ಐ ಲವ್ ತಾಲಿಬಾನ್ ಎಂದು ಪೋಸ್ಟ್ ಹಾಕಿದ ಯವಕನ ಬಂಧನ

ಬಾಗಲಕೋಟೆ ಆ 23 : ತಾಲಿಬಾನ್‌ಗಳ ಆಟ್ಟಹಾಸಕ್ಕೆ ವಿಶ್ವವೇ ವಿರೋಧ ವ್ಯೆಕ್ತ ಪಡಿಸುತ್ತಿರುವ ಹಿನ್ನಲೆಯಲ್ಲಿ ಬಾಗಲಕೋಟೆಯ ಯುವಕನೊಬ್ಬ ಐ ಲವ್ ತಾಲಿಬಾನ್ ಎಂದು ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿದ ಹಿನ್ನಲೆಯಲ್ಲಿ ಬಾಗಲಕೋಟೆ ಜಿಲ್ಲೆಯ ಜಮಖಂಡಿಯ ಆಸಿಫ್ ಗಲಗಲಿ ಎಂಬಾತನನ್ನು ಜಮಖಂಡಿ ಪೊಲೀಸರು ಬಂಧಿಸಿದ್ದಾರೆ.

ಆಸಿಫ್ ತನ್ನ ಫೇಸ್‍ಬುಕ್ ಪೋಸ್ಟ್​​ನಲ್ಲಿ ಐ ಲವ್ ತಾಲಿಬಾನ್ ಎಂದು ಬರೆದುಕೊಂಡಿದ್ದ. ಈ ಪೋಸ್ಟ್ ವೈರಲ್ ಕೂಡ ಆಗಿತ್ತು. ಈ ಬಗ್ಗೆ ಮುಸ್ಲೀಂ ಧರ್ಮದವರಿಂದಲೇ ವಿರೋಧ ವ್ಯಕ್ತವಾಗಿತ್ತು. ಅಲ್ಲದೆ ದೇಶದ್ರೋಹದ ಕೃತ್ಯ ಖಂಡಿಸಿ ಆತನನ್ನು ಬಂಧಿಸುವಂತೆ ಪೊಲೀಸರಿಗೆ ಮನವಿ ಮಾಡಿದ್ದರು. ಈ ಪೋಸ್ಟ್ ವಿರುದ್ಧ ಹಿಂದೂ ಸಂಘಟನೆಗಳ ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಈ ಹಿನ್ನಲೆಯಲ್ಲಿ ಆಸಿಫ್ ತಲೆಮರೆಸಿಕೊಂಡಿದ್ದ, ಆದರೆ ಪೊಲೀಸರ ಕ್ಷಿಪ್ರ ಕಾರ್ಯಚರಣೆಯಿಂದ ಆಸಿಫ್‌ನನ್ನು ಬಂಧಿಸಿಲಾಗಿದ್ದು ಈ ಬಗ್ಗೆ ಜಮಖಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version