ್ ಟಿಪಿಸಿಆರ್ ಟೆಸ್ಟ್ ಮಾಡಲಾಗುತ್ತಿದೆಯೇ.? ಯಾವ ರೀತಿ ಟೆಸ್ಟ್ ನಡೆದಿದೆ, ಪ್ರಮಾಣ ಇದರ ಚರ್ಚೆಯಾಗಿದೆ ಎಂದರು.

ರಾಜ್ಯದಲ್ಲಿ 2 ಲಕ್ಷ 90 ಸಾವಿರ ಸಿಬ್ಬಂದಿಗಳಿಗೆ ಲಸಿಕೆ ನೀಡಲಾಗಿದೆ. ಕಂದಾಯ, ಗ್ರಾಮೀಣಾಭಿವೃದ್ಧಿ, ಗೃಹ, ನಗರಾಭಿವೃದ್ಧಿ ಇಲಾಖೆ ಸಿಬ್ಬಂದಿ ಸೇರಿದಂತೆ ಆರೋಗ್ಯ ಇಲಾಖೆಯಲ್ಲಿ 4 ಲಕ್ಷದ 22 ಸಾವಿರಜನರಿಗೆ ಕೊಟ್ಟಿದ್ದೇವೆ. ಮೊದಲ ಹಂತದ ಡೋಸ್ ಕೊಟ್ಟಿದ್ದೇವೆ. ನಾವು 8 ಲಕ್ಷ ಗುರಿಯನ್ನ ಇಟ್ಟುಕೊಂಡಿದ್ದೆವು. ಇದೇ 28 ರೊಳಗೆ ಗುರಿ ತಲುಪುವಂತೆ ಸೂಚನೆಯನ್ನು ಜಿಲ್ಲೆಯ ಎಲ್ಲ ಅಧಿಕಾರಿಗಳಿಗೆ ಕೊಟ್ಟಿದ್ದೇವೆ. ಲಸಿಕೆಯನ್ನ ಕೊಡುವ ಗುರಿ ಮುಟ್ಟುವಂತೆ ತಿಳಿಸಿದ್ದೇವೆ. ನಾಳೆ, ನಾಡಿದ್ದು ಫ್ರಂಟ್ ಲೈನ್ ವರ್ಕರ್ಸ್ ಪಡೆದುಕೊಳ್ಳಬೇಕು ಎಂದರು.

ಮಹಾರಾಷ್ಟ್ರದಲ್ಲಿ ಲಾಕ್ ಡೌನ್ ಮಾಡಿದ್ದಾರೆ. ಎಂಟು ದಿನಗಳ ಕಾಲ ಲಾಕ್ ಡೌನ್ ಘೋಷಿಸಿದ್ದಾರೆ. ಸಿಎಂ ಕೂಡ ಸೋಂಕಿನ ನಿಯಂತ್ರಣಕ್ಕೆ ಒತ್ತು ಕೊಟ್ಟಿದ್ದಾರೆ. ಸಿಎಂ ಕೂಡ ವಿಡಿಯೊ ಇಕಾನ್ಫರೆನ್ಸ್ ಮಾಡಲಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಹಿಂದಿದ್ದೇವೆ. ಲಸಿಕೆ ಕೊಡುವುದರಲ್ಲಿ ಹಿಂದಿದ್ದೇವೆ. ಆಯುಕ್ತರಿಗೆ ಈ ಬಗ್ಗೆ ಸೂಚನೆ ಕೊಟ್ಟಿದ್ದೇವೆ ಎಂದರು.

ಇನ್ನೂ ಮುಂದುವರೆದು ಮಾತನಾಡಿರುವ ಅವರು ರಾಜ್ಯದಲ್ಲಿ ಸಭೆ, ಸಮಾರಂಭ, ಸಮಾವೇಶದಲ್ಲಿ ಹೆಚ್ಚಿನ ಜನ ಸೇರುತ್ತಿದ್ದಾರೆ. ಹೀಗಾಗಿ ಮುಂಜಾಗ್ರತೆ ತೆಗೆದುಕೊಳ್ಳಲೇಬೇಕು. ಮಾರ್ಗಸೂಚಿಗೆ ವಿರುದ್ಧವಾಗಿ ನಡೆಯುತ್ತಿವೆ. ಮದುವೆ ಸಮಾರಂಭಗಳು ಹಾಗೆ ನಡೆಯುತ್ತಿವೆ. ಮಾಸ್ಕ್ ಹಾಕುವುದನ್ನೇ ಬಿಟ್ಟಿದ್ದಾರೆ. ಜನ, ವಿಐಪಿ, ವಿವಿಐಪಿಗಳು ಹಾಕ್ತಿಲ್ಲ. ಇದು ನಿಜಕ್ಕೂ ಅಪಾಯಕಾರಿ. ಹೀಗಾಗಿ ಮದುವೆ ಸಮಾರಂಭಕ್ಕೆ ಮಾರ್ಷಲ್ ಹಾಕ್ತೇವೆ. ಇಂದು ಅಧಿಕೃತ ಸುತ್ತೋಲೆ ಹೊರಡಿಸ್ತೇವೆ ಎಂದು ತಿಳಿಸಿದರು.

ಈ ಹಿನ್ನಲೆಯಲ್ಲಿ ವಿವಾಹ ಮಾಡಿಕೊಳ್ಳುವವರೇ ಹುಷಾರ್.! ಇನ್ಮೇಲೆ ಮದ್ವೆಗೆ ಮಾರ್ಷಲ್ಸ್ ಗಳು ಎಂಟ್ರಿ ಕೊಡಲಿದ್ದಾರೆ. ಪ್ರತಿ ವಿವಾಹ ಕಾರ್ಯಕ್ರಮಕ್ಕೂ ಓರ್ವ ಮಾರ್ಷಲ್ ನೇಮಕ ಮಾಡಲಾಗುತ್ತಿದೆ. ಮಾಸ್ಕಾ ಹಾಕಿದ್ದಾರಾ ಇಲ್ವಾ ಅನ್ನೋದು ಪತ್ತೆ ಹಚ್ಚಲಾಗುತ್ತದೆ. ಸ್ಥಳದಲ್ಲೇ ಮಾಸ್ಕ್ ಗೆ ದಂಡ ವಸೂಲಿ ಮಾಡಲಾಗುತ್ತೆದೆ. ಮದ್ವೆ ಆಯೋಜಕರ ಮೇಲೂ ದಂಡವನ್ನು ವಿಧಿಸಲಾಗುತ್ತದೆ. ಇಂದು ಅಧಿಕೃತವಾಗಿ ಆರೋಗ್ಯ ಇಲಾಖೆಯಿಂದ ಸುತ್ತೋಲೆ ಪ್ರಕಟವಾಗಲಿದೆ.

Exit mobile version