New Delhi : ಭಾರತ ಕೊಟ್ಟ ತಿರುಗೇಟಿನಿಂದ ಈಗಾಗಲೇ ಗಡಿಯಲ್ಲಿ ಗಪ್‌ಚುಪ್ ಆಗಿರುವ ಪಾಕಿಸ್ತಾನ (Cyber war from Pakistan) ದೇಶವು ಭಾರತದ ಮೇಲೆ ಸೈಬರ್ ದಾಳಿಯನ್ನು ನಡೆಸುತ್ತಿದೆ.
ಪಾಕಿಸ್ತಾನದ ಹ್ಯಾಕರ್‌ಗಳ (Hacker) ಗುಂಪು ಪ್ರತಿಷ್ಠಿತ ಐಐಟಿ,ಭಾರತೀಯ ಸೇನೆ ಹಾಗೂ ಎನ್‌ಐಟಿಗಳ ಮೇಲೆ ದಾಳಿ ನಡೆಸುತ್ತಿರುವುದು ಬೆಳಕಿಗೆ ಬಂದಿದೆ.ಭದ್ರತಾ ಸಂಶೋಧಕರು
ಸೇನೆ ಹಾಗೂ ಶಿಕ್ಷಣ ಸಂಸ್ಥೆಗಳಿಗೆ ಸೈಬರ್ ದಾಳಿಯ ಬಗ್ಗೆ ಭಾರತೀಯ ಎಚ್ಚರಿಕೆಯನ್ನು (Cyber war from Pakistan) ನೀಡಿದೆ.
ಇದನ್ನೂ ಓದಿ : ಕನಿಷ್ಠ 7 ಭಾರತೀಯ ಕೆಮ್ಮು ಸಿರಪ್ ಗಳು ವಿಷಕಾರಿಯಾಗಿವೆ : ವಿಶ್ವ ಆರೋಗ್ಯ ಸಂಸ್ಥೆ
ಭದ್ರತಾ ಸಂಶೋಧಕರು ಪಾಕಿಸ್ತಾನ ಮೂಲದ ಟ್ರಾನ್ಸಪರೆಂಟ್ ಟ್ರೈಬ್(Transperent Tribe) ಎಂಬ ಹ್ಯಾಕರ್ ಗುಂಪು ಸೈಬರ್ ದಾಳಿಯನ್ನು ನಡೆಸುತ್ತಿರುವುದನ್ನು ಪತ್ತೆಹಚ್ಚಿದ್ದಾರೆ. 2013ರಿಂದಲೇ
ಈ ಹ್ಯಾಕರ್‌ಗಳ ಗುಂಪು ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಲಾಗಿದೆ.ಟ್ರಾನ್ಸಪರೆಂಟ್ ಟ್ರೈಬ್ ಭಾರತೀಯ ರಕ್ಷಣಾ ಸಂಸ್ಥೆಗಳನ್ನು ಗುರಿಯಾಗಿಸಿಕೊಂಡಿದೆ ಈ ಗುಂಪಿನಡಿಯಲ್ಲಿ ಸೈಡ್‌ಕಾಪಿ
(Sidecopy) ಎಂಬ ಗುಂಪು ಕೂಡ ಕಾರ್ಯನಿರ್ವಹಿಸುತ್ತಿದೆ ಇದೀಗ ಈ ಗುಂಪನ್ನು ಕೂಡ ಪತ್ತೆಹಚ್ಚಲಾಗಿದೆ.

