ಅರ್ಜುನ್​ ಸರ್ಜಾ ವಿರುದ್ಧ ಮೀ ಟೂ ಕೇಸ್‌ಗೆ ಬಿಗ್ ಟ್ವಿಸ್ಟ್ : ಶ್ರುತಿ ಹರಿಹರನ್‌ಗೆ ನೋಟಿಸ್​ ಜಾರಿ ಮಾಡಿದ ಖಾಕಿ

ಬೆಂಗಳೂರು : ಮೂರು ವರ್ಷಗಳ ಹಿಂದೆ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಮೀ ಟೂ (arjunsarja metoo case twist) ಪ್ರಕರಣ ಸ್ಯಾಂಡಲ್‌ವುಡ್‌ನಲ್ಲಿ (Sandalwood) ಭಾರೀ ಸಂಚಲನ ಮೂಡಿಸಿತ್ತು.

ದಕ್ಷಿಣ ಭಾರತದ ಖ್ಯಾತ ಕಲಾವಿದ ಶಕ್ತಿ ಪ್ರಸಾದ್ ಅವರ ಪುತ್ರ, ಆಕ್ಷನ್ ಕಿಂಗ್ ಎಂದು ಕರೆಯಲ್ಪಡುವ ನಟ ಅರ್ಜುನ್ ಸರ್ಜಾ ವಿರುದ್ಧ ನಟಿ ಶ್ರುತಿ ಹರಿಹರನ್‌ “ಮೀ ಟೂ” ಎಂದು ಆರೋಪಿಸಿದ್ದಾರೆ.

ಆದರೆ, ಪ್ರಕರಣ ದಾಖಲಿಸಿ ಮೂರು ವರ್ಷ ಕಳೆದರೂ ನಟ ಅರ್ಜುನ್ ಸರ್ಜಾ(Arjun Sarja) ವಿರುದ್ಧ ಸೂಕ್ತ ಸಾಕ್ಷ್ಯಾಧಾರಗಳು ಸಿಗದ ಹಿನ್ನೆಲೆಯಲ್ಲಿ ಪೊಲೀಸರು ನಟಿ ಶ್ರುತಿ ಹರಿಹರನ್

(Shruti Hariharan) ಅವರಿಗೆ ನೋಟಿಸ್ ಜಾರಿ ಮಾಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ : ಗೃಹ ಲಕ್ಷ್ಮಿ ಯೋಜನೆ ಲಕ್ಷ್ಮಿ ಹೆಬ್ಬಾಳ್ಕರ್ ತವರಲ್ಲೇ ಲಾಂಚ್: ಬೆಳಗಾವಿಯಿಂದಲೇ ಏಕೆ ಚಾಲನೆ?

ಹೌದು, ದಕ್ಷಿಣ ಭಾರತದ ಚಿತ್ರರಂಗವನ್ನೇ ಬೆಚ್ಚಿಬೀಳಿಸಿದ ಮೀ ಟೂ” ಪ್ರಕರಣದಲ್ಲಿ ಮಹತ್ವದ ತಿರುವು ಸಿಕ್ಕಿದ್ದು, ಆಕ್ಷನ್ ಕಿಂಗ್ ನಟ ಅರ್ಜುನ್ ಸರ್ಜಾ ವಿರುದ್ಧ ನಟಿ ಶ್ರುತಿ ಹರಿಹರನ್ ಮಾಡಿರುವ ಆರೋಪಕ್ಕೆ ತಕ್ಕ ಸಾಕ್ಷ್ಯವನ್ನು

ನೀಡಿಲ್ಲ. ಅದರಂತೆ, ಸಿಆರ್‌ಪಿಸಿ(CRPC) ನಿಗದಿಪಡಿಸಿದಂತೆ ಫಾರ್ಮ್ 159 ರ ಅಡಿಯಲ್ಲಿ ಪೊಲೀಸರು ನಟಿ ಶ್ರುತಿ ಹರಿಹರನ್‌ಗೆ ನೋಟಿಸ್ ಜಾರಿ ಮಾಡಿದ್ದಾರೆ.

ಅಲ್ಲದೇ, ಕಬ್ಬನ್ ಪಾರ್ಕ್ (Cubbon Park) ಪೊಲೀಸರು ಕೂಡ ಬಿ ರಿಪೋರ್ಟ್ ಸಿದ್ಧಪಡಿಸಲು ನಿರ್ಧರಿಸಿದ್ದಾರೆ ಎಂದು (arjunsarja metoo case twist) ತಿಳಿದುಬಂದಿದೆ.

ಏನಿದು ಪ್ರಕರಣ?

