ಕನ್ನಡ ಚಿತ್ರರಂಗದ ಮತೊಬ್ಬ ಜನಪ್ರಿಯ ನಟ ವಿಧಿವಶ!

passed away

ಕನ್ನಡ ಚಿತ್ರರಂಗದಲ್ಲಿ ಹಲವಾರು ವರ್ಷಗಳಿಂದ ಸಕ್ರಿಯವಾಗಿದ್ದ ಖ್ಯಾತ ಖಳನಟ ಅಶೋಕ್ ರಾವ್ ನಿಧನರಾಗಿದ್ದಾರೆ. ಕಳೆದ ಹಲವು ದಿನಗಳಿಂದ ಕ್ಯಾನ್ಸರ್ನಿಂದ ಬಳಲುತ್ತಿದ್ದ ಅವರು ನಿನ್ನೆ ತಡರಾತ್ರಿ 12:30ಕ್ಕೆ ಹೃದಯಾಘಾತದಿಂದ ನಿಧನಹೊಂದಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಖಳನಟ, ಪೋಷಕ ಪಾತ್ರದಲ್ಲಿ ಮಿಂಚಿದ್ದ ಅವರು, ತನ್ನದೇ ಆದ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡಿದ್ದರು. ಡಾ. ರಾಜ್ಕುಮಾರ್ ನಟನೆಯ ‘ಪರಶುರಾಮ್ ‘ ಸಿನಿಮಾದಲ್ಲಿ ಖಳ ನಟನಾಗಿ ಅವರು ಗಮನ ಸೆಳೆದಿದ್ದರು. ಅಶೋಕ್ ರಾವ್ ಅವರಲ್ಲಿದ್ದ ಪ್ರತಿಭೆಯನ್ನು ಗಮನಿಸಿ ಸ್ವತಃ ಡಾ. ರಾಜ್ ಕುಮಾರ್ ಅವರೇ ಪರಶುರಾಮ್ ಸಿನಿಮಾದ ವಿಲನ್ ಪಾತ್ರವನ್ನು ಅವರಿಗೆ ನೀಡಿದ್ದರು.


ಅಶೋಕ್ ರಾವ್ ನಟಿಸಿದ ಪ್ರಸಿದ್ದ ಚಿತ್ರಗಳ ಪಟ್ಟಿಯನ್ನು ನೋಡುವುದಾದರೆ ಅತಿ ಅಪರೂಪ, ಪರಿಣಯ, ಶತ್ರು, ಮುಗಿಲ ಚುಂಬನ, ಬಾಸ್, ಪೊಲೀಸ್ ಕಥೆ, ಹೂ, ಕೃಷ್ಣನ್ ಲವ್ ಸ್ಟೋರಿ, ಕುಣಿದು ಕುಣಿದು ಬಾರೆ, ಯುವ, ಮನಸಾರೆ, ಬೊಂಬಾಟ್, ಅರ್ಜುನ್, ಸಂಗಾತಿ, ಪೊಲೀಸ್ ಕಥೆ, ಸಜನಿ, ಸೌಂದರ್ಯ, ಬೊಂಬುಗಳು ಸಾರ್ ಬೊಂಬುಗಳು, ಮತಾಡ್ ಮಾತಾಡ್ ಮಲ್ಲಿಗೆ, ಆಪರೇಷನ್ ಅಂಕುಶ, ತವರಿನ ಸಿರಿ, ತಿರುಪತಿ, ಸೈನೈಡ್, ಸಿರಿವಂತ, ರಿಷಿ, ಗಡಿಪಾರ್, ಇನ್ಸ್ಪೆಕ್ಟರ್ ಝಾನ್ಸಿ, ಆಟೋ ಶಂಕರ್, ಓಂ ಗಣೇಶ್, ಸೈನಿಕ, ಇಂದ್ರ ಧನುಷ್, ಹಬ್ಬ, ಓ ಪ್ರೇಮ, ಸ್ನೇಹ, ಟುವಿ ಟುವ್ವ ಟುಬ್ಬಿ, ಜೋಡಿ ಹಕ್ಕಿ, ಅಶ್ವಮೇಧ ಮುಂತಾದ ಚಿತ್ರಗಳಲ್ಲಿ ಅಶೋಕ್ ರಾವ್ ನಟಿಸಿ ಜನಪ್ರಿಯತೆಯನ್ನು ಗಳಿಸಿದ್ದರು.


ಅಶೋಕ್‌ ರಾವ್‌ ಹಿನ್ನೆಲೆ : ಅಶೋಕ್ ರಾವ್ ಅವರು ಜನಿಸಿದ್ದು ಕಾಸರಗೋಡಿನಲ್ಲಿ. ಆದರೆ ಅವರು ತಮಿಳುನಾಡಿನ ಸೇಲಂ ಬಳಿಯ ಒಂದು ವಸತಿ ಶಾಲೆಯಲ್ಲಿ ಶಿಕ್ಷಣ ಪಡೆದರು. ಆಗಲೇ ಅವರಿಗೆ ನಾಟಕಗಳ ಬಗ್ಗೆ ಆಸಕ್ತಿ ಮೂಡಿತ್ತು. ಕಂಚಿನ ಕಂಠದ ಕಾರಣಕ್ಕೆ ಅವರಿಗೆ ಕೆಲವು ಪಾತ್ರಗಳು ಸಿಕ್ಕವು. ಶಾಲಾ ದಿನಗಳಿಂದಲೂ ಅಭಿನಯದ ಬಗ್ಗೆ ಆಸಕ್ತಿ ಮೂಡಿಸಿಕೊಂಡಿದ್ದ ಅವರು ವಿದ್ಯಾಭ್ಯಾಸ ಮುಗಿಸಿದ ಬಳಿಕ ಹಲವು ಇಂಗ್ಲಿಷ್ ನಾಟಕಗಳಲ್ಲಿ ನಟಿಸಿದ್ದರು. ಬಳಿಕ ಸಿನಿಮಾಗಳಲ್ಲಿ ನಟಿಸುವ ಅವಕಾಶ ಪಡೆದುಕೊಂಡರು.
ಕನ್ನಡವೂ ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿ ಮರೆಯಾದ ಅಶೋಕ್‌ ರಾವ್‌ ಅವರ ನಿಧನ ಕನ್ನಡ ಚಿತ್ರರಂಗಕ್ಕೆ ಒಂದು ದೊಡ್ಡ ನಷ್ಟ ಉಂಟಾಗಿದೆ. ವಿದ್ಯಾರಣ್ಯಪುರದ ನಿವಾಸದಲ್ಲಿ ಅಶೋಕ್ ರಾವ್ ( Ashok Rao ) ಅವರ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

Exit mobile version