ಅಂತರ್ಜಾತಿ ವಿವಾಹವಾದರೆ 5 ಲಕ್ಷ ಪ್ರೋತ್ಸಾಹ ಧನ ! ಹಾಗಾದ್ರೆ ಇದು ಯಾವ ಸರ್ಕಾರ ನೀವೆ ನೋಡಿ ?

ಗುವಾಹಟಿ ನ 27 : ಅಂತರ್ಜಾತಿಯ ವಿವಾಹವಾದರೆ 10 ಸಾವಿರದಿಂದ 5 ಲಕ್ಷದ ವರೆಗೂ ಪ್ರೋತ್ಸಾಹ ನೀಡುವುದಾಗಿ ಅಸ್ಸಾಂ ಸರ್ಕಾರ ಘೋಷಿಸಿದೆ. ಜಾತಿ ಆಧಾರಿತ ತಾರತಮ್ಯ ತೊಡೆದುಹಾಕುವ ಪ್ರಯತ್ನವಾಗಿ ಕೇಂದ್ರ ಸರ್ಕಾರವು ಅಂತರ್ಜಾತಿ ವಿವಾಹ(Inter Caste Marriage)ಗಳನ್ನು ಪ್ರೋತ್ಸಾಹಿಸುವಂತೆ ಎಲ್ಲಾ ರಾಜ್ಯಗಳಿಗೆ ಸೂಚಿಸಿದೆ. ಅಂತರ್ಜಾತಿ ವಿವಾಹಕ್ಕೆ ಬೆಂಬಲ ನೀಡಿ ಸಮಾಜದಲ್ಲಿ ಏಕತೆ ಮೂಡಿಸುವ ಉದ್ದೇಶದಿಂದ ಹಾಗೂ ಸಾಮಾಜಿಕ ಸಾಮರಸ್ಯ ಪ್ರೋತ್ಸಾಹಿಸಲು ಅಸ್ಸಾಂ ಸರ್ಕಾರವು ಹಣಕಾಸಿನ ನೆರವಿನಡಿಯಲ್ಲಿ ಪ್ರೋತ್ಸಾಹ ಧನ ನೀಡುವುದಾಗಿ ಘೊಷಿಸಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿಯೊಬ್ಬರು, ಇತ್ತೀಚೆಗೆ ಆರಂಭಿಸಿರುವ ಅಂತರ್ಜಾತಿ ವಿವಾಹ ಯೋಜನೆಯಡಿ ನೂತನ ದಂಪತಿ ಯಾವುದೇ ರೀತಿಯ ವ್ಯಾಪಾರ ಅಥವಾ ಆದಾಯ ತರುವ ಉದ್ಯಮ ಆರಂಭಿಸಲು 10 ಸಾವಿರ ರೂ.ದಿಂದ 5 ಲಕ್ಷ ರೂ.ವರೆಗೂ ಸರ್ಕಾರವು ಪ್ರೋತ್ಸಾಹ ಧನ(Financial Assistance Of Up To 5 Lakhs) ನೀಡಲಿದೆ. ಅಂತರ್ಜಾತಿ ವಿವಾಹವಾಗಿ ಬದುಕು ಕಟ್ಟಿಕೊಳ್ಳಲು ಇದು ಅವರಿಗೆ ನೆರವಾಗಲಿದೆ ಎಂದು ಹೇಳಿದ್ದಾರೆ.

ಅಧಿಕಾರಿಯವರು ನೀಡಿರುವ ಮಾಹಿತಿ ಪ್ರಕಾರ, ಯೋಜನೆಯ ಫಲಾನುಭವಿಯು ಏಪ್ರಿಲ್ 2019 ಮತ್ತು ಮಾರ್ಚ್ 2021ರ ನಡುವೆ ವಿವಾಹಿತರಾಗಿರಬೇಕು ಮತ್ತು ದಂಪತಿಗಳ ವಾರ್ಷಿಕ ಆದಾಯವು 5 ಲಕ್ಷ ರೂ.ಗಳನ್ನು ಮೀರಿರಬಾರದು. ಗಂಡ ಮತ್ತು ಹೆಂಡತಿ ಈ ಜನಾಂಗೀಯ ಸೂತ್ರವನ್ನು ಅನುಸರಿಸಬೇಕು. ಯೋಜನೆ(Financial Assistance By Assam Government)ಯ ಫಲಾನುಭವಿಯಾಗಲು ಮತ್ತೊಂದು ಷರತ್ತು ಏನೆಂದರೆ ಸಂಗಾತಿಗಳಲ್ಲಿ ಒಬ್ಬರು ಪರಿಶಿಷ್ಟ ಜಾತಿಗೆ ಮತ್ತು ಇನ್ನೊಬ್ಬರು ಸಾಮಾನ್ಯ ಜಾತಿಗೆ ಸೇರಿರಬೇಕು ಎಂಬುದು.

Exit mobile version