Bengaluru : ಕಾಂತಾರ(Kantara) ಸಿನಿಮಾ ವೀಕ್ಷಿಸಿದ ತಮಿಳು ಖ್ಯಾತ ನಟ ರಜನಿಕಾಂತ್(Rajnikanth) ಅವರು ಕಾಂತಾರ ಸಿನಿಮಾದ ನಿರ್ದೇಶಕ ರಿಷಬ್ ಶೆಟ್ಟಿ(baba cinema re-release) ಅವರನ್ನು ತನ್ನ ಮನೆಗೆ ಕರೆಸಿ ಚಿನ್ನದ ಸರವನ್ನು ಉಡುಗೊರೆಯಾಗಿ ನೀಡಿ ಸನ್ಮಾನಿಸಿದರು.

ಜೊತೆಗೆ ತಮ್ಮ ಸಿನಿಮಾದ ಬಗ್ಗೆ ಚರ್ಚೆ ಸಹ ನಡೆಸಿದರು. ಕಾಂತಾರ ಚಿತ್ರ ನೋಡಿ ಪ್ರೇರಿತರಾದ ರಜಿನಿಕಾಂತ್ ಅವರು ಇದೀಗ ಇಪ್ಪತ್ತು ವರ್ಷದ ಹಳೆಯ ಸಿನಿಮಾವಾದ ‘ಬಾಬಾ’(baba cinema re-release) ಚಿತ್ರವನ್ನು ಮರು ಬಿಡುಗಡೆ ಮಾಡಲು ಚಿಂತಿಸಿದ್ದಾರೆ. ಕಾಂತಾರ ಸಿನಿಮಾ ಮನುಷ್ಯ ಶಕ್ತಿಗೆ ಮೀರಿದ ಹಾಗೂ ಆದರ್ಶಮಯ ವ್ಯಕ್ತಿತ್ವದ ನಾಯಕನ ಕತೆಯನ್ನು ಒಳಗೊಂಡಿರುವ ಸಿನಿಮಾ ಆಗಿದ್ದು,
ಇದನ್ನೂ ಓದಿ : https://vijayatimes.com/priyank-questions-bjp-govt/
ಈ ಬಗ್ಗೆ ರಿಷಬ್ ಶೆಟ್ಟಿ(Rishab shetty) ಅವರಿಂದ ಕೇಳಿ ತಿಳಿದ ರಜಿನಿಕಾಂತ್ ಅವರು ಅದೇ ಸಮಯದಲ್ಲಿ ತಮ್ಮ ಬಾಬಾ ಸಿನಿಮಾದ ಬಗ್ಗೆ ಚರ್ಚಿಸಿದರು.
2002 ರಲ್ಲಿ ಬಿಡುಗಡೆಯಾದ ಈ ಸಿನಿಮಾವು ಬಹಳ ಹಳೆಯ ಸಿನಿಮಾವಾಗಿದೆ. ಇದೇ ಸಿನಿಮಾವನ್ನು ಇನ್ನಷ್ಟು ಅಪ್ ಗ್ರೇಡ್ ಮಾಡಿ, ಇದರ ಜೊತೆಗೆ ಕೆಲವು ದೃಶ್ಯವನ್ನು ಸೇರಿಸಿ ಇದೀಗ ಮರು ಬಿಡುಗಡೆ ಮಾಡುವ ಪ್ರಯತ್ನದಲ್ಲಿದ್ದಾರೆ.

ಒಟ್ಟಾರೆಯಾಗಿ ಬಾಬಾ ಸಿನಿಮಾಕ್ಕೆ ಹೊಸತನ ತುಂಬಿ ರಜಿನಿಕಾಂತ್ ಅವರ ಹುಟ್ಟುಹಬ್ಬದ ದಿನವಾದ ಡಿಸೆಂಬರ್ 12 ರಂದು ತಮಿಳುನಾಡು(Tamilnadu) ಸೇರಿದಂತೆ ಹಲವು ರಾಜ್ಯದಲ್ಲಿ ಬಾಬಾ ಸಿನಿಮಾ ಮರು ಬಿಡುಗಡೆಗೊಳಿಸಲು ಸಜ್ಜಾಗಿದೆ. ಈ ಬಾರಿಯಾದರೂ ಈ ಸಿನಿಮಾ ರಜನಿಕಾಂತ್ ರವರ ಕೈ ಹಿಡಿಯುತ್ತಾ ಎಂಬುದನ್ನು ಕಾದು ನೋಡಬೇಕಿದೆ.
- ಪಂಕಜಾ