ಬೇಸಿಗೆಯ ಮಿತ್ರ: ಬೂದುಕುಂಬಳಕಾಯಿ ಜ್ಯೂಸನ್ನು ಖಾಲಿ ಹೊಟ್ಟೆಯಲ್ಲಿ ಕುಡಿದು ಬದಲಾವಣೆ ನೋಡಿ.

Ash Gourd Health Tips: ಬೂದುಕುಂಬಳ ಕಾಯಿಯಲ್ಲಿ ಮ್ಯಾಜಿಕ್ಕಾ! ಇದರೊಳಗಿದೆಯಾ ಅದ್ಭುತ ಶಕ್ತಿ ಅಂತ ಅಚ್ಚರಿ ಪಡಬಹುದು ನೀವು. “ಕೂಷ್ಮಾಂಡ” ಆಯುರ್ವೇದದಲ್ಲಿ ಕರೆಯಲ್ಪಡುವ ಬೂದು ಬಣ್ಣದ ಕುಂಬಳಕಾಯಿಯನ್ನು ಬೇಸಿಗೆಯ ಮಿತ್ರ ಅಂತ ಕರೆಯಲಾಗುತ್ತೆ. ಯಾಕೆಂದರೆ ಈ ಬೂದುಕುಂಬಳಕಾಯಿಯನ್ನು (Ash Gourd) ನಿತ್ಯವೂ ಜ್ಯೂಸ್ ಮಾಡಿ ಕುಡಿಯುವುದರಿಂದ ಸಾಕಷ್ಟು ಆರೋಗ್ಯಕರ ಪ್ರಯೋಜನಗಳನ್ನು ನಿಮ್ಮದಾಗಿಸಿಕೊಳ್ಳಬಹುದು.

ತೂಕ ಇಳಿಸಲು ಸಹಾಯ ಮಾಡುತ್ತದೆ.
ಬೂದುಕುಂಬಳಕಾಯಿಯಲ್ಲಿ ಎಲ್ಲ ಬಗೆಯ ಅತ್ಯಗತ್ಯ ಪೋಷಕಾಂಶಗಳ ಗುಣ ಇದ್ದು, ಕಡಿಮೆ ಕ್ಯಾಲರಿ (Calorie) ಹೊಂದಿರೋದ್ರಿಂದ ಇದು ತೂಕ ಇಳಿಸಲು ಪ್ರಯತ್ನಿಸುತ್ತಿರೋರಿಗೆ ಅತ್ಯಂತ ಒಳ್ಳೆಯ ಡ್ರಿಂಕ್‌ ಆಗಿದೆ. ದೇಹಕ್ಕೆ ಬೇಕಾದ ನೀರಿನಂಶವನ್ನೂ ನೀಡುವ ಜೊತೆಗೆ ಹೆಚ್ಚಾದ ಪೋಷಕಾಂಶವನ್ನೂ ನೀಡುತ್ತೆ.

ದೇಹವನ್ನು ತಂಪಾಗಿರಿಸುತ್ತೆ
ಬೂದು ಕುಂಬಳಕಾಯಿಗೆ ಪ್ರಕೃತಿ ನೀಡಿದ ಅದ್ಭುತ ವರದಾನಗಳಲ್ಲಿ ಇದೂ ಒಂದು. ಇದು ದೇಹದೊಳಗಿನ ಉಷ್ಣಕಾರಕ ಗುಣಗಳನ್ನು ಕಡಿಮೆ ಮಾಡುತ್ತೆ. ಹಾಗಾಗಿಯೇ ಇದು ಬೇಸಿಗೆಗೆ ಸರಿಯಾದ ಆಹಾರವಾಗಿದೆ. ಬೇಸಿಗೆಯ ಉರಿ ಬಿಸಿಲಿನಿಂದ (Summer) ದೇಹವನ್ನು ತಂಪಾಗಿಸಲು ಕುಂಬಳಕಾಯಿ ಜ್ಯೂಸ್ ಒಂದು ಬೆಸ್ಟ್‌ ಆಪ್ಷನ್‌. ಅಲ್ಲದೆ ಪಿತ್ತದ ಸಮಸ್ಯೆ ಉಳ್ಳವರಿಗಂತೂ ಇದು ಅತ್ಯುತ್ತಮ ಪರಿಹಾರ ನೀಡುತ್ತೆ.

