ರಾಹುಲ್‌ ಗಾಂಧಿ ಬ್ಯಾಟ್, ಪ್ಯಾಡ್ ತೆಗೆದುಕೊಂಡು ಹೋಗುತ್ತಾರೆ, ಆದ್ರೆ ಮೈದಾನಕ್ಕೆ ಇಳಿಯೊದಿಲ್ಲ : ಅಸ್ಸಾಂ ಸಿಎಂ

ಅಹಮದಾಬಾದ್‌ : ಪ್ರಸ್ತುತ ಮಹಾರಾಷ್ಟ್ರದಲ್ಲಿ ಭಾರತ್ ಜೋಡೋ ಯಾತ್ರೆಯನ್ನು(Assam CM Slams Rahul) ಮುನ್ನಡೆಸುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ

ಗುಜರಾತ್‌ನಲ್ಲಿ ಚುನಾವಣಾ ಪ್ರಚಾರಕ್ಕೆ ಗೈರು ಹಾಜರಾಗಿರುವ ಬಗ್ಗೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ(Assam CM Slams Rahul) ವಾಗ್ದಾಳಿ ನಡೆಸಿದ್ದಾರೆ.

ರಾಹುಲ್ ಗಾಂಧಿ ಅವರು ಬ್ಯಾಟ್ ಮತ್ತು ಪ್ಯಾಡ್ ತೆಗೆದುಕೊಂಡು ಹೋಗುತ್ತಾರೆ, ಆದರೆ ಮೈದಾನಕ್ಕೆ ಇಳಿಯುವುದಿಲ್ಲ ಎಂದು ಲೇವಡಿ ಮಾಡಿದ್ದಾರೆ.

ಗುಜರಾತ್‌(Gujarat) ವಿಧಾನಸಭೆ ಚುನಾವಣೆಯ ಹಿನ್ನಲೆಯಲ್ಲಿ ಅಂಜಾರ್‌ನಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಹಿಮಂತ ಬಿಸ್ವಾ ಶರ್ಮಾ ಅವರು, 

ಗುವಾಹಟಿಯಲ್ಲಿ ಕ್ರಿಕೆಟ್ ಪಂದ್ಯ ನಡೆದರೆ ರಾಹುಲ್‌ ಗಾಂಧಿ ಅವರು ಗುಜರಾತ್‌ನಲ್ಲಿ ಇರುತ್ತಾರೆ. ಅವರು ಗುಜರಾತ್‌ನಲ್ಲೂ ಬ್ಯಾಟ್ ಮತ್ತು ಪ್ಯಾಡ್ ಅನ್ನು ಒಯ್ಯುತ್ತಾರೆ, ಪಂದ್ಯಕ್ಕಾಗಿ ತಯಾರಾಗುತ್ತಾರೆ,

ಆದರೆ ಮೈದಾನಕ್ಕೆ ಬರುವುದಿಲ್ಲ ಎಂದು ಲೇವಡಿ ಮಾಡಿದ್ದಾರೆ.

ಇದನ್ನೂ ಓದಿ : https://vijayatimes.com/namma-metro-bengaluru/

ಇದೇ ವೇಳೆ ವಿನಾಯಕ ದಾಮೋದರ್ ಸಾವರ್ಕರ್( Veera Savarkar) ಅವರನ್ನು ಗುರಿಯಾಗಿಸಿಕೊಂಡು ಕಾಂಗ್ರೆಸ್ ನಾಯಕರ ಹೇಳಿಕೆಯನ್ನು ಟೀಕಿಸಿದ ಅವರು, ರಾಹುಲ್‌ ಗಾಂಧಿಯವರು ಅತ್ಯಂತ ಕಡಿಮೆ ಐತಿಹಾಸಿಕ ಜ್ಞಾನವನ್ನು ಹೊಂದಿದ್ದಾರೆ.

ವೀರ್ ಸಾವರ್ಕರ್ ಬಗ್ಗೆ ರಾಹುಲ್ ಗಾಂಧಿಯವರ ಹೇಳಿಕೆಯ ಬಗ್ಗೆ ನಾನು ಹೇಳಬಲ್ಲೆವೆಂದರೆ ಅವರಿಗೆ ಐತಿಹಾಸಿಕ ಜ್ಞಾನ ಕಡಿಮೆ.

ಬಹುಶಃ ರಾಹುಲ್‌ ಗಾಂಧಿಗಾಗಿ ಬೇರೆ ಯಾರಾದರೂ ಇತಿಹಾಸವನ್ನು ಓದಿರಬಹುದು, ಅವರು ಇತಿಹಾಸವನ್ನು ಸ್ವಂತವಾಗಿ ಓದಿರಲು ಸಾಧ್ಯವಿಲ್ಲ. ಸಾವರ್ಕರ್ ಅವರನ್ನು ಅವಮಾನಿಸುವ ಮೂಲಕ ಅವರು ಘೋರ ಪಾಪ ಮಾಡಿದ್ದಾರೆ.

ಅವರು ರಾಜಕೀಯವಾಗಿ ಅದನ್ನು ಪಾವತಿಸಬೇಕಾಗುತ್ತದೆ ಎಂದು ನಾನು ಭಾವಿಸುತ್ತೇನೆ ಎಂದು ಅಸ್ಸಾಂ ಸಿಎಂ ಹೇಳಿದರು.

https://fb.watch/gTbIAkIsD_/ COVER STORY | ಭರ್ಜರಿ ಆಯಿಲ್ ಮಾಫಿಯಾ !

ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷದ(Aam Aadmi Party) ವಿರುದ್ಧದ ಹೋರಾಟದ ಕುರಿತು ಮಾತನಾಡಿ, ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಎಎಪಿ ಮೊದಲ ಬಾರಿಗೆ ಸ್ಪರ್ಧಿಸುತ್ತಿದೆ. ಎರಡು ವಿರೋಧ ಪಕ್ಷಗಳು ಎರಡು ಮತ್ತು ಮೂರನೇ ಸ್ಥಾನಗಳಿಗೆ ಸ್ಪರ್ಧಿಸುತ್ತಿವೆ. 

ಎಎಪಿ ಮತ್ತು ಕಾಂಗ್ರೆಸ್ ಎರಡು ಮತ್ತು ಮೂರನೇ ಸ್ಥಾನಗಳಲ್ಲಿ ಇರುತ್ತವೆ. ಇರಬೇಕಾದ ಕಡೆ ಬಿಜೆಪಿ ಇದೆ ಎಂದು ಅವರು ಹೇಳಿದರು. ಇನ್ನು 182 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಗುಜರಾತ್ ರಾಜ್ಯದಲ್ಲಿ ಡಿಸೆಂಬರ್ 1 ಮತ್ತು 5 ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಮತಗಳ ಎಣಿಕೆ ಡಿಸೆಂಬರ್ 8 ರಂದು ನಡೆಯಲಿದೆ.

Exit mobile version