ಒಂದು ಮಗುವಿಗೆ ಹೆಸರಿಡಲು ಇವರು ತೆಗೆದುಕೊಳ್ಳುವುದು 1.14 ಲಕ್ಷ ರೂ!

New York : ಮಗುವಿನ ಹೆಸರನ್ನು ಆಯ್ಕೆ ಮಾಡುವುದು ಪೋಷಕರಿಗೆ ಕಷ್ಟದ ಕೆಲಸವೇ ಸರಿ.

ಅತ್ಯುತ್ತಮ ಹೆಸರನ್ನು ಆಯ್ಕೆ(Baby Namer The Specialist) ಮಾಡುವುದು,ವಿಭಿನ್ನ ಹೆಸರಿನ ಆಯ್ಕೆ, ಬಹಳ ಸಮಯ ಹಾಗೂ ಯೋಚನೆಯನ್ನು ಬೇಡುತ್ತದೆ.

ಆದರೆ ಈಗ ಈ ಕೆಲಸವನ್ನು ಸುಲಭ ಮಾಡಿಕೊಡುವ ವೃತ್ತಿಪರರು ಕೂಡ ಇದ್ದಾರೆ ಅವರೇ ‘ಪ್ರೊಫೆಷನಲ್ ಬೇಬಿ ನೇಮರ್’.

ಅವರಿಗೆ ನೀವು ಈ ಜವಾಬ್ದಾರಿಯನ್ನು ಕೊಟ್ಟು ನಿಶ್ಚಿಂತರಾಗಬಹುದು, ಆದರೆ ಅದಕ್ಕೆ ಅವರಿಗೆ ಫೀಸ್ ಕೊಡಬೇಕು.

ನ್ಯೂಯಾರ್ಕ್(New York) ಮೂಲದ ‘ಪ್ರೊಫೆಷನಲ್ ಬೇಬಿ ನೇಮರ್’ ಟೇಲರ್ ಎ. ಹಂಫ್ರೆ ಅವರು ಈಗ ಬಹಳ ಬೇಡಿಕೆಯಲ್ಲಿದ್ದಾರೆ.

ಮಗುವಿಗೆ ಪರಿಪೂರ್ಣವಾದ ಹೆಸರನ್ನು ಆಯ್ಕೆ ಮಾಡುವ ಕೆಲಸಕ್ಕಾಗಿ, ಪೋಷಕರು ಇವರಿಗೆ 1,500 ಡಾಲರ್(Baby Namer The Specialist) ಎಂದರೆ 1.14 ಲಕ್ಷ ರೂಪಾಯಿ ಹಣ ನೀಡುತ್ತಾರಂತೆ.

ಕೆಲವು ಪೋಷಕರಂತೂ 10,000 ಡಾಲರ್ ಎಂದರೆ 7.6 ಲಕ್ಷ ರೂಪಾಯಿ ಸಹ ನೀಡುತ್ತಾರೆ. ಮಗುವಿಗೆ ಕೇವಲ ಒಂದು ಒಳ್ಳೆಯ ಹೆಸರು ಸೂಚಿಸುವುದಕ್ಕೆ ಇಂತಹ ದೊಡ್ಡ ಮೊತ್ತದ ಹಣವನ್ನು ನೀಡುತ್ತಾರೆಯೇ ಅಂತ ನಿಮಗೆ ಆಶ್ಚರ್ಯವಾಗಬಹುದು.

ಇದನ್ನೂ ಓದಿ : https://vijayatimes.com/dont-go-in-these-roads/

ಆದರೆ ಇದು ಸತ್ಯ. ಇಷ್ಟು ದೊಡ್ಡ ಮೊತ್ತವನ್ನು ಪಡೆದು ಹಂಫ್ರೆ ಅವರು, ಪೋಷಕರು ತಮ್ಮ ಮಗುವಿಗೆ ಅತ್ಯುತ್ತಮವಾದ ಹೆಸರು ನಿರ್ಧರಿಸಲು ಸಹಾಯ ಮಾಡುತ್ತಾರೆ.

ಇದರ ಬಗ್ಗೆ ಮಾತನಾಡುವ ಹಂಫ್ರೆ ಅವರು “ನೀವು ಅತ್ಯಂತ ಜನಪ್ರಿಯ ಶಿಶು ಹೆಸರುಗಳನ್ನು ನೋಡಿದರೆ, ಅದು ನಮ್ಮ ಸಾಂಸ್ಕೃತಿಕ ಮೌಲ್ಯಗಳನ್ನು ಒಳಗೊಂಡಿರುವುದರ ಸಂಕೇತವಾಗಿರುತ್ತದೆ” ಎಂದು ಹೇಳುತ್ತಾರೆ.

ಕಳೆದ ವರ್ಷ, ಇವರು ನೂರಕ್ಕೂ ಹೆಚ್ಚು ಮಕ್ಕಳನ್ನು ಹೆಸರಿಸಲು ಸಹಾಯ ಮಾಡಿದರಂತೆ. ಪೋಷಕರು, ಹಂಫ್ರೆಯವರು ನೀಡುವ ಸೇವೆಗಳನ್ನು ದರಕ್ಕೆ ಅನುಗುಣವಾಗಿ ಆಯ್ಕೆ ಮಾಡಬಹುದು. ಇವರ ಸೇವೆಗಳು, 1,500 ಡಾಲರ್ ನಿಂದ ಪ್ರಾರಂಭವಾಗಿ ಸುಮಾರು 10,000 ಡಾಲರ್ ವರೆಗೂ ಇವೆ.


