15,000 ಶಿಕ್ಷಕರ ನೇಮಕವಾದರೂ ಆದೇಶ ಪತ್ರ ಸದ್ಯಕ್ಕಿಲ್ಲ : ಇನ್ನೂ 3- 4 ತಿಂಗಳು ಅಭ್ಯರ್ಥಿಗಳು ಕಾಯಬೇಕು

Karnataka : ರಾಜ್ಯದ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ (6ರಿಂದ 8ನೇ ತರಗತಿ) ನೇಮಕಾತಿಗೆ (appointed teachers order letter) ಸಂಬಂಧಿಸಿದಂತೆ 15,000 ಅಭ್ಯರ್ಥಿಗಳಿಗೆ ಒಂದು

ಬ್ಯಾಡ್‌ ನ್ಯೂಸ್‌ (Bad News) ಹೊರಬಿದ್ದಿದೆ. ಉನ್ನತ ಮೂಲಗಳು ತಿಳಿಸಿರುವ ಪ್ರಕಾರ ಈಗಾಗಲೇ ದಾಖಲಾತಿ ಪರಿಶೀಲನೆ ಮುಗಿಸಿ ಸದರಿ ಹುದ್ದೆಗಳಿಗೆ ಆಯ್ಕೆಯಾಗಿ ನೇಮಕ

ಆದೇಶ ಪತ್ರಕ್ಕಾಗಿ ಕಾಯುತ್ತಿರುವ ಅಭ್ಯರ್ಥಿಗಳು(appointed teachers order letter) ಕನಿಷ್ಠ ಇನ್ನು 3 ರಿಂದ 4 ತಿಂಗಳು ಕಾಯಬೇಕಿದೆ.

ಆಯ್ಕೆಪಟ್ಟಿಯನ್ನು 2022ರ ನವೆಂಬರ್‌ (November) ತಿಂಗಳಲ್ಲಿಯೇ ಬಿಡುಗಡೆ ಮಾಡಲಾಗಿತ್ತು. ಈ ಹುದ್ದೆಗಳಿಗೆ ಆದೇಶ ಪತ್ರವನ್ನು ಅಭ್ಯರ್ಥಿಗಳು 2023 ರ ಫೆಬ್ರುವರಿ (February) ತಿಂಗಳಲ್ಲೇ ನಿರೀಕ್ಷಿಸಿದ್ದರು.

ಆದರೆ ಸಾಕಷ್ಟು ಅಡೆತಡೆಗಳು ಸದರಿ ಹುದ್ದೆಗಳ ನೇಮಕಾತಿಗೆ ಎದುರಾದ ಕಾರಣ ಈಗಾಗಲೇ 7 ತಿಂಗಳು ಕಳೆದಿವೆ. ಈಗ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ನಡೆಯುತ್ತಿದೆ

ಈ ಹಿನ್ನೆಲೆಯಲ್ಲಿ ನೇಮಕ ಆದೇಶ ಪತ್ರ 15 ಸಾವಿರ ನೂತನ ಶಿಕ್ಷಕರಿಗೆ 4 ತಿಂಗಳವರೆಗೆ (appointed teachers order letter) ವಿಳಂಬವಾಗಲಿದೆ.

ಇದನ್ನೂ ಓದಿ : ಭಾರತೀಯ ಅಂಚೆ ಪೇಮೆಂಟ್‌ ಬ್ಯಾಂಕ್‌ನಲ್ಲಿ 43 ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಜೂನ್(June) 06 ರಿಂದ ರಾಜ್ಯದಲ್ಲಿ ಶಿಕ್ಷಕರ ವರ್ಗಾವಣೆ ಆರಂಭವಾಗಿದೆ. ಜುಲೈ (July) 31 ರವರೆಗೆ ಈ ಪ್ರಕ್ರಿಯೆ ನಡೆಯಲಿದೆ. ಇದರ ನಂತರ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಪ್ರಾಥಮಿಕ ಶಾಲಾ

ಶಿಕ್ಷಕರನ್ನು ಮುಖ್ಯ ಶಿಕ್ಷಕರಾಗಿ ಬಡ್ತಿ ನೀಡಬೇಕಿದೆ. 1 ರಿಂದ 2 ತಿಂಗಳ ಸಮಯ ಬಡ್ತಿ ಪ್ರಕ್ರಿಯೆ ಮುಗಿಸಲು ಬೇಕಾಗುತ್ತದೆ. ನಂತರ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಯನ್ನು 6 ರಿಂದ 8ನೇ

ತರಗತಿಗೆ ಮಾಡಲು ಖಾಲಿ ಇರುವ ಸ್ಥಳದ ಆಧಾರದಲ್ಲಿ ಕೌನ್ಸಿಲಿಂಗ್ ನಡೆಸಿ ನಂತರ ಸ್ಥಳ ನಿಯೋಜನೆ ಮಾಡಲಾಗುತ್ತದೆ. ಈ ಪ್ರಕ್ರಿಯೆಗಳು ಮುಗಿಯಲು ಸಾಕಷ್ಟು ಸಮಯ ಬೇಕಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಮೀಸಲಾತಿ ವಿಚಾರದಿಂದ ಹೆಚ್ಚು ವಿಳಂಬ

