India : ಶ್ರೀಲಂಕಾದಲ್ಲಿ ಜುಲೈ 13 ರಿಂದ ನಡೆಯಲಿರುವ 2023 ರ ಉದಯೋನ್ಮುಖ ತಂಡಗಳ ಏಷ್ಯಾಕಪ್‌ಗೆ (AsiaCup announced India team)ಭಾರತ-ಎ ತಂಡವನ್ನು ಪ್ರಕಟಿಸಲಾಗಿದೆ.
ತಂಡದ ಕಮಾಂಡ್ ಅನ್ನು ಅಂದರೆ ತಂಡದ ನಾಯಕತ್ವವನ್ನು ಅಂಡರ್ 19 ವಿಶ್ವಕಪ್ ತಂಡದ ನಾಯಕತ್ವ ವಹಿಸಿದ್ದ ಯಶ್ ಧುಲ್ (Yash Dhull) ಅವರಿಗೆ ನೀಡಲಾಗಿದೆ ಮತ್ತು ಉಪನಾಯಕನಾಗಿ
ಪಂಜಾಬ್ ಆಲ್ ರೌಂಡರ್ ಅಭಿಷೇಕ್ ಶರ್ಮಾ (Abhishek Sharma) ಆಯ್ಕೆಯಾಗಿದ್ದಾರೆ.
ಜುಲೈ 13 ರಿಂದ ಶ್ರೀಲಂಕಾದಲ್ಲಿ(Sri Lanka) ಉದಯೋನ್ಮುಖ ತಂಡಗಳ ಏಷ್ಯಾಕಪ್ ಪ್ರಾರಂಭವಾಗಲಿದ್ದು, ಜುಲೈ 23 ರಂದು ಲೀಗ್ನ ಫೈನಲ್ ಪಂದ್ಯ ನಡೆಯಲಿದೆ. ಈ ಟೂರ್ನಿಯಲ್ಲಿ ಭಾರತವಲ್ಲದೆ ನೇಪಾಳ
(Nepal), ಪಾಕಿಸ್ತಾನ (Pakistan),ಯುಎಇ (UAE), ಶ್ರೀಲಂಕಾ, ಅಫ್ಘಾನಿಸ್ತಾನ, ಬಾಂಗ್ಲಾದೇಶ, ಮತ್ತು ಓಮನ್ ತಂಡಗಳು ಭಾಗವಹಿಸಲಿವೆ.
ಮಂಗಳವಾರ ಭಾರತ-ಎ ತಂಡವನ್ನು ಜೂನಿಯರ್ ಕ್ರಿಕೆಟ್ ಸಮಿತಿಯು ಆಯ್ಕೆ ಮಾಡಿದ್ದು, ತಂಡದಲ್ಲಿ ಟಿಎನ್‌ಪಿಎಲ್‌ನಲ್ಲಿ (TNPL) ರನ್ ಮಳೆಗೈದ ಮತ್ತು ಐಪಿಎಲ್ (IPL) 2023 ಆಟಗಾರ ಎಡಗೈ
ಬ್ಯಾಟ್ಸ್‌ಮನ್ ಸಾಯಿ ಸುದರ್ಶನ್ (Sai Sudarshan) ಅವರಿಗೆ ಸ್ಥಾನ ನೀಡಲಾಗಿದೆ. ಅಷ್ಟೇ ಅಲ್ಲದೆ ಭಾರತ ಎ ತಂಡಕ್ಕೆ ಪಂಜಾಬ್ ವಿಕೆಟ್ ಕೀಪರ್ ಪ್ರಭಾಸಿಮ್ರಾನ್ ಸಿಂಗ್, ಹರಿಯಾಣದ ಆಲ್ ರೌಂಡರ್
ನಿಶಾಂತ್ ಸಿಂಧು, ಧ್ರುವ್ ಜುರೆಲ್ ಕೂಡ (AsiaCup announced India team) ಆಯ್ಕೆಯಾಗಿದ್ದಾರೆ.
ರಿಯಾನ್ ಪರಾಗ್ಗೂ ಅವಕಾಶ
ರಿಯಾನ್ ಪರಾಗ್(Riyan Parag) ಅವರಿಗೂ ತಂಡದಲ್ಲಿ ಸ್ಥಾನ ಕಲ್ಪಿಸಲಾಗಿರುವುದು ಭಾರತ-ಎ ತಂಡದ ಆಯ್ಕೆಯಲ್ಲಿ ಅತ್ಯಂತ ಅಚ್ಚರಿಯ ಸಂಗತಿ ಆಗಿದೆ.ರಿಯಾನ್ ಪರಾಗ್ ದುಲೀಪ್ ಟ್ರೋಫಿಯಲ್ಲಿ ಮತ್ತು
ಐಪಿಎಲ್ 2023 ರಲ್ಲಿ ವಿಫಲರಾದರೂ, ಅಸ್ಸಾಂನ(Assam) ಈ ಆಲ್ ರೌಂಡರ್ ಭಾರತ-ಎ ತಂಡದಲ್ಲಿ ಆಯ್ಕೆಯಾಗಿದ್ದಾರೆ. ತಮ್ಮ ಮೊದಲ ಐಪಿಎಲ್ ಸೀಸನ್ನಲ್ಲಿ ಅದ್ಭುತ ಪ್ರದರ್ಶನ ನೀಡಿದ ನೆಹಾಲ್
ವಧೇರಾಗೆ ಇದಕ್ಕೆ ತದ್ವಿರುದ್ಧವಾಗಿ ತಂಡದಲ್ಲಿ ಅವಕಾಶ ನೀಡಲಾಗಿಲ್ಲ. ಸ್ಟ್ಯಾಂಡ್‌ಬೈ ಆಟಗಾರನಾಗಿ ಆದರೂ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ.