ಕಡಿಮೆ ದರವಾದ 1,500 ಡಾಲರ್ ಸೇವೆಯಲ್ಲಿ, ಹಳೆಯ ಕುಟುಂಬದ ಹೆಸರುಗಳನ್ನು ಸೂಚಿಸಲಾಗುತ್ತದೆ. ಇದರಲ್ಲಿ ವಂಶಾವಳಿಯ ಬಗ್ಗೆ ತಿಳಿದುಕೊಳ್ಳಲು ಒಂದು ದೂರವಾಣಿ ಕರೆ ಮತ್ತು ಮಕ್ಕಳ ಹೆಸರುಗಳ ಒಂದು ಪಟ್ಟಿಯನ್ನು ನೀಡಲಾಗುತ್ತದೆ.

10,000 ಡಾಲರ್ ದರದ ಸೇವೆಯ ಆಯ್ಕೆಯಲ್ಲಿ, ಪೋಷಕರ ವ್ಯವಹಾರದೊಂದಿಗೆ ಆನ್-ಬ್ರ್ಯಾಂಡ್ ಆಗಿರುವ ಹೆಸರನ್ನು ಆಯ್ಕೆ ಮಾಡುವುದನ್ನು ಒಳಗೊಂಡಿರುತ್ತದೆ.

ಇದನ್ನೂ ಓದಿ : https://vijayatimes.com/108-feet-kempegowda-statue/


ಹಂಫ್ರೆಯವರು 2015 ರಲ್ಲಿ ತನ್ನ ನೆಚ್ಚಿನ ಮಗುವಿನ ಹೆಸರುಗಳು ಮತ್ತು ಅವುಗಳ ಅರ್ಥಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುವ ಮೂಲಕ ತಮ್ಮ ಈ ವೃತ್ತಿಯನ್ನು ಆರಂಭ ಮಾಡಿದರು.

“ನಾನು ಎಷ್ಟು ಕಡಿಮೆ ಫಾಲೋವರ್ಸ್ ಗಳನ್ನು ಹೊಂದಿದ್ದರೂ ಸಹ ಎಷ್ಟೊಂದು ಜನರು ನನ್ನನ್ನು ಭೇಟಿ ಮಾಡಲು ಕಾಯುತ್ತಿದ್ದಾರೆ ಅಂತ ನೋಡಿದರೆ ನನಗೆ ಬಹಳಾನೇ ಆಶ್ಚರ್ಯವಾಯಿತು.

ನಾನು ಇನ್‌ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಲು ಪ್ರಾರಂಭಿಸಿದಾಗ, ಜನರು ಈ ಮುದ್ದಾದ ಹೆಸರುಗಳ ಮೇಲಿನ ತಮ್ಮ ಪ್ರೀತಿಯಿಂದ ನನ್ನ ಬಳಿಗೆ ಬರುತ್ತಿದ್ದರು.

ಯಾವಾಗಲೂ ಒಳ್ಳೆಯ ಹೆಸರುಗಳನ್ನು ಸೂಚಿಸುತ್ತಿದ್ದೆ, ಆದ್ದರಿಂದ ನಮ್ಮಲ್ಲಿ ಬಹಳಷ್ಟು ಜನರು ಬರುತ್ತಿದ್ದುದ್ದನ್ನು ನೋಡಿ ನನಗೆ ತುಂಬಾ ಆಶ್ಚರ್ಯವಾಯಿತು” ಎಂದು ಅವರು ಸುದ್ದಿ ಮಾಧ್ಯಮಕ್ಕೆ ತಿಳಿಸಿದರು.


“2018 ರಲ್ಲಿ ನನಗೆ ಮಕ್ಕಳ ಹೆಸರುಗಳನ್ನು ಸೂಚಿಸುವುದು ಒಂದೊಳ್ಳೆ ಕೌಶಲ್ಯ ಅಂತ ಅರ್ಥವಾಯಿತು. ಅದಕ್ಕಾಗಿ ಜನರು ನನ್ನ ಬಳಿಗೆ ಬರುತ್ತಿದ್ದಾರೆ ಎಂದು ನಾನು ಅರಿತುಕೊಂಡೆ.

ಈ ರೀತಿಯಲ್ಲಿ ಪೋಷಕರಿಗೆ ಸಹಾಯ ಮಾಡಬೇಕು ಅಂತ ನಿರ್ಧಾರ ಮಾಡಿದೆ” ಎಂದು ಅವರು ವಿವರಿಸುತ್ತಾರೆ.

ಇದನ್ನೂ ಓದಿ : https://vijayatimes.com/amitabh-remembers-appu-smile/

ಈ ಬಗ್ಗೆ ಕೆಲವರು, ತಮ್ಮ ಮಗುವಿಗೆ ಹೆಸರು ಆಯ್ಕೆ ಮಾಡುವಲ್ಲಿ ಪೋಷಕರು ಸೋಮಾರಿಗಳಾಗಿದ್ದಾರೆ ಎಂದು ಆರೋಪಿಸಿದರೂ,

ಇನ್ನೂ ಕೆಲವು ಪೋಷಕರು ತಮ್ಮ ಮಗುವಿಗೆ ಒಂದೊಳ್ಳೆ ಹೆಸರು ಇಡುವುದಕ್ಕೆ ಹಣ ನೀಡುತ್ತಾರೆ ಎಂದು ಹಂಫ್ರೆ ಅವರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

Exit mobile version