Bengaluru (ಜುಲೈ 19, 2023): ಬೆಂಗಳೂರಿನಲ್ಲಿ ಶಂಕಿತ ಭಯೋತ್ಪಾದಕರನ್ನು ಸಿಸಿಬಿ (Bangalore Bomb attack plan) ಪೊಲೀಸರು ಬಂಧಿಸಿದ್ದಾರೆ. ದೇಶದ್ರೋಹಿ ಚಟುವಟಿಕೆಗಳಲ್ಲಿ
ಭಾಗಿಯಾಗಿರುವ ಬಗ್ಗೆ ಮಾಹಿತಿ ಆಧರಿಸಿ, ಐದು ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಸುಹೈಲ್, ಉಮರ್, ತಬ್ರೇಜ್, ಮುದಾಸಿರ್, ಫೈಜಲ್‌ರಬ್ಬಾನಿ ಅವರನ್ನು ಬಂಧಿಸಲಾಗಿದ್ದು,
ಸಿಸಿಬಿ ಮತ್ತು ಕೇಂದ್ರ ಗುಪ್ತಚರ ಇಲಾಖೆ ಜಂಟಿಯಾಗಿ ಕಾರ್ಯಾಚರಣೆ ನಡೆಸಿದೆ ಎಂದು ತಿಳಿದುಬಂದಿದೆ.ಇವೆಲ್ಲರ ಮಾಸ್ಟರ್ ಮೈಂಡ್ ಜುನೈದ್ (Junaid) ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ.
ಐವರು ಶಂಕಿತ ಉಗ್ರರ ಮೊಬೈಲ್ ಫೋನ್‌ಗಳು (Mobile Phone) ಮತ್ತು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು ಪ್ರಸ್ತುತ ಅವರ ಮೊಬೈಲ್ ಫೋನ್‌ಗಳನ್ನು ಪರಿಶೀಲಿಸಲಾಗುತ್ತಿದೆ ಎಂದು
ತಿಳಿದುಬಂದಿದೆ. ಮತ್ತೊಂದೆಡೆ ಸಿಸಿಬಿ ತಂಡ ಎಲ್ಲ ಆರೋಪಿಗಳ ಕೇಂದ್ರೀಕೃತ ವಿಚಾರಣೆ ನಡೆಸುತ್ತಿದ್ದು, ಇವರೊಂದಿಗೆ ಇನ್ನೂ ಇಬ್ಬರು ಸಂಪರ್ಕದಲ್ಲಿದ್ದಾರೆ ಎಂಬ ಮೂಲಗಳು ಲಭ್ಯವಾಗಿವೆ.

ಈ ಹಿನ್ನೆಲೆಯಲ್ಲಿ ಸಿಸಿಬಿ ಇಬ್ಬರ ಬಗ್ಗೆಯೂ ಮಾಹಿತಿ ಕಲೆಹಾಕುತ್ತಿದ್ದು, ಮಡಿವಾಳ (Madiwala) ಟೆಕ್ನಿಕಲ್ ತಂಡದಲ್ಲಿ ಶಂಕಿತ ಉಗ್ರರ ವಿಚಾರಣೆ ನಡೆಸುತ್ತಿದೆ. ಆರೋಪಿಯನ್ನು ಬೆಂಗಳೂರಿನ
ಆರ್.ಟಿ. ನಗರದ (RT Nagar) ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಕೊರೋನಾ (Corona) ಸಾಂಕ್ರಾಮಿಕ ಸಮಯದಲ್ಲಿ ಒಬ್ಬನನ್ನು ಅಪಹರಿಸಿ ಕೊಲೆ ಮಾಡಿದ ಅವರು ನಗರದ ರೌಡಿಗಳು.
ಶಂಕಿತ ಉಗ್ರರ ಪರಿಚಯ ಇವರೆಲ್ಲರಿಗೂ ಆಗಿತ್ತು. ಅವರನ್ನು ಸಂಪರ್ಕಿಸಿ ತರಬೇತಿ ಪಡೆದ ಶಂಕಿತರು. ಬಳಿಕ ಹೊರಬಂದು ವಿಧ್ವಂಸಕ ಕೃತ್ಯಕ್ಕೆ ಯೋಜನೆ ರೂಪಿಸಿದ್ದರು ಎಂದು ತಿಳಿದುಬಂದಿದೆ.
ಇದನ್ನೂ ಓದಿ : ಗಪ್‌ಚುಪ್ ಆಗಿರುವ ಪಾಕಿಸ್ತಾನದಿಂದ ಭಾರತದ ಮೇಲೆ ಸೈಬರ್ ಯುದ್ಧ! ಭಾರತೀಯ ಸೇನೆ, ಐಐಟಿಗಳೇ ಪಾಕಿಸ್ತಾನಿ ಹ್ಯಾಕರ್‌ಗಳ ಪ್ರಮುಖ ಟಾರ್ಗೆಟ್!
