ಬಿಸಿಸಿಐನಿಂದ ಬ್ಯಾನ್ ಆದ ಅಂಪೈರ್ ಅಸಾದ್ ರೌಫ್ ಈಗ ಪಾಕಿಸ್ತಾನದಲ್ಲಿ ಬಟ್ಟೆ, ಶೂಗಳ ಮಾರಾಟ!

ASAD Rauf

ಮಾಜಿ ಐಸಿಸಿ(ICC) ಎಲೈಟ್ ಅಂಪೈರ್(Elite Umpire) ಅಸದ್ ರೌಫ್(Asad Rauf) ಈಗ ಪಾಕಿಸ್ತಾನದ(Pakistan) ಅಂಗಡಿಯೊಂದರಲ್ಲಿ ಬಟ್ಟೆ ಮತ್ತು ಶೂಗಳನ್ನು ಮಾರಾಟ ಮಾಡುತ್ತಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ, 2000 ರಿಂದ 2013 ರವರೆಗೆ 170 ಪಂದ್ಯಗಳಲ್ಲಿ ಅಂಪೈರ್ ಆಗಿ ಪಂದ್ಯಗಳನ್ನು ನಡೆಸಿಕೊಟ್ಟ ರೌಫ್ ಅವರು ಇನ್ನು ಮುಂದೆ ಕ್ರಿಕೆಟ್‌ನಲ್ಲಿ ಆಸಕ್ತಿ ಹೊಂದಿಲ್ಲ ಮತ್ತು ತನಗಾಗಿ ಅಲ್ಲ ತಮ್ಮ ಸಿಬ್ಬಂದಿಗಾಗಿ ಅಂಗಡಿಯನ್ನು ನಡೆಸುತ್ತಿದ್ದಾರೆ ಎಂದು ಹೇಳಿಕೊಂಡಿದ್ದಾರೆ.

2016 ರಲ್ಲಿ ಅಂಪೈರ್ ವೃತ್ತಿಯಲ್ಲಿದ್ದ ಸಮಯದಲ್ಲಿ ಭ್ರಷ್ಟ ಮತ್ತು ಆಟಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಬಿಸಿಸಿಐ ಅವರನ್ನು ಅಂಪೈರ್ ವೃತ್ತಿಯಿಂದ ನಿಷೇಧ(Ban) ಮಾಡಿತು. ಇದಾದ ಬಳಿಕ ಶ್ರೀ ಅಸಾದ್ ರೌಫ್ ಅವರನ್ನು ಐದು ವರ್ಷಗಳ ಅವಧಿಗೆ ಅಂಪೈರಿಂಗ್ ಮಾಡಲು ಅಥವಾ ಯಾವುದೇ ರೂಪದಲ್ಲಿ ಕ್ರಿಕೆಟ್ ಆಡದಂತೆ ಹಾಗೂ ಪ್ರತಿನಿಧಿಸುವುದರಿಂದ ಮತ್ತು ಮಂಡಳಿ ಮತ್ತು ಅದರ ಅಂಗಸಂಸ್ಥೆಗಳ ಚಟುವಟಿಕೆಗಳೊಂದಿಗೆ ಯಾವುದೇ ರೀತಿಯಲ್ಲಿ ಸಂಬಂಧ ಹೊಂದುವಂತಿಲ್ಲ ಎಂದು ಹೇಳಿ ನಿಷೇಧಿಸಲಾಯಿತು.