ಡಿಟಾಕ್ಸಿಫೈಯರಾಗಿ ಕಾರ್ಯನಿರ್ವಹಿಸುತ್ತದೆ:
ಬೂದು ಕುಂಬಳಕಾಯಿ ಅತ್ಯುತ್ತಮ ಡಿಟಾಕ್ಸಿಫೈಯರ್‌ (Detoxifier) ಕೂಡ ಹೌದು. ಇದರ ಜ್ಯೂಸನ್ನು ನಿತ್ಯವೂ ಬೆಳಗ್ಗೆ ಎದ್ದ ಕೂಡಲೇ ಕುಡಿಯುವುದರಿಂದ ದೇಹದ ಕಲ್ಮಶಗಳೆಲ್ಲವನ್ನು ಹೊರ ಕಳಿಸುವಲ್ಲಿ ಇದು ಮುಖ್ಯ ಪಾತ್ರವಹಿಸುತ್ತದೆ. ಇದು ರಕ್ತ ಶುದ್ಧಿ ಮಾಡುತ್ತದೆ. ಮುಖ್ಯವಾಗಿ ಚರ್ಮದ ಕಾಂತಿಯನ್ನು ಕಾಪಾಡುತ್ತದೆ.

ಮಾರಕ ರೋಗವನ್ನು ದೂರವಿರಿಸುತ್ತೆ!
ಬೂದು ಕುಂಬಳಕಾಯಿ ಜ್ಯೂಸನ್ನು ನಿತ್ಯವೂ ಕುಡಿಯುವುದರಿಂದ ಕ್ಯಾನ್ಸರ್‌ನಂತಹ (Cancer) ಮಾರಕ ರೋಗಗಳ ದಾಳಿಯಿಂದ ದೇಹವನ್ನು ಕಾಪಾಡಬಹುದು. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ಆಗಾಗ ಸುಲಭವಾಗಿ ಅನಾರೋಗ್ಯಕ್ಕೆ ತುತ್ತಾಗುವ ಸಂಭವವನ್ನು ಕಡಿಮೆ ಮಾಡುತ್ತೆ. ಇನ್ನು ಇದು ಹೃದಯ ಸ್ನೇಹಿಯಾದ್ದರಿಂದ ಹೃದಯದ ತೊಂದರೆ ಇರುವ ಮಂದಿಗೂ ಇದು ಒಳ್ಳೆಯದು.

ಇನ್ನು ಇದರಲ್ಲಿ ವಿಟಮಿನ್‌ ಎ (Vitamin A) ಹೇರಳವಾಗಿ ಇರೋದ್ರಿಂದ ಇದು ಕಣ್ಣಿನ ಆರೋಗ್ಯಕ್ಕೆ ಬಹಳ ಉತ್ತಮವಾಗಿದ್ದು, ಕಣ್ಣಿನ ಸಮಸ್ಯೆ ಇರುವವರು ಕೂಡ ಬೂದುಕುಂಬಳಕಾಯಿ ತಿನ್ನುವ ಮತ್ತು ಜ್ಯೂಸ್‌ ಕುಡಿಯುವ ಮೂಲಕ ಪ್ರಯೋಜನ ಪಡೆಯಬಹುದಾಗಿದೆ. ಪ್ರತಿನಿತ್ಯ ಎದ್ದಕೂಡಲೇ ಖಾಲಿ ಹೊಟ್ಟೆಯಲ್ಲಿ ಈ ಬೂದುಕುಂಬಳಕಾಯಿ ಜ್ಯೂಸ್ (Juice) ಕುಡಿಯುವ ಅಭ್ಯಾಸವನ್ನು ಬೆಳೆಸಿಕೊಂಡು ನಮ್ಮ ದೇಹವನ್ನ ರೋಗ ಮುಕ್ತವನ್ನಾಗಿಸಬಹುದು.

ಭವ್ಯಶ್ರೀ ಆರ್.ಜೆ

Exit mobile version