ಮೀಸಲಾತಿ ನೀಡುವ ವಿಚಾರದಲ್ಲಿ ಶಿಕ್ಷಕರ ಹುದ್ದೆಗಳಿಗೆ ವಿವಾಹಿತ ಮಹಿಳೆಯರ ಪತಿಯ ಆದಾಯ ಪ್ರಮಾಣ ಪತ್ರವನ್ನು (Income Certificate) ಪರಿಗಣಿಸಲಾಗಿತ್ತು. ಇದರಿಂದ ಒಟ್ಟು 980 ಅಭ್ಯರ್ಥಿಗಳು

ಅರ್ಹರಿದ್ದರೂ ಕೂಡ ಮೀಸಲಾತಿಯಡಿ ಹುದ್ದೆಯನ್ನು ಕಳೆದುಕೊಳ್ಳುತ್ತಿದ್ದರು. ಈ ಪ್ರಕರಣ ಇದೇ ವಿಚಾರವಾಗಿ ಕಲ್ಯಾಣ ಕರ್ನಾಟಕ ಅಭ್ಯರ್ಥಿಗಳು ಸಹ ಕೋರ್ಟ್‌ (Court) ಮೆಟ್ಟಿಲೇರಿದ್ದರಿಂದ ಮತ್ತು ಈ ಪ್ರಕರಣ

ನ್ಯಾಯಾಲಯಕ್ಕೆ ಹೋದ ಕಾರಣ ಈ ಪ್ರಕ್ರಿಯೆ ಮುಂದೆ ಸಾಗಲಿಲ್ಲ. ಅಷ್ಟರಲ್ಲಿ ಚುನಾವಣೆ ನೀತಿ ಸಂಹಿತೆ (Code of Election Conduct) ಜಾರಿಗೊಂಡಿತು ಆದ್ದರಿಂದ ಮತ್ತೆ ಈ ಪ್ರಕ್ರಿಯೆ ವಿಳಂಬವಾಯಿತು.

ಇನ್ನೊಂದೆಡೆ ಶಿಕ್ಷಕರ ಸಂಘವು (Teachers Association) ಹೆಚ್ಚುವರಿ ಶಿಕ್ಷಕರ ವರ್ಗಾವಣೆ ಮುನ್ನ ಶಿಕ್ಷಕರಿಗೆ ಬಡ್ತಿ ನೀಡಬೇಕೆಂದು ಬೇಡಿಕೆ ಇಟ್ಟಿತ್ತು. ನಂತರ ದಾಖಲೆ ಸಲ್ಲಿಸಲು ಮತ್ತಷ್ಟು ಕಾಲಾವಕಾಶ

ನೀಡಬೇಕೆಂಬ ಬೇಡಿಕೆ ಕಾರಣ ಮತ್ತು ಹೆಚ್ಚುವರಿ ಪ್ರಕ್ರಿಯೆಯು ಅವೈಜ್ಞಾನಿಕವಾಗಿದೆ ಎಂಬ ಕಾರಣದಿಂದಾಗಿ ವರ್ಗಾವಣೆ ಪ್ರಕ್ರಿಯೆ ನಡೆದಿರಲಿಲ್ಲ.ಚುನಾವಣೆ ನೀತಿಸಂಹಿತೆ ಹಿನ್ನೆಲೆಯಲ್ಲಿ ಶೈಕ್ಷಣಿಕ ವರ್ಷದ

ಕಡೆ ಘಳಿಗೆಯಲ್ಲಿ ಅವಕಾಶ ನೀಡಿದ್ದರು ಕೂಡ ಪ್ರಕ್ರಿಯೆಯನ್ನು ತಡೆಹಿಡಿಯಲಾಗಿತ್ತು.

ಇದನ್ನೂ ಓದಿ : ರೈಲ್ವೆ ಇಲಾಖೆಯಲ್ಲಿ 3624 ಖಾಲಿ ಹುದ್ದೆಗಳ ನೇಮಕಾತಿ: ಅರ್ಜಿ ಸಲ್ಲಿಸಲು ಇಲ್ಲಿದೆ ಮಾಹಿತಿ

ಈಗ ವರ್ಗಾವಣೆ ಪ್ರಕ್ರಿಯೆಗಳು ಹೊಸ ಸರ್ಕಾರದ ನಂತರ ಪ್ರಾರಂಭವಾಗಿವೆ. ಶಿಕ್ಷಕರ ಹೆಚ್ಚುವರಿ ಪ್ರಕ್ರಿಯೆ ಪರ-ವಿರೋಧದ ನಡುವೆಯೂ ನಡೆದಿದೆ. ಇನ್ನೂ ಜಿಲ್ಲಾ ಹಂತದ ವರ್ಗಾವಣೆ,

ಸಾಮಾನ್ಯ ಕೋರಿಗೆ ವರ್ಗಾವಣೆ, ಕೌನ್ಸಿಲಿಂಗ್, ವಿಭಾಗೀಯ ಹಂತದ ವರ್ಗಾವಣೆ ಪ್ರಕ್ರಿಯೆಗಳು ನಡೆಯಬೇಕಿವೆ.

ರಶ್ಮಿತಾ ಅನೀಶ್

Exit mobile version