ಆಗಸ್ಟ್ 23 ಬಾಹ್ಯಾಕಾಶ ದಿನ, ಲ್ಯಾಂಡರ್ ಇಳಿದ ಸ್ಥಳ ʼಶಿವಶಕ್ತಿʼ : ಮೋದಿ ಘೋಷಣೆ

Bengaluru: ಬಾರತದ ಮಹತ್ವಾಕಾಂಕ್ಷೆಯ ಚಂದ್ರಯಾನ-3 ಮಿಷನ್ ಯಶಸ್ವಿಗೊಂಡಿರುವ (August 23 Space Day) ಹಿನ್ನೆಲೆಯಲ್ಲಿ ಇಂದು ಬೆಂಗಳೂರಿನಲ್ಲಿರುವ ಇಸ್ರೋ ಕೇಂದ್ರ ಕಚೇರಿಗೆ ಭೇಟಿ

ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರು, ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಇಳಿದ ದಿನದ ನೆನಪಿಗಾಗಿ ಆಗಸ್ಟ್ 23ನ್ನು ರಾಷ್ಟ್ರೀಯ ಬಾಹ್ಯಾಕಾಶ ದಿನ ಮತ್ತು ಲ್ಯಾಂಡರ್ ಇಳಿದ ಸ್ಥಳವನ್ನು

ʼಶಿವಶಕ್ತಿʼ ಎಂದು ಘೋಷಿಸಿದ್ದಾರೆ. ಇದೇ ವೇಳೆ ಇನ್ನೊಂದು ಮಹತ್ವದ ಘೋಷಣೆ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಚಂದ್ರಯಾನ -2 ಪತನವಾದ ಜಾಗಕ್ಕೆ ʼತಿರಂಗʼ

ಎಂಬ ಹೆಸರನ್ನು (August 23 Space Day) ಮೋದಿ ಇಟ್ಟಿದ್ದಾರೆ.

ವರಮಹಾಲಕ್ಷೀ ಎಫೆಕ್ಟ್ ! ರಾಜಧಾನಿ ಮಾರುಕಟ್ಟೆಗಳಲ್ಲಿ ಗನಕ್ಕೇರಿದೆ ಹೂವು, ಹಣ್ಣು, ತರಕಾರಿ ಬೆಲೆ

ಇಸ್ರೋ ಕೇಂದ್ರ ಕಚೇರಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ ಅವರು, ಚಂದ್ರಯಾನ ಮಿಷನ್ಯಶಸ್ಸಿನಿಂದಾಗಿ ಸ್ಥಳೀಯ ಉತ್ಪಾದನೆಗಳ ಶಕ್ತಿ ಪ್ರದರ್ಶನವಾಗಿದೆ. ಇದರಿಂದ ಮೇಕ್ ಇನ್ ಇಂಡಿಯಾ

ಕಾರ್ಯಕ್ರಮವನ್ನು ಉತ್ತೇಜಿಸಲು ಮತ್ತು ಖಾಸಗಿ ಬಾಹ್ಯಾಕಾಶ ಉಡಾವಣೆಗಳು ಮತ್ತು ವ್ಯವಹಾರಗಳಲ್ಲಿ ಹೂಡಿಕೆಯನ್ನು ಉತ್ತೇಜಿಸಲಿದೆ ಈ ಯಶಸ್ಸು ಸಹಕಾರಿಯಾಗಲಿದೆ. ಜಾಗತಿಕವಾಗಿ

ಭಾರತ ಬಾಹ್ಯಾಕಾಶ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಲಿದೆ. ಇನ್ನು ಚಂದ್ರಯಾನ -3 ಯಶಸ್ಸು ಭಾರತದಲ್ಲಿ ವಿಜ್ಞಾನ ಕುರಿತ ಆಸಕ್ತಿ ಹೆಚ್ಚಿಸಿದ್ದು, ಯುವಕರು ಮತ್ತು

ಮಕ್ಕಳು ವೈಜ್ಞಾನಿಕ ಮನೋಭಾವವನ್ನು ರೂಢಿಸಿಕೊಳ್ಳಬೇಕು ಎಂದು ಹೇಳಿದರು.

ಇನ್ನು ಚಂದ್ರಯಾನದ ಯಶಸ್ಸಿಗೆ ಕಾರಣರಾದ ಪ್ರತಿಯೊಬ್ಬರನ್ನು ಎಷ್ಟು ಹೊಗಳಿದರೂ ಸಾಲದು. ಈ ಯಶಸ್ಸು ಭಾರತದ ವೈಜ್ಞಾನಿಕ ಶಂಕನಾದವಾಗಿದೆ. ಚಂದ್ರಯಾನದಿಂದ ಮನುಕುಲ

ಅಭಿವೃದ್ಧಿ ಸಾಧ್ಯವಿದೆ. ಅವರ ಶ್ರಮಕ್ಕೆ ನಾನು ಅಭಿನಂದಿಸುತ್ತೇನೆ. ಅವರ ಸೇವೆ ಹೀಗೆ ಮುಂದುವರೆಯಲಿ. ಇನ್ನು ಶಿವನಲ್ಲಿ ಮಾನವನ ಅಭಿವೃದ್ಧಿ ಇದೆ. ಚಂದ್ರಯಾನ-3 ರ ಯಶಸ್ಸಿನಿಂದಾಗಿ

ಮೇಕ್ ಇನ್ ಇಂಡಿಯಾದ ಮೇಲೆ ಬಲವಾದ ನಂಬಿಕೆ ಮೂಡುತ್ತಿದೆ ಎಂದು ಮೋದಿ ಹೇಳಿದ್ದಾರೆ.

ಇನ್ನು ಚಂದ್ರಯಾನ-3 ಮಿಷನ್ ಆಗಸ್ಟ್ 23ರಂದು ಸಂಜೆ 6 ಗಂಟೆ 4 ನಿಮಿಷಕ್ಕೆ ಯಶಸ್ವಿಯಾಗಿ ಚಂದ್ರನ ಮೇಲೆ ಸಾಫ್ಟ್ ಲ್ಯಾಂಡ್ ಆಗಿದೆ. ಈ ಸಾಧನೆ ಮಾಡಿದ ಜಗತ್ತಿನೆ 4ನೇ ದೇಶ ಎಂಬ

ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. ಇನ್ನು ಚಂದ್ರನ ದಕ್ಷಿಣ ಧ್ರುವ

Exit mobile version