ಮತ್ತೊಂದು ಆರ್ಥಿಕ ಸಂಕಷ್ಟದಲ್ಲಿ ಬೈಜೂಸ್‌ ! ನಷ್ಟ ಸರಿದೂಗಿಸಲು ಬೆಂಗಳೂರಿನ ದೊಡ್ಡ ಕಚೇರಿ ಖಾಲಿ ಮಾಡಿದ ಕಂಪೆನಿ

Bengaluru , ಜುಲೈ 24: ದೇಶದ ಅತಿ ದೊಡ್ಡ ಶಿಕ್ಷಣ ತಂತ್ರಜ್ಞಾನ ಸಂಸ್ಥೆ ಬೈಜೂಸ್ (Baijus vacated Bangalore office) ತನ್ನ ಆರ್ಥಿಕ ಹಿಂಜರಿತವನ್ನು ಸರಿದೂಗಿಸಲು ಈಗಾಗಲೇ ಅನೇಕ

ಬಾರಿ ಉದ್ಯೋಗ ಕಡಿತ ಮಾಡಿದೆ ಅಲ್ಲದೆ .ಅತೀಯಾದ ಒತ್ತಡವನ್ನು ಸದ್ಯ ಇರುವ ಉದ್ಯೋಗಿಗಳ ಮೇಲೆ ಹಾಕಲಾಗುತ್ತಿದೆ ಎಂಬ ಆರೋಪಗಳು ಜೋರಾಗಿ ಕೇಳಿಬರುತ್ತಿವೆ.

ಈ ಎಲ್ಲಾ ಬೆಳವಣಿಗೆಗಳಿಂದ ತೀವ್ರ ಹಿನ್ನಡೆಯಾದ (Baijus vacated Bangalore office) ನಂತರ,

ಹಣವನ್ನು ಉಳಿಸುವ ಉದ್ದೇಶದಿಂದ ಬೈಜೂಸ್ ಈಗ ಬೆಂಗಳೂರಿನಲ್ಲಿರುವ (Bengaluru) ತನ್ನ ಬೃಹತ್ ಕಚೇರಿಯನ್ನು ಖಾಲಿ ಮಾಡುತ್ತಿದೆ. ವರದಿಗಳ ಪ್ರಕಾರ, ಬೈಜೂಸ್ ಕಳೆದ ಕೆಲವು ತಿಂಗಳುಗಳಲ್ಲಿ

ಸಾವಿರಾರು ಉದ್ಯೋಗಿಗಳನ್ನು ವಜಾಗೊಳಿಸಿದೆ ಮತ್ತು ಪ್ರಸ್ತುತ ಕಲ್ಯಾಣಿ ಟೆಕ್ ಪಾರ್ಕ್‌ನಲ್ಲಿರುವ (Kalyani Tech Park) 5.58 ಲಕ್ಷ ಚದರ ಅಡಿಯ ತನ್ನ ಕಚೇರಿ ಸ್ಥಳವನ್ನು ತೆರವುಗೊಳಿಸುತ್ತಿದೆ

ಬೈಜೂಸ್ ಸಂಸ್ಥೆ ಬೆಂಗಳೂರು ಮೂಲದ್ದಾಗಿದ್ದು ಮತ್ತು ಅಲ್ಲಿ 3 ಕಚೇರಿಗಳನ್ನು ಹೊಂದಿದೆ. ಅವುಗಳಲ್ಲಿ, ಬ್ರೂಕ್‌ಫೀಲ್ಡ್(Brookfield) ಪ್ರದೇಶದ ಕಲ್ಯಾಣಿ ಟೆಕ್ ಪಾರ್ಕ್‌ನಲ್ಲಿರುವ ಅದರ ಕಚೇರಿ ದೊಡ್ಡದಾಗಿದೆ.

