‘ಕರ್ನಾಟಕ ರತ್ನ’ ಪದಕವನ್ನು ಅಪ್ಪು ಪೋಟೋಗೆ ಅರ್ಪಿಸಿದ ಅಶ್ವಿನಿ ಪುನೀತ್ ರಾಜ್‍ಕುಮಾರ್

Bengaluru : ನಿನ್ನೆ ಸಂಜೆಯಷ್ಟೇ ಅಪ್ಪುರವರಿಗೆ ಮರಣೋತ್ತರವಾಗಿ ನೀಡಿದ ‘ಕರ್ನಾಟಕ ರತ್ನ’(Karnataka Ratna) ಪ್ರಶಸ್ತಿಯನ್ನು ಅಪ್ಪು(Appu Is Karnataka Ratna) ಅವರ ಪತ್ನಿ ಅಶ್ವಿನಿ ಪುನೀತ್ ರಾಜ್‍ಕುಮಾರ್ ಅವರು ಸ್ವೀಕರಿಸಿದರು.

ಸಿಎಂ ಬಸವರಾಜ ಬೊಮ್ಮಾಯಿ ಅವರು ಈ ಪ್ರಶಸ್ತಿಯನ್ನು ಪ್ರದಾನ ಮಾಡಿದರು, ಈ ವೇಳೆ ಅಶ್ವಿನಿ ಅವರು ಸರ್ಕಾರಕ್ಕೆ ಹಾಗೂ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದರು. ಈ ನಡುವೆ ಮಳೆಯ ಅಬ್ಬರ ಇದ್ದರು ಕೂಡ ಕಾರ್ಯಕ್ರಮ ಬಹಳ ಯಶಸ್ವಿಯಾಗಿ ನಡೆಯಿತು.

ಪಶಸ್ತಿ ಪ್ರದಾನಕ್ಕೂ ಮುನ್ನ ಕನ್ನಡದ ಖ್ಯಾತ ಗಾಯಕ ವಿಜಯ್ ಪ್ರಕಾಶ್ ತಂಡದಿಂದ ಕನ್ನಡದ ಗೀತೆಗಳು ಮತ್ತು ಅಪ್ಪು ನಟನೆಯ ಚಿತ್ರದ ಹಾಡಗಳನ್ನು ಹಾಡಲಾಯಿತು.

ಪುನೀತ್ ಅವರ ಹಾಡುಗಳನ್ನು ಕೇಳಿ ಅಭಿಮಾನಿಗಳು ಪುನೀತರಾಗಿರುವುದು ವಿಶೇಷವಾಗಿತ್ತು.

ಇದನ್ನೂ ಓದಿ : https://vijayatimes.com/cm-world-capital-investors/

ಕಾರ್ಯಕ್ರಮ ಅರ್ಥಪೂರ್ಣವಾಗಿ ಕೊನೆಗೊಳ್ಳುವ ಸಂದರ್ಭದವರೆಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ(Basavaraj Bommai), ತೆಲುಗು ನಟ ಜ್ಯೂನಿಯರ್ ಎನ್.ಟಿ.ಆರ್, ತಮಿಳು ನಟ ರಜನಿಕಾಂತ್, ನಟ ಶಿವರಾಜ್‍ಕುಮಾರ್, ಸುಧಾಮೂರ್ತಿ, ಸಚಿವರಾದ ವಿ.ಸುನೀಲ್ ಕುಮಾರ್, ಆರ್ ಅಶೋಕ್, ಮುನಿರತ್ನ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಇದನ್ನೂ ಓದಿ : https://vijayatimes.com/karnataka-ratna-is-appu/

ಪುನೀತ್(Appu Is Karnataka Ratna) ಅವರ ಪತ್ನಿ ಅಶ್ವಿನಿ ಹಾಗೂ ಪುತ್ರಿ ವಂದಿತ ಅವರು ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ನಂತರ ತಮ್ಮ ನಿಲಯಕ್ಕೆ ತೆರಳಿ ಕರ್ನಾಟಕ ರತ್ನ ಪ್ರಶಸ್ತಿಯ ಪದಕವನ್ನು ಅಪ್ಪು ಅವರ ಪೋಟೋಗೆ ಅರ್ಪಿಸಿದರು.

ಅಪ್ಪು ಪೋಟೋ ಜೊತೆಗೆ ಅವರ ತಂದೆ ತಾಯಿಯ ಪೋಟೋ ಜೊತೆಯಲ್ಲಿಯೇ ಇದ್ದ ಕಾರಣಕ್ಕಾಗಿ ತಂದೆ-ಮಗ ಇಬ್ಬರಿಗೂ ಒಂದೆ ರೀತಿಯ ಗೌರವ ಸೂಚಿಸುವ ಕ್ಷಣವಾಗಿತ್ತು.

https://youtu.be/49tPYYDsOhY


ಕರ್ನಾಟಕ ರತ್ನ ಪ್ರಶಸಿಯನ್ನು ಅಪ್ಪು ಅವರಿಗೆ ನೀಡಿ ಗೌರವಿಸುರುವುದಕ್ಕೆ ಪ್ರಮುಖ ಕಾರಣ ಅವರ ಸಾಮಾಜಿಕ ಸೇವೆ, ಕನ್ನಡ ಚಲನಚಿತ್ರರಂಗಕ್ಕೆ ಅವರು ಸಲ್ಲಿಸದ ಸೇವೆ, ಕೊಟ್ಟಂತ ಕೊಡುಗೆಗೆ ಎಂಬುದು ಗಮನಾರ್ಹ.

ಮೂವತ್ತು ವರ್ಷಗಳ ಬಳಿಕ ಸಿನಿಮಾ ರಂಗಕ್ಕೆ ಮತ್ತು ದೊಡ್ಮನೆ ಕುಟುಂಬಕ್ಕೆ ಕರ್ನಾಟಕ ರತ್ನ ಪ್ರಶಸಿ ಪ್ರದಾನ ದೊರೆತಿರುವುದಕ್ಕೆ ಅಭಿಮಾನಿಗಳು ಹಾಗೂ ದೊಡ್ಮನೆ ಕುಟುಂಬಕ್ಕೆ ಸಂತಸ ತಂದಿರುವ ವಿಷಯವಾಗಿದೆ.

Exit mobile version