ಚುನಾವಣೆಯಲ್ಲಿ ಮತ ಹಾಕಲು ನೀವು ಅರ್ಹರಿದ್ದೀರಾ? ಹಾಗಿದ್ರೆ, ಇದರ ಮಾಹಿತಿ ತಿಳಿಯಲು ಹೀಗೆ ಮಾಡಿ!

ಭಾರತದಲ್ಲಿ ಕೊನೆಗೂ ಲೋಕಸಭಾ ಚುನಾವಣೆಗೆ (Loksabha Election) ನಿಗದಿಪಡಿಸಿರುವ ಬೆನ್ನಲ್ಲೇ ಅದರಲ್ಲೂ ರಾಜ್ಯದಲ್ಲಿ ಲೋಕಸಭಾ ಚುನಾವಣೆ ಟಿಕೆಟ್ ಸಂಬಂಧ ಪಕ್ಷಗಳಲ್ಲಿ ಭಾರಿ ಚರ್ಚೆಗಳು ನಡೆಯುತ್ತಿದ್ದು, ಮತದಾರರಲ್ಲಿ ತಮ್ಮ ಹಕ್ಕಿನ ಬಗ್ಗೆ ಕೊಂಚ ಗೊಂದಲವೂ ಉಲ್ಬಣವಾಗಿದೆ. ಇದರ ಸಂಬಂಧ ನೀವು ಈ ಚುನಾವಣೆಯಲ್ಲಿ ಮತ ಹಾಕಲು ಅರ್ಹರಿದ್ದೀರಾ ಅನ್ನೋದನ್ನ ಒಮ್ಮೆ ಸೆಲ್ಫ್ ಚೆಕ್ ಮಾಡಿಕೊಳ್ಳಿ. ಹಾಗಿದ್ರೆ, ಮತದಾನ ಪ್ರಾರಂಭವಾಗುವ ಮೊದಲು ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಪರಿಶೀಲಿಸುವುದು ಹೇಗೆ ಎಂಬುದನ್ನು ಆನ್ಲೈನ್ (Online)ನಲ್ಲಿ ಅನ್ವೇಷಿಸುವುದರ ಬಗ್ಗೆ ಸಂಪೂರ್ಣ ಮಾಹಿತಿ ಈ ಕೆಳಕಂಡಂತಿದೆ.

1)ಮೊದಲಿಗೆ ನಿಮ್ಮ ಸ್ಮಾರ್ಟ್ ಫೋನ್‌ನಲ್ಲಿ https://electoralsearch.eci.gov.in ಎಂಬ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ. ನಂತರ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಹುಡುಕಲು ಮೂರು ಮಾರ್ಗವನ್ನು ಸೂಚಿಸಿರಲಾಗಿರುತ್ತೆ. ಇದರಲ್ಲಿರುವ ವಿವರಗಳ ಮೂಲಕ ಸರ್ಚ್ ಮಾಡುವುದು, ಎಪಿಕ್ (EPIC) ಮೂಲಕ ಹುಡುಕುವುದು, ಮೊಬೈಲ್ ಸಂಖ್ಯೆ (Search by Details, Search by EPIC, Search by Mobile) ಮೂಲಕ ಹುಡುಕುವುದು.

2) ಮೊದಲ ಪ್ರಕ್ರಿಯೆಯಲ್ಲಿ ನೀವು ವಿವರಗಳನ್ನು ಹಾಕಿದ ನಂತರ ಎರಡನೇ ವಿಧಾನವು ಸ್ವಲ್ಪ ಸುಲಭವಾಗಿದೆ. ವಿವರಗಳ ಮೂಲಕ ಸರ್ಚ್ ಮಾಡಲು ನೀವು ನಿಮ್ಮ ರಾಜ್ಯ ಮತ್ತು ಭಾಷೆಯನ್ನು ಆಯ್ಕೆ ಮಾಡಬೇಕಾಗುತ್ತದೆ. ಅನಂತರ ನಿಮ್ಮ ವೈಯಕ್ತಿಕ ವಿವರಗಳಾದ ಹೆಸರು, ಮಧ್ಯದ ಹೆಸರು ಮತ್ತು ಉಪನಾಮ, ಹುಟ್ಟಿದ ದಿನಾಂಕ, ವಯಸ್ಸು, ಲಿಂಗ, ಸಂಬಂಧಿಕರ ಹೆಸರು, ಕೊನೆಯ ಹೆಸರು ಎಲ್ಲವನ್ನು ಭರ್ತಿ ಮಾಡಿ ಜೊತೆಗೆ ಜಿಲ್ಲೆ ಮತ್ತು ವಿಧಾನಸಭಾ ಕ್ಷೇತ್ರವನ್ನು ಎಂಟ್ರಿ ಮಾಡಿದ ಬಳಿಕ ಕ್ಯಾಪ್ಚ (CAPTCHA) ನಮೂದಿಸಿ ಸರ್ಚ್ ಬಟನ್ ಒತ್ತಿದರೆ ನಿಮ್ಮ ಹೆಸರು ಕಾಣಿಸಿಕೊಳ್ಳಲಿದೆ.

