ಅಸ್ಸಾಂ ಪ್ರವಾಹ ; ಮನೆ ಕಳೆದುಕೊಂಡ 500ಕ್ಕೂ ಹೆಚ್ಚು ಕುಟುಂಬಗಳು `ರೈಲು ಹಳಿ’ಗಳಲ್ಲಿ ವಾಸ!

assam

ಅಸ್ಸಾಂ(Assam) ರಾಜ್ಯದಲ್ಲಿ ಮಳೆಯ ಅಬ್ಬರದಿಂದ ಪ್ರವಾಹ(Flood) ಎದುರಾಗಿ ವಿಕೋಪ ಸೃಷ್ಟಿಯಾದ ಪರಿಣಾಮ ಅಸ್ಸಾಂ ಅಕ್ಷರಶಃ ಸಮುದ್ರದ ರೀತಿ ಪರಿವರ್ತನೆಗೊಂಡಿದೆ.

ಜಮುನಾಮುಖ್(Jammunamukh) ಜಿಲ್ಲೆಯ ಎರಡು ಗ್ರಾಮಗಳ 500 ಕ್ಕೂ ಹೆಚ್ಚು ಕುಟುಂಬಗಳು ರೈಲ್ವೇ ಹಳಿಗಳ(Railway Rally) ಮೇಲೆ ವಾಸಿಸುತ್ತಿದ್ದಾರೆ, ಇದು ಪ್ರವಾಹದಲ್ಲಿ ಮುಳುಗದ ಏಕೈಕ ಎತ್ತರದ ಪ್ರದೇಶವಾಗಿರುವ ಕಾರಣ ಸದ್ಯ ಹಳ್ಳಿಯ ಕುಟುಂಬಗಳು ಇಲ್ಲಿ ತಾತ್ಕಾಲಿಕವಾಗಿ ವಾಸ ಮಾಡುತ್ತಿದ್ದಾರೆ. ಚಾಂಗ್ಜುರೈ(Changjurai) ಮತ್ತು ಪಾಟಿಯಾ ಪಥರ್(Patia Patthar) ಗ್ರಾಮದ ಜನರು ಪ್ರವಾಹದಲ್ಲಿ ತಮ್ಮ ಮನೆ, ತಮ್ಮ ವಸ್ತುಗಳು ಎಲ್ಲವನ್ನೂ ಕಳೆದುಕೊಂಡು ಕಂಗಾಲಾಗಿದ್ದಾರೆ.

ಟಾರ್ಪಾಲಿನ್ ಶೀಟ್‌ಗಳಿಂದ ಮಾಡಿದ ತಾತ್ಕಾಲಿಕ ಚೂರುಗಳ ಅಡಿಯಲ್ಲಿ ಆಶ್ರಯ ಪಡೆದಿರುವ ಗ್ರಾಮಸ್ಥರು, ಕಳೆದ ಐದು ದಿನಗಳಿಂದ ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತದಿಂದ ಹೆಚ್ಚಿನ ಸಹಾಯಕ್ಕೆ ಅಂಗಲಾಚಿ ಬೇಡುತ್ತಿದ್ದಾರೆ. 43 ವರ್ಷದ ಮೊನವಾರ ಬೇಗಂ ಅವರು ಪಾಟಿಯಾ ಪಥರ್ ಗ್ರಾಮದಲ್ಲಿನ ಅವರ ಮನೆ ಪ್ರವಾಹದಲ್ಲಿ ಕೊಚ್ಚಿಹೋದ ನಂತರ ತನ್ನ ಕುಟುಂಬದೊಂದಿಗೆ ತಾತ್ಕಾಲಿಕ ಚೂರುಪಾರು ಶೀಟಿನ ಅಡಿಯಲ್ಲಿ ವಾಸಿಸುತ್ತಿದ್ದಾರೆ. ಈ ಬಗ್ಗೆ ಸ್ಥಳೀಯರೊಬ್ಬರು ಮಾತನಾಡಿ,

ಮೂರು ದಿನಗಳ ಕಾಲ ನಾವು ತೆರೆದ ಆಕಾಶದ ಕೆಳಗೆ ಇದ್ದೆವು, ನಂತರ ನಾವು ಸ್ವಲ್ಪ ಹಣವನ್ನು ಸಾಲವಾಗಿ ತೆಗೆದುಕೊಂಡು ಟಾರ್ಪಾಲಿನ್ ಹಾಳೆಯನ್ನು ಖರೀದಿಸಿದ್ದೇವೆ. ನಾವು ಐದು ಕುಟುಂಬಗಳು ಒಂದೇ ಶೀಟ್ ಅಡಿಯಲ್ಲಿ ವಾಸಿಸುತ್ತಿದ್ದೇವೆ ಎಂದು ಹೇಳಿದರು. ಅಸ್ಸಾಂನಲ್ಲಿ ಪ್ರವಾಹ ಪರಿಸ್ಥಿತಿ ತೀವ್ರ ಗಂಭೀರವಾಗಿದ್ದು, ನೈಸರ್ಗಿಕ ವಿಕೋಪದಿಂದ 29 ಜಿಲ್ಲೆಗಳ 2,585 ಹಳ್ಳಿಗಳಲ್ಲಿ 8 ಲಕ್ಷಕ್ಕೂ ಹೆಚ್ಚು ಜನರು ಹಾನಿಗೊಳಗಾಗಿದ್ದಾರೆ. ಮುಂಗಾರು ಪೂರ್ವ ಮಳೆಯಿಂದ ಉಂಟಾದ ಪ್ರವಾಹ ಮತ್ತು ಭೂಕುಸಿತದಲ್ಲಿ 14 ಮಂದಿ ಸಾವನ್ನಪ್ಪಿದ್ದಾರೆ. 343 ಪರಿಹಾರ ಶಿಬಿರಗಳಲ್ಲಿ 86,772 ಜನರು ಆಶ್ರಯ ಪಡೆದಿದ್ದು,

ಇನ್ನೂ 411 ಪರಿಹಾರ ವಿತರಣಾ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಸೇನೆ, ಅರೆಸೇನಾ ಪಡೆಗಳು ಮತ್ತು ರಾಷ್ಟ್ರೀಯ ಮತ್ತು ರಾಜ್ಯ ವಿಪತ್ತು ಪರಿಹಾರ ಪಡೆಗಳು ದೋಣಿಗಳು ಮತ್ತು ಹೆಲಿಕಾಪ್ಟರ್‌ಗಳನ್ನು ಬಳಸಿಕೊಂಡು ವಿವಿಧ ಪ್ರವಾಹ ಪೀಡಿತ ಪ್ರದೇಶಗಳಿಂದ 21,884 ಜನರನ್ನು ಸ್ಥಳಾಂತರಿಸಿವೆ ಎಂದು ವರದಿ ತಿಳಿಸಿದೆ.

Exit mobile version