ಕಲ್ಯಾಣಿ ಟೆಕ್ ಪಾರ್ಕ್ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರು ಬೇರೆ ಕಚೇರಿಗಳಿಗೆ ತೆರಳುವಂತೆ ಸೂಚಿಸಲಾಗಿದೆ. ಇನ್ನು ಕೆಲವು ಉದ್ಯೋಗಿಗಳಿಗೆ ತಾತ್ಕಾಲಿಕವಾಗಿ ಮನೆಯಿಂದಲೇ ಕೆಲಸ

ಮಾಡಲು ಸೂಚಿಸಲಾಗಿದೆ. ಜುಲೈ 23 ರಿಂದ ಕಂಪನಿಯು ತನ್ನ ಕಚೇರಿಗಳನ್ನು ಖಾಲಿ ಮಾಡಿದೆ. ಜುಲೈ 23ರಿಂದ ಸಿಬ್ಬಂದಿಯನ್ನು ಬೇರೆ ಕಚೇರಿಗೆ ವರ್ಗಾವಣೆ ಕೂಡ ಮಾಡಲಾಗಿದೆ.

ಇದನ್ನೂ ಓದಿ : 8ನೇ ತರಗತಿಯಿಂದ ಕನ್ನಡ ಪಾಠ ಬೇಡ : ಪ್ರಾಂಶುಪಾಲರ ಬಳಿ ಕೆಲ ಪೋಷಕರ ಆಗ್ರಹ!

ಕಲ್ಯಾಣಿ ಟೆಕ್ ಪಾರ್ಕ್ ಕಚೇರಿ ಮಾತ್ರವಲ್ಲದೆ ಪ್ರೆಸ್ಟೀಜ್ ಟೆಕ್ನಾಲಜಿ ಪಾರ್ಕ್‌ನಲ್ಲಿರುವ (Prestige Tech Park) 9 ಅಂತಸ್ತಿನ ಕಚೇರಿಯ 2 ಮಹಡಿಗಳನ್ನು ಸಹ ಖಾಲಿ ಮಾಡಲಾಗಿದೆ,ಇದೀಗ

ಬನ್ನೇರುಘಟ್ಟ (Bannergatta) ಮುಖ್ಯರಸ್ತೆಯಲ್ಲಿರುವ ಕಚೇರಿಗೆ ಹಲವು ಉದ್ಯೋಗಿಗಳನ್ನು ಸ್ಥಳಾಂತರಿಸಲಾಗಿದೆ. ಬೈಜೂಸ್ ದೇಶಾದ್ಯಂತ ಒಟ್ಟು 3 ಮಿಲಿಯನ್ ಚದರ ಅಡಿಯ ಕಚೇರಿ ಪ್ರದೇಶವನ್ನು

ಹೊಂದಿದೆ. ಕರೋನಾ (Corona) ನಂತರ, ಬೈಜೂಸ್ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದೆ. ಪ್ರಚಾರ, ವಿದೇಶದಲ್ಲಿ ಉದ್ಯಮ ವಿಸ್ತರಣೆ ಸೇರಿದಂತೆ ಹಲವು ನಿರ್ಧಾರಗಳಲ್ಲಿ ಬೈಜೂಸ್ ಹಿನ್ನಡೆ ಅನುಭವಿಸಿದೆ.

ಈಗಾಗಲೇ ಬೈಜೂಸ್ ಭಾರಿ ಉದ್ಯೋಗ ಕಡಿತ ಮಾಡುವ ಮೂಲಕ ಹಲವರ ಕೆಂಗಣ್ಣಿಗೆ ಗುರಿಯಾಗಿತ್ತು. ಬೈಜೂಸ್ ಇತ್ತೀಚೆಗೆ ಆರ್ಥಿಕ ನಷ್ಟ ಸರಿದೂಗಿಸಲು ಉದ್ಯೋಗ ಕಡಿತ ಮಾಡಿತ್ತು.

