New Delhi : ಬೆಂಗಳೂರು- ಚೆನ್ನೈ ಪ್ರಯಾಣಿಕರಿಗೆ ಗುಡ್‌ನ್ಯೂಸ್ ನೀಡಿದ್ದಾರೆ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಕೇಂದ್ರ ಸಚಿವ ನಿತಿನ್ ಗಡ್ಕರಿ(Nithin gadkari). 17,000 ಕೋಟಿ ರೂ. ವೆಚ್ಚದಲ್ಲಿ ಹೊಸ ಗ್ರೀನ್‌ಫೀಲ್ಡ್
ಯೋಜನೆ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ(Bangalore-Chennai Expressway will ready) ಮಾರ್ಚ್ 2024ರ ವೇಳೆಗೆ ಸಿದ್ಧವಾಗಲಿದೆ ಎಂದು ಗರುವಾರ ನವದೆಹಲಿಯಲ್ಲಿ ತಿಳಿಸಿದ್ದಾರೆ.
2024ರ ಮಾರ್ಚ್ ವೇಳೆಗೆ ವೇಳೆಗೆ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ ಸಿದ್ಧವಾಗಲಿದೆ ಎಂದು ಹೇಳಿರುವ ನಿತಿನ್ ಗಡ್ಕರಿ ಅವರು, 285.3 ಕಿಮೀ ನಾಲ್ಕು ಪಥದ ಯೋಜನೆಯು ಪ್ರಯಾಣದ ಸಮಯವನ್ನು ಉಳಿಸಲು ಸಹಾಯ ಮಾಡುತ್ತದೆ ಎಂದು ಹೇಳಿದರು.
ನಗರದ ಹೊರವಲಯದ ಹೊಸಕೋಟೆ(Hoskote) ಬಳಿಯ ವಡಗನಹಳ್ಳಿಯಲ್ಲಿ ಯೋಜನೆ ಪರಿಶೀಲಿಸಿದ ನಂತರ ಈ ಬಗ್ಗೆ ಚಿಂತಿಸಲಾಗಿದೆ. ಇದು ಪ್ರಮುಖ ಪಟ್ಟಣಗಳು ಮತ್ತು ದಟ್ಟಣೆಯ ಪ್ರದೇಶಗಳಲ್ಲಿ ಪ್ರಯಾಣಿಸಲು
ತಗಲುವ ಹೆಚ್ಚು ಸಮಯವನ್ನು ತಪ್ಪಿಸಲು ಸಹಾಯ ಮಾಡುತ್ತದೆ. ಕರ್ನಾಟಕದಲ್ಲಿ 71.7 ಕಿ.ಮೀ ವ್ಯಾಪ್ತಿಯ ಈ ಭಾರತಮಾಲಾ ಯೋಜನೆಗೆ 5,069 ಕೋಟಿ ರೂ. ವೆಚ್ಚವಾಗಲಿದೆ(Bangalore-Chennai Expressway will ready) ಎಂದು ಗಡ್ಕರಿ ಹೇಳಿದರು.
ಈ ರಸ್ತೆಯನ್ನು ಮಾಡುವ ಮೂಲಕ ನಾವು ಲಾಜಿಸ್ಟಿಕ್ ವೆಚ್ಚವನ್ನು ಕಡಿಮೆಗೊಳಿಸುತ್ತೇವೆ. ಈಗಾಗಲೇ 231 ಕಿಮೀ ನಿರ್ಮಾಣವು ನಡೆಯುತ್ತಿದೆ. 2024ರ ಮಾರ್ಚ್ ತಿಂಗಳೊಳಗೆ ನಾವು ಈ ಯೋಜನೆಯನ್ನು ಪೂರ್ಣಗೊಳಿಸಲು ಬಯಸುತ್ತೇವೆ.
https://vijayatimes.com/156-rape-cases-registered/
ಈ ಯೋಜನೆಯಲ್ಲಿ ಅರಣ್ಯ ಭೂಮಿ ಇದ್ದು, ಎಲ್ಲ ಮಂಜೂರಾತಿಗಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj bommai) ಅವರೊಂದಿಗೆ ಮಾತನಾಡಿದ್ದೇನೆ.
ಅಮೃತ ಮಹೋತ್ಸವ ಪಕ್ಷಿಧಾಮ ಮತ್ತು ಅಮೃತ ಸರೋವರ ಕೂಡ ಈ ಪ್ರದೇಶದಲ್ಲಿ ಬರಲಿದೆ ಎಂದು ಉಲ್ಲೇಖಿಸಿ ಹೇಳಿದ್ದಾರೆ.
ಮೈಸೂರು-ಬೆಂಗಳೂರು ಹೆದ್ದಾರಿ ಕುರಿತು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು,
ಮುಂದಿನ ತಿಂಗಳೊಳಗೆ ಇದು ಸಿದ್ಧವಾಗಲಿದೆ ಮತ್ತು ಪ್ರಧಾನಿ ನರೇಂದ್ರ ಮೋದಿ(Narendra modi) ಅವರು ಈ ಹೆದ್ದಾರಿಯನ್ನು ಉದ್ಘಾಟಿಸಲಿದ್ದಾರೆ.
ಯೋಜನೆಯು ಪೂರ್ಣಗೊಂಡ ನಂತರ ಪ್ರಯಾಣದ ಸಮಯವನ್ನು ಒಂದು ಗಂಟೆ,
10 ನಿಮಿಷಗಳಷ್ಟು ಕಡಿಮೆ ಮಾಡುತ್ತದೆ. ಜಲ ಸಂರಕ್ಷಣೆಯ ಭಾಗವಾಗಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(nhai) ಕೆರೆಗಳ ಆಳೀಕರಣವನ್ನು ಸಹ ಕೈಗೊಳ್ಳಲಿದೆ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ.
ಹೆಚ್ಚಿನ ಭೂಮಿ ಮೌಲ್ಯದಿಂದಾಗಿ ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮುಂದೆ ಭೂಸ್ವಾಧೀನವು ದೊಡ್ಡ ಸವಾಲಾಗಿದೆ. ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ಮತ್ತು ಮಾಲಿನ್ಯವನ್ನು ನಿಯಂತ್ರಣಕ್ಕೆ ತರುವ ಉದ್ದೇದಿಂದ,
ಸಚಿವ ನಿತಿನ್ ಗಡ್ಕರಿ ಅವರು ಈ ಹೆದ್ದಾರಿಗಳಲ್ಲಿ ಉಪಗ್ರಹ ಟೌನ್‌ಶಿಪ್‌ಗಳನ್ನು ಶಿಫಾರಸು ಮಾಡಿದ್ದಾರೆ. ಮೂಲ ಮಾಹಿತಿಗಳ ಅನುಸಾರ, ಎನ್‌ಎಚ್‌ಎಐ ಕರ್ನಾಟಕದಲ್ಲಿ ಎರಡು ಲಕ್ಷ ಕೋಟಿ ರೂ. ಮೌಲ್ಯದ 8,005 ಕಿ.ಮೀ ಉದ್ದದ ಯೋಜನೆಗಳನ್ನು ಸಿದ್ದಪಡಿಸಿದೆ ಎಂದು ಹೇಳಲಾಗಿದೆ.