ನಲ್ಲಿ ನೀರು ಕುಡಿದ ಕಾರಣ ದಲಿತ ವ್ಯಕ್ತಿ ಮೇಲೆ ಹಲ್ಲೆ: ದಲಿತ ವ್ಯಕ್ತಿ ಸಾವು

Budaun: ಬದೌನ್ (Budaun) ಜಿಲ್ಲೆಯ ಸಾತ್ರ ಗ್ರಾಮದಲ್ಲಿ ಸಾರ್ವಜನಿಕ ನಲ್ಲಿಯಲ್ಲಿ ನೀರು ಕುಡಿದಿದ್ದಕ್ಕಾಗಿ ಥಳಿತಕ್ಕೊಳಗಾಗಿದ್ದ ದಲಿತ ವ್ಯಕ್ತಿಯೋರ್ವ ಮೃತಪಟ್ಟಿದ್ದಾರೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

ಬದೌನ್ ಜಿಲ್ಲೆಯ ಉಸಹೈತ್ ಪೊಲೀಸ್ ಠಾಣೆ (Usahait Police Station) ವ್ಯಾಪ್ತಿಯ ಸಾತ್ರ ಗ್ರಾಮದಲ್ಲಿ ಸೋಮವಾರ ರಾತ್ರಿ ಈ ಘಟನೆ ವರದಿಯಾಗಿದ್ದು, ಮೃತರನ್ನು ಕಮಲೇಶ್ ಎಂದು ಗುರುತಿಸಲಾಗಿದೆ.ನೀರು ಕುಡಿದದ್ದಕ್ಕಾಗಿ, ಸೂರಜ್ ರಾಥೋಡ್ (Suraj Rathore) ಹಾಗೂ ಆತನ ಸಹಚರರು ಕಮಲೇಶ್ ಅವರಿಗೆ ಬಡಿಗೆಗಳಿಂದ ಹೊಡೆದಿದ್ದರು.

ತೀವ್ರವಾಗಿ ಗಾಯಗೊಂಡಿದ್ದ ಕಮಲೇಶ್ ರನ್ನು (Kamalesh) ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಂಗಳವಾರ ಅವರು ಮೃತಪಟ್ಟರು ಎಂದು ಎಎಸ್ಪಿ ಅಮಿತ್ ಕಿಶೋರ್ ಶ್ರೀವಾಸ್ತವ ತಿಳಿಸಿದ್ದಾರೆ.‘ಮೃತನ ತಂದೆ ಜಗದೀಶ್ (Jagadeesh) ನೀಡಿರುವ ದೂರಿನ ಆಧಾರದ ಮೇಲೆ ರಾಥೋಡ್ನನ್ನು ಬಂಧಿಸಿ, ಆತನ ವಿರುದ್ಧ ಎಫ್ಐಆರ್ (FIR) ದಾಖಲಿಸಲಾಗಿದೆ’ ಎಂದು ತಿಳಿದು ಬಂದಿದೆ.

ಸಕಲೇಶಪುರದಲ್ಲಿ ದಲಿತ ಕುಟುಂಬ ಬೆಳೆದಿದ್ದ ಕಾಫಿ, ಬಾಳೆ ಗಿಡಗಳ ನಾಶ
ಅಭಿಜಿತ್ (Abhijit) ಎಂಬುವವರು ಇತ್ತೀಚೆಗೆ ತಹಶೀಲ್ದಾರ್, ಆರ್.ಐ ಮತ್ತು ಗ್ರಾಮ ಲೆಕ್ಕಾಧಿಕಾರಿಯನ್ನು ಸಂಪರ್ಕಿಸಿ ನಾಲ್ಕು ಎಕರೆ ಜಾಗವನ್ನು ಗುರುತಿಸಿ ಕೊಡುವಂತೆ ಮನವಿ ಸಲ್ಲಿಸಿದರು. ಈ ಹಿನ್ನೆಲೆಯಲ್ಲಿ ಆರ್ ಐ, ವಿಎ. ಮತ್ತು ಶಾಸಕ ಸಿಮೆಂಟ್ (Cement) ಮಂಜು ಸ್ಥಳ ಪರಿಶೀಲನೆ ಮಾಡಿದ್ದರು. ಆದರೆ ಕೆಲವು ಗ್ರಾಮಸ್ಥರು ಅಧಿಕಾರಿಗಳನ್ನು ಲೆಕ್ಕಿಸದೆ ಅಭಿಜಿತ್ ಹಾಕಿರುವ ಕಾಫಿ ಗಿಡ ಮತ್ತು ಬಾಳೆಗಿಡಗಳನ್ನು ಕಡಿದು ಜಾತಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಭವ್ಯಶ್ರೀ ಆರ್ ಜೆ

Exit mobile version