ಕೆಲ ದಿನಗಳ ಹಿಂದೆ ಹಿರಿಯ ಡಿಆರ್‌ಡಿಒ (DRDO) ವಿಜ್ಞಾನಿ ಒಬ್ಬರು ಪಾಕಿಸ್ತಾನಿ ಏಜೆಂಟ್‌ಗಳಿಂದ ಹನಿಟ್ರ್ಯಾಪ್‌ಗೆ ಒಳಗಾಗಿ ಸೂಕ್ಷ್ಮ ಮಾಹಿತಿಯನ್ನು ಸೋರಿಕೆ ಮಾಡಿದ್ದಕ್ಕಾಗಿ ಅವರನ್ನು ಬಂಧಿಸಿದ್ದಾರೆ
ಆ ಬಳಿಕ ಈ ಸೈಬರ್ ದಾಳಿಯ ಮಾಹಿತಿ ಬೆಳಕಿಗೆ ಬಂದಿದೆ. ಟ್ರಾನ್ಸಪರೆಂಟ್ ಟ್ರೈಬ್ ಹ್ಯಾಕರ್‌ಗಳು ಮೇ 2022ರಿಂದಲೂ ಭಾರತದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಾದ ರಾಷ್ಟ್ರೀಯ ತಂತ್ರಜ್ಞಾನ
ಸಂಸ್ಥೆಗಳು (NITs), ಭಾರತೀಯ ತಂತ್ರಜ್ಞಾನ ಸಂಸ್ಥೆಗಳು (IITs) ಮತ್ತು ಬೃಹತ್ ಬ್ಯುಸಿನೆಸ್ ಸ್ಕೂಲ್‌ಗಳ ಸರ್ವರ್‌ಗಳನ್ನು ಹ್ಯಾಕ್ ಮಾಡಲು ಪ್ರಯತ್ನಿಸುತ್ತಿದೆ.
ಇದನ್ನೂ ಓದಿ : ಸದ್ಯದಲ್ಲೇ ರದ್ದಾಗಲಿರುವ 2000 ರೂ ನೋಟುಗಳನ್ನು ಮನೆಗೇ ಬಂದು ಸ್ವೀಕರಿಸಲಿದೆ ಅಮೆಜಾನ್
2023ರ ಮೊದಲ ತ್ರೈಮಾಸಿಕದಲ್ಲಿ ಈ ಸೈಬರ್ ದಾಳಿಗಳು ತೀವ್ರಗೊಂಡಿವೆ ಎಂದು ವರದಿ ತಿಳಿಸಿದೆ. ಕೆಲವು ಭಾರತೀಯ ರಕ್ಷಣಾ ಪಡೆಗಳೊಂದಿಗೆ ಈ ಸಂಸ್ಥೆಗಳಲ್ಲಿ ನಿಕಟವಾಗಿ
ಕೆಲಸ ಮಾಡುವುದರಿಂದ ಅವುಗಳ ಮೇಲೆ ಸೈಬರ್ ದಾಳಿ ನಡೆಯುತ್ತಿದೆ ಎನ್ನಲಾಗಿದೆ. ಆದರೆ ದಾಳಿಯ ಕಾರಣ ಏನೆಂಬುದು ಇಲ್ಲಿಯವರೆಗೂ ಇನ್ನು ಸ್ಪಷ್ಟವಾಗಿಲ್ಲ.

ಪೋಸಿಡಾನ್ ಎಂಬ ಲಿನಕ್ಸ್ ಮಾಲ್‌ವೇರ್ ಅನ್ನು ಪಾಕಿಸ್ತಾನದ ಹ್ಯಾಕರ್‌ಗಳು ಭಾರತೀಯ ಸರ್ಕಾರಿ ಸಂಸ್ಥೆಗಳನ್ನು ಹ್ಯಾಕ್ ಮಾಡಲು ಬಳಸುತ್ತಿದ್ದಾರೆ ಎಂದು ವರದಿಯಾಗಿದೆ. ಅದಷ್ಟೇ ಅಲ್ಲದೇ ಮೆಸೆಂಜರ್ ಅಪ್ಲಿಕೇಷನ್‌ಗಳಾದ
BingeChat ಮತ್ತು Chatico ಇವುಗಳು GravityRAT ಎಂಬ ಟ್ರೋಜನ್ ಒಳಗೊಂಡಿದೆ ಹಾಗಾಗಿ ಇವುಗಳ ಮೂಲಕ ಕೂಡ ಸೈಬರ್ ದಾಳಿ ನಡೆಯುತ್ತಿದೆ ಎಂದು ಸಂಶೋಧಕರು ಬಹಿರಂಗಪಡಿಸಿದ್ದಾರೆ.