3) ಎಪಿಕ್ ಮೂಲಕ ಹುಡುಕುವುದು ಮತ್ತಷ್ಟು ಸುಲಭ. ಮೊದಲು ನಿಮ್ಮ ಭಾಷೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ಎಪಿಕ್ ಸಂಖ್ಯೆ ಮತ್ತು ರಾಜ್ಯವನ್ನು ಎಂಟ್ರಿ ಮಾಡಿದ ಬಳಿಕ ಅಲ್ಲೇ ನೀಡಲಾದ ಕ್ಯಾಪ್ಚ ನಮೂದಿಸಿ ಸರ್ಚ್ ಬಟನ್ (Search Button) ಅನ್ನು ಕ್ಲಿಕ್ಕಿಸಿದರೆ ನಿಮ್ಮ ಮಾಹಿತಿ ತೆರೆದುಕೊಳ್ಳಲಿದೆ.

4) ಇನ್ನು ಕಡೆಯ ಹಂತದಲ್ಲಿ ಫೋನ್ ನಂಬರ್ ಮೂಲಕ ಸರ್ಚ್ ಮಾಡಲು ನಿಮ್ಮ ರಾಜ್ಯ ಮತ್ತು ಭಾಷೆಯನ್ನು ಆಯ್ಕೆ ಮಾಡಿ ಬಳಿಕ ಕೇಳಲಾದ ಜಾಗದಲ್ಲಿ ನಿಮ್ಮ ಮೊಬೈಲ್ (Mobile) ಸಂಖ್ಯೆಯನ್ನು ನಮೂದಿಸಿ. ತದ ನಂತರ ಕ್ಯಾಪ್ಚ ಎಂಟ್ರಿ ಮಾಡಿದರೆ ನಿಮ್ಮ ಸೆಲ್ ಫೋನ್ ಗೆ ಓಟಿಪಿ(OTP) ಬರಲಿದೆ ಅದನ್ನುಅಲ್ಲಿ ನಮೂದಿಸಿ. ನಂತರದಲ್ಲಿ ನಿಮ್ಮ ವೋಟರ್ ಐಡಿ ಮಾಹಿತಿ ಕಾಣ ಸಿಗಲಿದೆ.

ನಿಮ್ಮ ಹೆಸರು ಇಲ್ಲಿ ಕಾಣಿಸಲಿಲ್ಲ ಎಂದರೆ ಏನು ಮಾಡಬೇಕು?
ಚಿಂತೆ ಬೇಡ. ನಿಮ್ಮ ವೈಯಕ್ತಿಕ ವಿವರಗಳು, ಮತದಾನ ಕೇಂದ್ರ ಮತ್ತು ಚುನಾವಣಾ ಅಧಿಕಾರಿಗಳ ವಿವರಗಳನ್ನು ಸಹ ನೀವು ಅಲ್ಲಿ ಕಾಣಬಹುದು. ಆದ್ದರಿಂದ ನೀವು ಯಾವುದೇ ಪ್ರಶ್ನೆಯನ್ನು ಹೊಂದಿದ್ದರೆ ಅಥವಾ ಹೊಸದಾಗಿ ಅರ್ಜಿ ಸಲ್ಲಿಸಲು ಬಯಸಿದರೆ ನೀವು ನೇರವಾಗಿ ಚುನಾವಣಾ ಅಧಿಕಾರಿ ಅಥವಾ ಬೂತ್ ಮಟ್ಟದ ಅಧಿಕಾರಿಯನ್ನು ಅಧಿಕೃತ ವೆಬ್ಸೈಟ್ನಲ್ಲಿ (Website) ಸಂಪರ್ಕಿಸಬಹುದು.

Exit mobile version