ತಮಿಳುನಾಡು(Tamilnadu) ಆರೋಗ್ಯ ಸಚಿವ, ಮಾ ಸುಬ್ರಮಣಿಯನ್(Subramanian), ಶನಿವಾರ, ಮೇ 21 ರಂದು ಹೇಳಿಕೆ ನೀಡಿದ್ದು, ರಾಜ್ಯದಲ್ಲಿ ಒಮಿಕ್ರಾನ್‌ನ(Omicron) ಬಿಎ.4 ರೂಪಾಂತರಿ ಒಂದು ಪ್ರಕರಣ ದೃಢಪಟ್ಟಿದೆ ಎಂದು ಹೇಳಿದ್ದಾರೆ.
ಇದು ಭಾರತದಲ್ಲಿ ವರದಿಯಾದ BA.4 ರೂಪಾಂತರಿ ಎರಡನೇ ಪ್ರಕರಣವಾಗಿದೆ. ಚೆನೈ(Chennai) ಇಂದ 30 ಕಿಲೋಮೀಟರ್ ದೂರದಲ್ಲಿರುವ ಚೆಂಗಲ್‌ಪಟ್ಟು(Chengalpattu) ಜಿಲ್ಲೆಯ ನವಲೂರ್ ನಿವಾಸಿಯಾಗಿದ್ದು, ಈ ಸೊಂಕಿಗೆ ತುತ್ತಾದ ವ್ಯಕ್ತಿ. ಶುಕ್ರವಾರ, ತೆಲಂಗಾಣದ ಹೈದರಾಬಾದ್‌ನಲ್ಲಿ ಬಿಎ.4 ರೂಪಾಂತರಿಯ ಮೊದಲ ಪ್ರಕರಣ ದಾಖಲಾಗಿದೆ. ಬಿಎ.4 ರ ಮೊದಲ ಪ್ರಕರಣ ಪತ್ತೆಯಾದ ನಂತರ, ದಕ್ಷಿಣ ಆಫ್ರಿಕಾದಿಂದ ಹೈದರಾಬಾದ್‌ಗೆ ಪ್ರಯಾಣಿಸಿದ ವ್ಯಕ್ತಿಯ ಸಂಪರ್ಕಕ್ಕೆ ಬಂದವರ ಸಂಪರ್ಕವನ್ನು ಪತ್ತೆಹಚ್ಚಲು ಈಗಾಗಲೇ ಪ್ರಾರಂಭಿಸಲಾಗಿದೆ ಎಂದು ಹೇಳಲಾಗಿದೆ.
ಅವರು ರೋಗದ ಲಕ್ಷಣವನ್ನು ಹೊಂದಿರಲಿಲ್ಲ ಮತ್ತು ಮೇ 9 ರಂದು ಮಾದರಿಯನ್ನು ಸಂಗ್ರಹಿಸಲಾಗಿದೆ ಎಂದು ಎಎನ್‌ಐ ಸಂಸ್ಥೆ ವರದಿಯಲ್ಲಿ ಉಲ್ಲೇಖಿಸಿದೆ. ಭಾರತೀಯ SARS-CoV-2 ಜೀನೋಮಿಕ್ಸ್ ಕನ್ಸೋರ್ಟಿಯಂ (INSACOG) ಸೋಮವಾರ, ಮೇ 23 ರಂದು ಪ್ರಕರಣ ಕುರಿತು ಬುಲೆಟಿನ್ ಅನ್ನು ಬಿಡುಗಡೆ ಮಾಡುತ್ತದೆ. BA.4 ರೂಪಾಂತರವನ್ನು ಮೊದಲು ಜನವರಿ 10, 2022 ರಂದು ದಕ್ಷಿಣ ಆಫ್ರಿಕಾದಲ್ಲಿ ಕಂಡುಹಿಡಿಯಲಾಯಿತು. ಅಂದಿನಿಂದ, ಇದು ದಕ್ಷಿಣ ಆಫ್ರಿಕಾದ ಎಲ್ಲಾ ಪ್ರಾಂತ್ಯಗಳಲ್ಲಿ ಪತ್ತೆಯಾಗಿದೆ.
BA.4 ಅಥವಾ BA.5 ಜನರು ಹೊಸ ರೋಗಲಕ್ಷಣಗಳು ಅಥವಾ ಹೆಚ್ಚು ತೀವ್ರವಾದ ಕಾಯಿಲೆಗಳೊಂದಿಗೆ ಸಂಬಂಧ ಹೊಂದಿದ್ದಾರೆ ಎಂಬುದಕ್ಕೆ ಯಾವುದೇ ಸೂಚನೆಯಿಲ್ಲ. ಆದಾಗ್ಯೂ, ಈ ಹೊಸ ರೂಪಾಂತರಗಳ ವೈಜ್ಞಾನಿಕ ಅಧ್ಯಯನಗಳ ಆಧಾರದ ಮೇಲೆ, ಅವರು ಪ್ರತಿರಕ್ಷಣಾ ವ್ಯವಸ್ಥೆಯನ್ನು ತಪ್ಪಿಸಲು ಸಾಧ್ಯವಾಗುತ್ತದೆ ಎಂದು ಹೇಳಿದ್ದಾರೆ.