ಪಟೇಲರು RSS ಅನ್ನು ನಿಷೇಧಿಸಿದ್ದರು : ಅಶೋಕ್ ಗೆಹ್ಲೋಟ್!

ashok gehlot

ಸರ್ದಾರ್ ವಲ್ಲಭಭಾಯಿ ಪಟೇಲರು(Sardar Vallabhai Patel) ಮಹಾತ್ಮ ಗಾಂಧಿ(Mahathma Gandhi) ಹತ್ಯೆಯಾದ ನಂತರ ಗಾಂಧಿ ಹತ್ಯೆಯಲ್ಲಿ ಆರ್‍ಎಸ್‍ಎಸ್(RSS) ಪಾತ್ರವಿರುವುದನ್ನು ಮನಗಂಡು ಸಂಘಟನೆಯನ್ನು ನಿಷೇಧಿಸಿದ್ದರು ಎಂದು ಆರ್‍ಎಸ್‍ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರಿಗೆ ರಾಜಸ್ಥಾನ ಮುಖ್ಯಮಂತ್ರಿ(Rajasthan Chiefminister) ಅಶೋಕ್ ಗೆಹ್ಲೋಟ್(Ashok Gehlot) ತಿರುಗೇಟು ನೀಡಿದ್ದಾರೆ.

ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ಗಾಂಧಿ ಹತ್ಯೆಯ ನಂತರ ವಲ್ಲಭಭಾಯಿ ಪಟೇಲರು ಆರ್‍ಎಸ್‍ಎಸ್ ಸಂಘಟನೆಯನ್ನು ನಿಷೇಧಿಸಿದ್ದರು. ಆಗ ಆರ್‍ಎಸ್‍ಎಸ್ ಕ್ಷಮೆಯಾಚಿಸಿತ್ತು. ನಮ್ಮ ಸಂಘಟನೆ ಎಂದಿಗೂ ರಾಜಕೀಯ ಕ್ಷೇತ್ರಕ್ಕೆ ಕಾಲಿಡುವುದಿಲ್ಲ. ನಾವು ಸಾಂಸ್ಕೃತಿಕ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿ ನಮ್ಮ ಚಟುವಟಿಕೆಗಳನ್ನು ಮಾಡುತ್ತೇವೆ. ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾತ್ರ ಹಮ್ಮಿಕೊಳ್ಳುತ್ತೇವೆ ಎಂದು ವಾಗ್ದಾನವನ್ನು ಆರ್‍ಎಸ್‍ಎಸ್ ನೀಡಿತ್ತು ಎಂದರು.

ಇಂದು ಆರ್‍ಎಸ್‍ಎಸ್ ಸಂಘಟನೆ ರಾಜಕೀಯ ಕ್ಷೇತ್ರಕ್ಕೆ ಕಾಲಿಟ್ಟಿದೆ. ಬಿಜೆಪಿ ಮೂಲಕ ತನ್ನ ರಾಜಕೀಯ ಅಜೆಂಡಾಗಳನ್ನು ಈಡೇರಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ನಾವು ಸಾಮಾಜಿಕ ಕಾರ್ಯಕರ್ತರು ಎಂದು ಹೇಳಿಕೊಳ್ಳುವ ಆರ್‍ಎಸ್‍ಎಸ್ ಕಾರ್ಯಕರ್ತರು ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ಇನ್ನು ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ಆರ್‍ಎಸ್‍ಎಸ್ ಪಾತ್ರ ಏನು? ಎಂಬುದನ್ನು ಮೋಹನ್ ಭಾಗವತ್ ಸ್ಪಷ್ಟಪಡಿಸಬೇಕು. ಸಮಾಜಕ್ಕೆ ಆರ್‍ಎಸ್‍ಎಸ್ ಕೊಡುಗೆ ಏನು ಎಂಬುದನ್ನು ತಿಳಿಸಬೇಕು.

ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾರ್ಯಗಳನ್ನು ಮಾಡಬೇಕಾದ ಆರ್‍ಎಸ್‍ಎಸ್ ಸಂಘಟನೆ ಇಂದು ಏನು ಮಾಡುತ್ತಿದೆ ಎಂಬುದನ್ನು ಗಮನಿಸಬೇಕು. ಆರ್‍ಎಸ್‍ಎಸ್ ಸಮಾಜದಲ್ಲಿ ಬಡವರು ಮತ್ತು ಶ್ರೀಮಂತರು ಎಂದು ವಿಭಜನೆ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು. ಇನ್ನು ಮುಂದಿನ 15 ವರ್ಷಗಳಲ್ಲಿ ಅಖಂಡ ಭಾರತವನ್ನು ನಿರ್ಮಾಣ ಮಾಡಲಾಗುವುದು ಎಂದು ಮೋಹನ್ ಭಾಗವತ್ ಹೇಳಿದ್ದಾರೆ. ಹಾಗಾದರೆ ಅಖಂಡ ಭಾರತ ಎಂದರೆ ಏನು? ಎಂಬುದನ್ನು ತಿಳಿಸಬೇಕು. ಅಖಂಡ ಭಾರತ ನಿರ್ಮಾಣ ನಿಮ್ಮ ಗುರಿಯೇ? ಎಂದು ಕಿಡಿಕಾರಿದರು.

Exit mobile version