ಇದನ್ನೂ ಓದಿ : ಭಾರತದಿಂದ ಬ್ಯಾಂಕಾಕ್‌ಗೆ ಶೀಘ್ರದಲ್ಲಿಯೇ ಹೆದ್ದಾರಿ : ಥೈಲ್ಯಾಂಡ್‌ಗೆ ಈ ಹೆದ್ದಾರಿ ಶಾರ್ಟ್‌ಕಟ್
ಭಾರತ ಎ ತಂಡ: ಯಶ್ ಧುಲ್ (ನಾಯಕ), ಅಭಿಷೇಕ್ ಶರ್ಮಾ (ಉಪನಾಯಕ), ನಿಕಿನ್ ಜೋಸ್, ಸಾಯಿ ಸುದರ್ಶನ್,ಪ್ರಭಾಸಿಮ್ರಾನ್ ಸಿಂಗ್, ನಿಶಾಂತ್ ಸಿಂಧು, ಪ್ರದೋಶ್ ರಂಜನ್ ಪೌಲ್, ಹರ್ಷಿತ್ ರಾಣಾ,
ರಿಯಾನ್ ಪರಾಗ್,ಹರ್ಷಿತ್ ರಾಣಾ, ಧ್ರುವ್ ಜುರೆಲ್, ಮಾನವ್ ಸುತಾರ್, ಯುವರಾಜಸಿನ್ಹ ದೋಡಿಯಾ, ಆಕಾಶ್ ಸಿಂಗ್, ನಿತೀಶ್ ಕುಮಾರ್ ರೆಡ್ಡಿ, ರಾಜವರ್ಧನ್ ಹಂಗರ್ಗೇಕರ್.
ಸ್ಟ್ಯಾಂಡ್‌ಬೈ ಆಟಗಾರರು: ನೆಹಾಲ್ ವಧೇರಾ, ಹರ್ಷ್ ದುಬೆ, ಸ್ನೇಲ್ ಪಟೇಲ್ ಮತ್ತು ಮೋಹಿತ್ ರೆಡ್ಕರ್.
ಒಟ್ಟು 8 ತಂಡಗಳು ಉದಯೋನ್ಮುಖ ತಂಡಗಳ ಏಷ್ಯಾಕಪ್‌ನಲ್ಲಿ ಆಡಲಿದ್ದು, ಟೂರ್ನಿಯಲ್ಲಿ ಒಟ್ಟು ಎರಡು ಗುಂಪುಗಳಿರುತ್ತವೆ. ಬಿ ಗುಂಪಿನಲ್ಲಿ ಭಾರತ ತಂಡ ಸ್ಥಾನ ಪಡೆದಿದ್ದು, ಟೀಂ ಇಂಡಿಯಾದೊಂದಿಗೆ ಯುಎಇ,
ನೇಪಾಳ, ಮತ್ತು ಪಾಕಿಸ್ತಾನ ತಂಡಗಳು ಈ ಗುಂಪಿನಲ್ಲಿ ಸ್ಥಾನ ಪಡೆದಿವೆ. ಮತ್ತೊಂದೆಡೆ ಬಾಂಗ್ಲಾದೇಶ, ಶ್ರೀಲಂಕಾ, ಅಫ್ಘಾನಿಸ್ತಾನ ಮತ್ತು ಒಮನ್ ಎ ಗುಂಪಿನಲ್ಲಿವೆ. ಸೆಮಿಫೈನಲ್‌ಗೆ ಎರಡೂ ಗುಂಪಿನ ಅಗ್ರ 2 ತಂಡಗಳು
ಪ್ರವೇಶಿಸಲಿವೆ. ಸೆಮಿಫೈನಲ್‌ನಲ್ಲಿ ಬಿ ಗುಂಪಿನ ಎರಡನೇ ಸ್ಥಾನ ಪಡೆದ ತಂಡದೊಂದಿಗೆ ಎ ಗುಂಪಿನ ಅಗ್ರಸ್ಥಾನ ಪಡೆದ ತಂಡವು ಸ್ಪರ್ಧಿಸುತ್ತದೆ. ಮತ್ತೊಂದೆಡೆ ಎ ಗುಂಪಿನಲ್ಲಿ ಎರಡನೇ ಸ್ಥಾನ ಪಡೆದ ತಂಡವನ್ನು
ಬಿ ಗುಂಪಿನಲ್ಲಿ ಅಗ್ರಸ್ಥಾನ ಪಡೆದ ತಂಡವು ಎದುರಿಸಲಿದೆ.
ಏಷ್ಯಾಕಪ್‌ನಲ್ಲಿ ಟೀಂ ಇಂಡಿಯಾದ ವೇಳಾಪಟ್ಟಿ
ಭಾರತ-ಎ vs ಯುಎಇ-ಎ,
13 ಜುಲೈ ಭಾರತ ಎ vs ಪಾಕಿಸ್ತಾನ ಎ,
15 ಜುಲೈ ಭಾರತ-ಎ vs ನೇಪಾಳ,
18 ಜುಲೈ ಸೆಮಿಫೈನಲ್ 1 – 21
ಜುಲೈ ಸೆಮಿಫೈನಲ್ 2-21 ಜುಲೈ ಫೈನಲ್ ಪಂದ್ಯ – 23 ಜುಲೈ
ರಶ್ಮಿತಾ ಅನೀಶ್