ಬುಕ್ಕಿಗಳಿಂದ ಉಡುಗೊರೆ ಸ್ವೀಕರಿಸಿದ ಆರೋಪ ಮತ್ತು 2013ರ ಐಪಿಎಲ್(IPL) ಸ್ಪಾಟ್ ಫಿಕ್ಸಿಂಗ್(Spot Fixing) ಹಗರಣದಲ್ಲಿ ಭಾಗಿಯಾಗಿದ್ದರು ಎಂದು ಹೇಳಲಾಗಿದೆ. “ಮೈನೆ 2013 ಕೆ ಬಾದ್ ಕ್ರಿಕೆಟ್ ಸೆ ಬಿಲ್ಕುಲ್ ಹೈ…ಕ್ಯುಂಕಿ ಮೈ ಜೋ ಕಾಮ್ ಛೋಡ್ತಾ ಹು ಉಸ್ಕೊ ಛೋಡ್ ಹೈ ದೇತಾ ಹು (2013 ರಿಂದ ನಾನು ಆಟದೊಂದಿಗೆ ಸಂಪರ್ಕದಲ್ಲಿಲ್ಲ, ಏಕೆಂದರೆ ನಾನು ಏನನ್ನಾದರೂ ಬಿಟ್ಟರೆ ನಾನು ಅದನ್ನು ಸಂಪೂರ್ಣವಾಗಿ ಬಿಡುತ್ತೇನೆ)” ಎಂದು ರೌಫ್ ಸಂದರ್ಶನದಲ್ಲಿ ಹೇಳಿದ್ದಾರೆ.

ಈ ಹಿಂದೆ ಅಂಪೈರ್‌ಗಳ ಎಲೈಟ್ ಪ್ಯಾನೆಲ್‌ನಲ್ಲಿದ್ದರೂ ಅಂಗಡಿಯನ್ನು ನಡೆಸುವ ಅವರ ಆಲೋಚನೆಯ ಬಗ್ಗೆ ಮನಬಿಚ್ಚಿ ಮಾತನಾಡಿದ ಅವರು, “ಭಾಯ್, ಯೇ ಮೇರಾ ಕಾಮ್ ನಹೀ ಹೈ, ಯೇ ಮೇರೆ ಸ್ಟಾಫ್ ಕಿ ರೋಜಿ ಲಗೀ ಹುಯಿ ಹೈ, ಯೇ ಮೈ ಉಂಕೆ ಲಿಯೇ ಕೃತಾ ಹು( ಇದು ನನಗೆ ಅಲ್ಲ, ಇದು ನನ್ನ ಸಿಬ್ಬಂದಿಯ ದೈನಂದಿನ ವೇತನಕ್ಕಾಗಿ, ನಾನು ಅವರಿಗಾಗಿ ಕೆಲಸ ಮಾಡುತ್ತಿದ್ದೇನೆ)

170 ಪಂದ್ಯಗಳಲ್ಲಿ, ರೌಫ್ 49 ಟೆಸ್ಟ್, 98 ODI ಮತ್ತು 23 T20I ಪಂದ್ಯಗಳಲ್ಲಿ ಅಂಪೈರ್ ಮಾಡಿದ್ದಾರೆ. ಯಾವುದೇ ಕೆಲಸ ಮಾಡಿದರೂ ಅದರ ಉತ್ತುಂಗಕ್ಕೇರುವುದು ನನ್ನ ಅಭ್ಯಾಸ. ನಾನು ಅಂಗಡಿಯವನಾಗಿ ಕೆಲಸ ಮಾಡಲು ಪ್ರಾರಂಭಿಸಿದೆ, ನಾನು ಅದರ ಉತ್ತುಂಗವನ್ನು ತಲುಪಿದ್ದೇನೆ, ನಾನು ಕ್ರಿಕೆಟ್ ಆಡಿದೆ, ನಾನು ಉತ್ತುಂಗಕ್ಕೇರಿದೆ. ನಂತರ ನಾನು ಅಂಪೈರ್ ಆಗಿ ಪ್ರಾರಂಭಿಸಿದಾಗ ಇಲ್ಲಿಯೂ ಉತ್ತುಂಗಕ್ಕೇರಬೇಕು ಎಂದು ಅಂದುಕೊಂಡೆ ಹಾಗೆಯೇ ನಾನು ಸಾಧಿಸಿದೆ.

ಜೀವನದಲ್ಲಿ ಸಾಕಷ್ಟು ಹಣವನ್ನು ನೋಡಿದ್ದೇನೆ ಮತ್ತು ನಾನು ಜಗತ್ತನ್ನು ಸಂಪೂರ್ಣವಾಗಿ ನೋಡಿದ್ದೇನೆ ಎಂದು ರೌಫ್ ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ.

Exit mobile version