ಬಾಂಬ್(Bomb) ತಯಾರಿಸಲು ಬೇಕಾದ ಎಲ್ಲಾ ಕಚ್ಚಾ ಸಾಮಗ್ರಿಗಳು ಸಿದ್ಧವಾಗಿತ್ತು, ಈತನ ಜೊತೆ ಇನ್ನೂ ಅನೇಕರು ಕೃತ್ಯವನ್ನು ಯೋಜಿಸಿದ್ದರು ಎಂಬುವುದೂ ತಿಳಿದು ಬಂದಿದೆ. ಆತನೊಂದಿಗೆ
ನಂಟು ಹೊಂದಿರುವ ಇನ್ನಷ್ಟು ಮಂದಿಯನ್ನು ಹುಡುಕಲಾಗುತ್ತಿದ್ದು, ಸದ್ಯ ಶಂಕಿತ ಉಗ್ರರನ್ನು ಸಿಸಿಬಿ ವಿಚಾರಣೆ ನಡೆಸುತ್ತಿದೆ. ಬೆಂಗಳೂರಿನಲ್ಲಿ ಬೃಹತ್ ಬಾಂಬ್ ದಾಳಿ ನಡೆಸಲು ಕ್ರಿಮಿನಲ್ ಗ್ಯಾಂಗ್ ಯೋಜನೆ
ರೂಪಿಸಿತ್ತು. ಹತ್ತಾರು ಜನರಿಂದ ಭಾರಿ ಸ್ಫೋಟದ ಯೋಜನೆ ಇದೆ ಎಂಬ ಮಾತು ಕೇಳಿ ಬಂದಿತ್ತು. ಬೆಂಗಳೂರಿನ ಸಿಸಿಬಿ ತಂಡ ತಕ್ಷಣ ಎಚ್ಚರಿಕೆ ನೀಡಿ ಶಂಕಿತ ಸ್ಥಳ ಪತ್ತೆ ಹಚ್ಚಿದೆ. ಈ ಹಿನ್ನೆಲೆಯಲ್ಲಿ,
ಬೃಹತ್ ಸ್ಫೋಟದ ಯೋಜನೆಗಳನ್ನು(Bangalore Bomb attack plan) ಸ್ಥಗಿತಗೊಳಿಸಲಾಗಿದೆ.

ಕನಕನಗರದ (Kanaka Nagara) ಸುಲ್ತಾನ್ ಪಾಲಿಯಾದಲ್ಲಿರುವ (Sulthan Palya) ಮಸೀದಿ ಬಳಿ ಭಯೋತ್ಪಾದಕರ ಸಭೆ ನಡೆಸುತ್ತಿದ್ದ ವೇಳೆ ಶಂಕಿತ ಉಗ್ರರನ್ನು ಬಂಧಿಸಲಾಗಿದೆ.
2017ರಲ್ಲಿ ಆರ್‌ಟಿ ನಗರದಲ್ಲಿ ನಡೆದ ನೂರ್ ಕೊಲೆ ಪ್ರಕರಣದಲ್ಲಿ ಬಂಧಿತರಲ್ಲಿ ಐವರು ಭಯೋತ್ಪಾದಕ ಸಂಪರ್ಕ ಹೊಂದಿದ್ದರು. ಸುಹೈಲ್, ಉಮರ್, ತಬ್ರೇಜ್, ಮುದಾಸಿರ್, ಫೈಜಲ್‌ರಬ್ಬಾನಿಗೆ
ಭಯೋತ್ಪಾದಕರೊಂದಿಗೆ ನಂಟು ಹೊಂದಿದ್ದಾರೆ. 2008ರ ಬೆಂಗಳೂರು ಸೀರಿಯಲ್ ಬ್ಲಾಸ್ಟ್ ಕೇಸ್ ರೂವಾರಿ ಜುನೈದ್ ಪರಿಚಯ ಇವರಿಗೆ ಆಗಿದೆ. ಸ್ಫೋಟಕ್ಕೆ ಈ ಐವರು ಜುನೈದ್ ಮೂಲಕ
ಸಂಚು ಹೂಡಿದ್ದಾರೆ ಎಂದು ವರದಿಯಾಗಿದೆ.
ಹಾಗಾದ್ರೆ ಬಂಧನದ ವೇಳೆ ಸಿಸಿಬಿಗೆ ಸಿಕ್ಕಿದ್ದಾದ್ರೂ ಏನು..?
42 ಜೀವಂತ ಗುಂಡುಗಳು, 7 ನಾಡ ಪಿಸ್ತೂಲ್, 2 ಸ್ಯಾಟಲೈಟ್ ಫೋನ್ (Satelite Phone) ಮಾದರಿಯ ವಾಕಿಟಾಕಿ, ವಿವಿಧ ಕಂಪನಿ ಸಿಮ್‌ಗಳು, ಮೊಬೈಲ್ ಫೋನ್, ಮತ್ತು ಲ್ಯಾಪ್
ಟಾಪ್ ಸಿಸಿಬಿ ಹಾಗೂ ಕೇಂದ್ರ ಗುಪ್ತಚರ ಇಲಾಖೆ ಕಾರ್ಯಾಚರಣೆ ವೇಳೆ ಲಭ್ಯವಾಗಿದೆ ಎಂದು ತಿಳಿದುಬಂದಿದೆ.
ರಶ್ಮಿತಾ ಅನೀಶ್