ಕನಿಷ್ಠ 2015ರಿಂದಲೂ ರಿಮೋಟ್ ಅಕ್ಸೆಸ್ ಟೂಲ್ ಆಗಿರುವ GravityRAT ಟ್ರೋಜನ್ ಅನ್ನು ಬಳಸಲಾಗುತ್ತಿದೆ. ಕೂ ಭಾರತದ ವಿರುದ್ಧದ ಸೈಬರ್ ದಾಳಿಗಳಲ್ಲಿ ಈ ಹಿಂದೆ ಇದೇ ಟ್ರೋಜನ್ ಅನ್ನು ಬಳಸಲಾಗಿದೆ.
ಇನ್ನು, ವೈರಸ್ ಹಾಗೂ ಮಾಲ್‌ವೇರ್‌ಗಳನ್ನು ಕಳುಹಿಸಲು ಫಿಶಿಂಗ್ ಇಮೇಲ್ ಅಟ್ಯಾಚ್‌ಮೆಂಟ್ ಮತ್ತು URLಗಳನ್ನು ಪಾಕಿಸ್ತಾನ ಮೂಲದ ಹ್ಯಾಕಿಂಗ್ ಗುಂಪು ಬಳಸುತ್ತದೆ.
ನಿರಂತರವಾಗಿ ತಮ್ಮ ವಿಧಾನ ಹಾಗೂ ತಂತ್ರಗಳನ್ನು ಹ್ಯಾಕರ್‌ಗಳು ಬದಲಾಯಿಸುತ್ತಾರೆ. ದೇಶದ ಸೂಕ್ಷ್ಮ ಮಾಹಿತಿಯನ್ನು ಅವರ ಅತ್ಯಾಧುನಿಕ ತಂತ್ರಗಳು ಕಲೆಹಾಕುವುದಾಗಿದೆ. ಭಾರತೀಯ ಸೇನೆಯ ಅಧಿಕಾರಿಗಳನ್ನು
ಪ್ರಮುಖವಾಗಿ ಗುರಿಯಾಗಿಸಿಕೊಂಡಿರುವ ಹ್ಯಾಕರ್‌ಗಳು ಸೋಶಿಯಲ್ ಇಂಜಿನಿಯರಿಂಗ್ ಆಮಿಷಗಳನ್ನು ವ್ಯಾಪಕ ಶ್ರೇಣಿಯ ಮಾಲ್‌ವೇರ್ ಅನ್ನು ಬಿಡುಗಡೆ ಮಾಡಲು ಬಳಸುತ್ತಾರೆ.
ಇದನ್ನೂ ಓದಿ : ಭಾರತದಿಂದ ಬ್ಯಾಂಕಾಕ್‌ಗೆ ಶೀಘ್ರದಲ್ಲಿಯೇ ಹೆದ್ದಾರಿ : ಥೈಲ್ಯಾಂಡ್‌ಗೆ ಈ ಹೆದ್ದಾರಿ ಶಾರ್ಟ್‌ಕಟ್
ಇನ್ನು, ತಮ್ಮ ಸಂಶೋಧನೆಯ ವೇಳೆ ಭದ್ರತಾ ಸಂಶೋಧಕರು office.template.mac; DRDO-K4-Missile-Clean-room.zip; DRDO-K4-Missile-Clean-room.pptx.lnk; office.template.ui; DUser.dll
ಮತ್ತು test.bat ಎಂಬ ಅಪಾಯಕಾರಿ ಫೈಲ್‌ಗಳನ್ನು ಪತ್ತೆಹಚ್ಚಿದ್ದಾರೆ. ಪಾಕಿಸ್ತಾನದ 17 ವಿಭಿನ್ನ ಐಪಿ ವಿಳಾಸಗಳಿಂದ ಈ ಎಲ್ಲ ದಾಳಿಗಳು ನಡೆದಿರುವುದನ್ನು ಸಂಶೋಧಕರು ಗಮನಿಸಿದ್ದಾರೆ.
ರಶ್ಮಿತಾ ಅನೀಶ್