Bengaluru: ವರಹಲಕ್ಷೀ ಹಬ್ಬದ ಕಾರಣ ರಾಜಧಾನಿ ಬೆಂಗೂರಿನಲ್ಲಿ ವ್ಯಾಪಾರ ವಹಿವಾಟು ಜೋರಾಗಿಯೇ ನಡೆಯುತ್ತಿದೆ. ಅದ್ರಲ್ಲೂ ಬೆಂಗಳೂರಿನ ಕೆ. ಆರ್ ಮಾರುಕಟ್ಟೆ, ಮಡಿವಾಳ (Madiwala) ಮಾರುಕಟ್ಟೆಗಳಲ್ಲಿ ಜನಜಾತ್ರೆಯೇ ಸೇರಿದೆ. ಹೂವು ಹಣ್ಣಿನ ಬೆಲೆ ಏರಿಕೆಯ ನಡುವೆಯೂ ಗ್ರಾಹಕರು ಭರ್ಜರಿಯಾಗಿ ಖರೀದಿ ಮಾಡುತ್ತಿದ್ದಾರೆ.

ಈ ಬಾರಿ ಸರಿಯಾದ ಸಮಯಕ್ಕೆ ಮಳೆಯಾಗದೆ ಬಾಳೆಹಣ್ಣು ಹಾಗೂ ಮಲ್ಲಿಗೆ ,ಕನಕಾಂಬರ ಇತ್ಯಾದಿ ಹೂವುಗಳ ಪೂರೈಕೆ ಮಾರುಕಟ್ಟೆಗೆ ಕಡಿಮೆಯಾಗಿದ್ದು, ಸಹಜವಾಗಿಯೇ ಅವುಗಳ ಬೆಲೆ ಗಗನಕ್ಕೇರಿದೆ. ಒಂದು ಕೆ.ಜಿ ಏಲಕ್ಕಿ ಬಾಳೆಹಣ್ಣಿಗೆ 150 ರೂ ಬೆಲೆ ದಾಟಿದರೆ, ಕನಕಾಂಬರ ಹೂವು ಸಗಟು ದರದಲ್ಲಿ ಕೆ.ಜಿ 1,500 ರೂ ಇದೆ. ಮಲ್ಲಿಗೆ ಹೂವು 600-1000 ರೂ ಆಗಿದೆ. ಆದ್ರೂ ಖರೀದಿದಾರರ ಉತ್ಸಾಹ ಮಾತ್ರ ಕಡಿಮೆಯಾಗಿಲ್ಲ. ಮಾರುಕಟ್ಟೆಗಳಲ್ಲಿ ಲಕ್ಷೀ ದೇವಿಗೆ ಪ್ರಿಯವಾದ ತಾವರೆ,ಮಲ್ಲಿಗೆ, ಮಳ್ಳೆ, ಸುಗಂಧರಾಜ ಸೇರಿದಂತೆ ನಾನಾ ರೀತಿಯ ಹೂವು ಹಣ್ಣು ಗಳ ಖರೀದಿಗೆ ಗ್ರಾಹಕರು ಮುಗಿಬಿದ್ದಿದ್ದರು.
ಮತ್ತೊಂದು ಕಡೆ ಲಕ್ಷೀಯ ಮುಖವಾಡ ಮತ್ತು ಸೀರ ಕುಪ್ಪಸವನ್ನು ಗಾಜಿನ ಬಳೆಗಳು,ಬಾಗಿನ ಕೊಡುವ ಸಾಮಗ್ರೀಗಳನ್ನು ಕೂಡ ಖರೀದಿಸುತ್ತಿದ್ದರು. ಇದರ ಜೊತೆಗೆ ಬಾಳೆ, ಸೀಬೆ, ಸೇಬು, ಸೀತಾಫಲ , ಅನಾನಸ್, ದ್ರಾಕ್ಷಿ ಹೀಗೆ ನಾನಾ ರೀತಿಯ ಹಣ್ಣುಗಳನ್ನು ಖರೀದಿ ಮಾಡುತ್ತಿದ್ದರು. ಹಬ್ಬದ ವಿಶೇಷತೆಗೆ ಬಾಳೆಕಂದು , ಮಾವಿನ ಸೋಪ್ಪು ಇವುಗಳ ಖರೀದಿ ಕೂಡ ಜೋರಾಗಿ ಇತ್ತು.ಮಾರುಕಟ್ಟೆಯಲ್ಲಿ ರೆಡಿಮೆಡ್ ಲಕ್ಷೀಗೆ ಬೇಡಿಕೆ ಜೋರಾಗಿತ್ತು. ಆದರಿಂದ ಗ್ರಾಹಕರು ರೆಡಿಮೇಡ್ ಲಕ್ಷೀಯ ಮೂರ್ತಿಗೆ 2,500 ರೂ ಗಳಿಂದ 5 ಸಾವಿರ ರೂ ಕೊಟ್ಟು ಖರೀದಿಸುತ್ತಿದ್ದರು ಒಟ್ಟಿನಲ್ಲಿ ಹೇಳುವುದಾರೆ ಹಬ್ಬದ ಸಂಭ್ರಮದಾಚರಣೆ ಮಾರುಕಟ್ಟೆಗೆ ಕಳೆಕಟ್ಟಿದೆ.
ನಾಗರಾಜ್ { ಕೆ.ಕಲ್ಲಹಳ್ಳಿ}.