Job News: ಇಂಡಿಯನ್ ಪೋಸ್ಟ್ ಪೇಮೆಂಟ್ ಬ್ಯಾಂಕ್ನಲ್ಲಿ (ಐಪಿಪಿಬಿ) (Indian Post office jobs) ಗುತ್ತಿಗೆ ಆಧಾರದಲ್ಲಿ ಒಟ್ಟು 43 ಎಕ್ಸಿಕ್ಯೂಟಿವ್ (ಇನ್ಫಾರ್ಮೇಷನ್ ಟೆಕ್ನಾಲಜಿ ಆಫೀಸರ್)
(Information Technology Officer) ಹುದ್ದೆಗಳನ್ನು ನೇಮಕ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಜೂನ್ 17-23 ರ ಎಂಪ್ಲಾಯ್ಮೆಂಟ್ ನ್ಯೂಸ್ನಲ್ಲಿ ಈ ಉದ್ಯೋಗ ಸುದ್ದಿಯನ್ನು ಪ್ರಕಟಿಸಲಾಗಿದೆ.
ಜುಲೈ 03, 2023 ರವರೆಗೆ ಅರ್ಜಿ ಸಲ್ಲಿಸಲು ಅವಕಾಶ (Indian Post office jobs) ನೀಡಲಾಗಿದೆ.
ಕನ್ಸಲ್ಟಂಟ್-ಐಟಿ, ಅಸೋಸಿಯೇಟ್ ಕನ್ಸಲ್ಟಂಟ್-ಐಟಿ, ಮತ್ತು ಇತರೆ ಪದನಾಮ ಹುದ್ದೆಗಳಲ್ಲಿ ಇನ್ಫಾರ್ಮೇಷನ್ ಟೆಕ್ನಾಲಜಿ ಆಫೀಸರ್ಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತದೆ.

ಬಿಇ / ಬಿ.ಟೆಕ್(BE.B.TECH) ಅನ್ನು ಇನ್ಫಾರ್ಮೇಷನ್ ಟೆಕ್ನಾಲಜಿ ಅಥವಾ ಕಂಪ್ಯೂಟರ್ ಸೈನ್ಸ್ ವಿಷಯಗಳಲ್ಲಿ ಓದಿದವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.
ಪ್ರಮುಖ ದಿನಾಂಕಗಳು :
ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 13-06-2023
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 03-07-2023

ಹುದ್ದೆಗಳ ವಿವರ :
ಎಕ್ಸಿಕ್ಯೂಟಿವ್ (ಕನ್ಸಲ್ಟಂಟ್-ಐಟಿ) : 10
ಎಕ್ಸಿಕ್ಯೂಟಿವ್ (ಅಸೋಸಿಯೇಟ್ ಕನ್ಸಲ್ಟಂಟ್-ಐಟಿ) : 30
ಎಕ್ಸಿಕ್ಯೂಟಿವ್ (ಸೀನಿಯರ್ ಕನ್ಸಲ್ಟಂಟ್) : 03
ಆಯ್ಕೆ ಪ್ರಕ್ರಿಯೆ ಹೇಗೆ ಏರುತ್ತದೆ.. ಇಲ್ಲಿದೆ ಮಾಹಿತಿ
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಸಂದರ್ಶನ / ಅನುಭವ / ಮೂಲಕ ದಾಖಲೆಗಳ ಪರಿಶೀಲನೆ ಮುಂತಾದ ಆಧಾರದಲ್ಲಿ ಶಾರ್ಟ್ ಲಿಸ್ಟ್ ಮಾಡಿ ನೇಮಕ ಮಾಡಿಕೊಳ್ಳಲಾಗುತ್ತದೆ.
ಇದನ್ನು ಓದಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಬಿಜೆಪಿ ತೆಕ್ಕೆಗೆ ; ಕಾಂಗ್ರೆಸ್ಗೆ ಮುಖಭಂಗ
ಹುದ್ದೆವಾರು ವಾರ್ಷಿಕ ವೇತನ (ಸಂಭಾವ್ಯ)
ಎಕ್ಸಿಕ್ಯೂಟಿವ್ (ಕನ್ಸಲ್ಟಂಟ್-ಐಟಿ) : Rs.15,00,000.
ಎಕ್ಸಿಕ್ಯೂಟಿವ್ (ಅಸೋಸಿಯೇಟ್ ಕನ್ಸಲ್ಟಂಟ್-ಐಟಿ) : Rs.10,00,000
ಎಕ್ಸಿಕ್ಯೂಟಿವ್ (ಸೀನಿಯರ್ ಕನ್ಸಲ್ಟಂಟ್) : Rs25,00,000.
ಅರ್ಜಿ ಸಲ್ಲಿಸುವುದು ಹೇಗೆ?
ಆಸಕ್ತ ಮತ್ತು ಅರ್ಹಅಭ್ಯರ್ಥಿಗಳು ವೆಬ್ಸೈಟ್ ವಿಳಾಸ https://ippbonline.com ಗೆ ಭೇಟಿ ನೀಡಿ ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಬಹುದು.
ದೇಶದ ತನ್ನ ಯಾವುದೇ ಬ್ರ್ಯಾಂಚ್ನಲ್ಲಿ ಇಂಡಿಯನ್ ಪೋಸ್ಟ್ ಪೇಮೆಂಟ್ ಬ್ಯಾಂಕ್ ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ಆಯ್ಕೆಯಾದವರನ್ನು ನೇಮಕ ಮಾಡಬಹುದಾಗಿರುತ್ತದೆ.
ರಶ್ಮಿತಾ ಅನೀಶ್