ವಿಸ್ಮಯ ಚಿತ್ರದ (Vismaya Movie) ಚಿತ್ರೀಕರಣದ ವೇಳೆ ನಟ ಅರ್ಜುನ್ ಸರ್ಜಾ ವಿರುದ್ಧ ನಟಿ ಶ್ರುತಿ ಹರಿಹರನ್ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ.

ಆದರೆ ಸೂಕ್ತ ಸಾಕ್ಷಿಗಳು ಸಿಗದ ಪ್ರಕರಣದಿಂದ ಅರ್ಜುನ್ ಸರ್ಜಾಗೆ ಸಾಕಷ್ಟು ರಿಲೀಫ್ ಸಿಗುವ ಸಾಧ್ಯತೆ ಇದೆ. ವಾಸ್ತವವಾಗಿ, ವಿಸ್ಮಯದಲ್ಲಿ ನಟರಾದ ಅರ್ಜುನ್ ಸರ್ಜಾ ಮತ್ತು ಶ್ರುತಿ ಹರಿಹರನ್ ಗಂಡ ಮತ್ತು

ಹೆಂಡತಿಯಾಗಿದ್ದಾರೆ. ಚಿತ್ರೀಕರಣದ ವೇಳೆ ಅರ್ಜುನ್ ಸರ್ಜಾ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ನಟಿ ಶ್ರುತಿ ಹರಿಹರನ್ ಆರೋಪ ಮಾಡಿದ ನಂತರ ಇಡೀ ಸ್ಯಾಂಡಲ್‌ವುಡ್ ಹೊತ್ತಿ ಉರಿಯುತ್ತಿದೆ.

ಇದನ್ನೂ ಓದಿ : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹೆಚ್ಚುತ್ತಿವೆ ಪ್ರೇಮಿಗಳ ಕೊಲೆ : 8 ತಿಂಗಳಲ್ಲಿ 7 ಭಯಾನಕ ಹತ್ಯೆ

ಈ ಸಂದರ್ಭದಲ್ಲಿ ಕೆಲವರು ನಟಿ ಶ್ರುತಿ ಅವರನ್ನು ಬೆಂಬಲಿಸಿದರೆ ಹಲವರು ಅರ್ಜುನ್ ಸರ್ಜಾ ಅವರನ್ನು ಬೆಂಬಲಿಸಿದರು. ಈ ಬಗ್ಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿಯೂ (Karnataka

Board of Film Commerce) ಕೂಡ ನಟ ರೆಬೆಲ್​ ಸ್ಟಾರ್ ಅಂಬರೀಷ್ (Ambareesh)​ ನೇತೃತ್ವದಲ್ಲಿ ಸಭೆ ನಡೆಸಲಾಗಿತ್ತು. ನಟಿ ಶ್ರುತಿ ಹರಿಹರನ್ ಸಭೆಯಿಂದ ಮಧ್ಯದಲ್ಲೇ ನಿರ್ಗಮಿಸಿದರು.

ಈ ವೇಳೆ ಕಾನೂನಿನ ಮೂಲಕವೇ ನ್ಯಾಯ ಪಡೆಯುವುದಾಗಿ ಹೇಳಿದರು. ಅರ್ಜುನ್ ಸರ್ಜಾ ವಿರುದ್ಧ ಶೃತಿ ಹರಿಹರನ್ ಅವರು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಈ ಪ್ರಕಾರಣವು ಐಪಿಸಿ 354ಎ ಹಾಗೂ ಜೀವಬೆದರಿಕೆ ಐಪಿಸಿ 506 ಆರೋಪದಡಿ ಕೇಸ್ ದಾಖಲಾಗಿತ್ತು.ಯುಬಿ ಸಿಟಿ ಮತ್ತು ದೇವನಹಳ್ಳಿ (Devanahalli) ಹಾಗೂ ಇತರೆ ಜಾಗದಲ್ಲಿ ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷಿಗಾಗಿ

ಪೊಲೀಸರು ಪರಿಶೀಲನೆ ನಡೆಸಿದ್ದರು.ಶ್ರುತಿ ಹರಿಹರನ್​ ಮಾಡಿದ್ದ ಆರೋಪಕ್ಕೆ ಮೂರು ವರ್ಷ ಕಳೆದರೂ ಸೂಕ್ತ ಸಾಕ್ಷಿ ಸಿಕ್ಕಿಲ್ಲ. ಹಾಗಾಗಿ ಪೊಲೀಸರು ಇದೀಗ ಬಿ ರಿಪೋರ್ಟ್​ ನೀಡಲು ಸಿದ್ಧರಾಗಿದ್ದಾರೆ.

ರಶ್ಮಿತಾ ಅನೀಶ್

Exit mobile version