ಬಳಿಕ ಕೆಲಸ ಮಾಡುವ ಉದ್ಯೋಗಿಗಳ ಮೇಲೆ ಅತೀಯಾದ ಒತ್ತಡ ಹಾಕಲಾಗುತ್ತಿದೆ ಅನ್ನೋ ಆರೋಪ ಪದೇ ಪದೇ ಕೇಳಿಬರುತ್ತಿದೆ.ಬೈಜೂಸ್ ಟ್ಯೂಷನ್ ಸೆಂಟರ್ನ (ಬಿಟಿಸಿ) ಉದ್ಯೋಗಿಗಳು ಜುಲೈ

22 ಮಂಗಳವಾರ ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಸಿದ್ಧತೆ ನಡೆಸಿದ್ದರು. ಆದರೆ, ಬೈಜೂಸ್ ಆಡಳಿತ ಮಂಡಳಿಯು ಜುಲೈ 22ರಂದು ಸಿಬ್ಬಂದಿ ಸಭೆ ನಡೆಸಿ, ಇನ್ನು ಮುಂದೆ ವಜಾ ಮಾಡುವುದಿಲ್ಲ ಎಂದು ಭರವಸೆ ನೀಡಿದೆ.

ಹಾಗೆಯೇ, ಉದ್ಯೋಗಿಗಳಿಗೆ ಇನ್ಸೆಂಟಿವ್ (Incentive) ಮೊದಲಾದ ಕೊಡುಗೆಗಳನ್ನು ಆಫರ್ ಮಾಡಿ ಸಮಾಧಾನಗೊಳಿಸಲು ಪ್ರಯತ್ನಿಸಿರುವುದು ತಿಳಿದುಬಂದಿದೆ. ಕಲ್ಯಾಣಿ ಟೆಕ್ ಪಾರ್ಕ್ನಲ್ಲಿ ಕೆಲಸ ಮಾಡುತ್ತಿದ್ದ

ಉದ್ಯೋಗಿಗಳಿಗೆ ಅದೇ ವೇಳೆ, ಮನೆಯಿಂದ ಕೆಲಸ ಮಾಡುವ (Work From Home) ಅವಕಾಶ ಕೊಡಲಾಗಿದೆ.

ಬೈಜೂಸ್ ಮತ್ತು ಸಾಲಗಾರರ ಮಧ್ಯೆ ಸಾಲ ಮರುಪಾವತಿಗೆ ಒಪ್ಪಂದ
ಹಣಕಾಸು ಸಂಕಷ್ಟದ ಜೊತೆಗೆ ತೆರಿಗೆ ವಿವಾದಗಳಿಗೆ ಒಂದು ಕಾಲದಲ್ಲಿ ಭಾರೀ ದೊಡ್ಡ ಮಟ್ಟದಲ್ಲಿ ಬೆಳೆದ ಬೈಜೂಸ್ ಸಂಸ್ಥೆ ಇದೀಗ ಸಿಲುಕಿದೆ. ಸಂಸ್ಥೆಯು ಉದ್ಯೋಗಿಗಳಿಗೆ ಕೊಡುವ ಪಿಎಫ್ (PF) ಅನ್ನೂ

ಪಾವತಿಸಿಲ್ಲದಿರುವುದು ಬೆಳಕಿಗೆ ಬಂದಿದೆ. ಬೈಜೂಸ್ ಅಮೆರಿಕದಲ್ಲಿ (America) ಎರಡು ಪ್ರಕರಣಗಳನ್ನು ಎದುರಿಸುತ್ತಿದೆ ಅಲ್ಲದೆ ಸಾಕಷ್ಟು ಸಾಲ ಮಾಡಿಕೊಂಡಿದೆ. ಇದೀಗ ಬೈಜೂಸ್ ಮತ್ತು ಸಾಲಗಾರರ

ಮಧ್ಯೆ 1.2 ಬಿಲಿಯನ್ ಡಾಲರ್ ಮೊತ್ತದ ಒಂದು ಸಾಲದ ಮರುಪಾವತಿ ವಿಚಾರದಲ್ಲಿ ಒಪ್ಪಂದವಾಗಿದೆ.

ರಶ್ಮಿತಾ ಅನೀಶ್

Exit mobile version