ಬೆಂಗಳೂರಿನ ಕೆ.ಆರ್. ಸರ್ಕಲ್ ಬಳಿಯ ಅಂಡರ್‌ಪಾಸ್‌ನ ನೀರಿನಲ್ಲಿ ಕಾರು ಮುಳುಗಿ ಮಹಿಳೆ ಸಾವು : ಡ್ರೈವರ್‌ ಮಾತನ್ನ ಉಡಾಫೆ ಮಾಡಿದ ಕುಟುಂಬ

Bengaluru : ಬೆಂಗಳೂರಿನ ಇನ್ಫೋಸಿಸ್ ಟೆಕ್ಕಿ ಮಹಿಳೆ ಭಾನುವಾರ ಮಧ್ಯಾಹ್ನ ಬೆಂಗಳೂರಿನ ಕೆ.ಆರ್. ಸರ್ಕಲ್ (Bangalore KR Circle Underpass) ಬಳಿಯ ಅಂಡರ್‌ಪಾಸ್‌ನಲ್ಲಿ ನೀರಿನಲ್ಲಿ ಕಾರು ಮುಳುಗಿ ಸಾವನ್ನಪ್ಪಿದ್ದಾರೆ ಎಂಬ ಅಂಶ ಬೆಳಕಿಗೆ ಬಂದಿದೆ.

ಚಾಲಕ ಕಾರನ್ನು ಮುಂದೆ ಹೋಗುವುದು ಬೇಡ ಎಂದು ಹೇಳಿದ್ದನು ಆದರೆ ಆ ಯುವತಿಯ ಮನೆಯವರು ಕಾರನ್ನು (Bangalore KR Circle Underpass) ಮುಂದೆ ಹೋಗುವಂತೆ ಸೂಚಿಸಿದರು ಆದರೆ,

ನೀರಿನಲ್ಲಿ ಎಂಜಿನ್ ಆಫ್ ಆಗಿ ಯುವತಿ ನೀರಿನಲ್ಲಿ ಸಾವನ್ನಪ್ಪಿದ್ದಾಳೆ. ಆಂಧ್ರಪ್ರದೇಶದ (Andhra Pradesh) ವಿಜಯವಾಡದಿಂದ ಬಂದಿದ್ದ ಕಾರಿನಲ್ಲಿ ಒಂದೇ ಕುಟುಂಬದವರಾಗಿದ್ದ ಸೋಹಿತಾ 15,

ಸಮಿತಾ 13, ಸಂಭ್ರಾಜ್ಯಂ 65,ಸ್ವರೂಪ 47, ಭಾನುರೇಖಾ 22 ಸಂದೀಪ್ 35 ಹಾಗೂ ಡ್ರೈವರ್ ಹರೀಶ್ ಕಾರಿನಲ್ಲಿದ್ದರು. ಇನ್ಫೋಸಿಸ್‌ನಲ್ಲಿ ಕೆಲಸ ಮಾಡುತ್ತಿರುವ ಭಾನುರೇಖಾ (Bhanurekha) ಅವರನ್ನು

ಭೇಟಿ ಮಾಡಲು ಅವರ ಕುಟುಂಬವು ಕಾರನ್ನು ಬಾಡಿಗೆಗೆ ತೆಗೆದುಕೊಂಡು ಬೆಂಗಳೂರಿಗೆ ಬಂದಿದ್ದರು .

ಇದನ್ನೂ ಓದಿ : https://vijayatimes.com/5-congress-guarantees-enforcement/

ಭಾನುವಾರ ರಜಾ ದಿನವಾದ ಕಾರಣ ಕುಟುಂಬದ ಆರು ಮಂದಿ ಹಾಗೂ ಚಾಲಕ ಕಬ್ಬನ್ ಪಾರ್ಕ್ (Cubbon Park) ನೋಡಲು ಅಂಡರ್ ಪಾಸ್ ಮೂಲಕ ತೆರಳಿದರು. ಆದರೆ, ಅಂಡರ್ ಪಾಸ್ ಬಳಿ ರಸ್ತೆ ತಡೆ

ನಿರ್ಮಿಸಲಾಗಿದ್ದು, ನೀರಿನ ಮಟ್ಟ ಹೆಚ್ಚಾಗಿದೆ. ಕಾರು ಮುಂದೆ ಹೋಗದಂತೆ ಮತ್ತು ಕಾರಿನಿಂದ ಇಳಿಯುವಂತೆ ಚಾಲಕ ಹೇಳಿದ ಆದರೆ ಆ ಕುಟುಂಬವು ಅವನ ಮಾತನ್ನು ನಿರ್ಲಕ್ಷಿಸಿ ಕಾರು ಮುಂದಕ್ಕೆ ಹೋಗುವಂತೆ ಹೇಳಿದರು.

ಕಾರ್ ಇಂಜಿನ್ ಆಫ್ ಆಗಿ ಡೋರ್ ಲಾಕ್ :

ಡ್ರೈವರ್‌ಗೆ ಬಾಡಿಗೆದಾರರೇ ಕಾರನ್ನು ಓಡಿಸುವಂತೆ ಹೇಳಿದ್ದರಿಂದ ಡ್ರೈವರ್ ಕಾರನ್ನು ನೀರಿಗೆ ಇಳಿಸಿದ್ದಾನೆ ನಂತರ ಕಾರಿನ ಇಂಜಿನ್ ಆಫ್ ಆಗಿ ಕಾರಿನ ಬಾಗಿಲುಗಳು ಲಾಕ್ ಆಗಿವೆ. ನಂತರ ಬಾಗಿಲ ಎತ್ತರಕ್ಕೂ ನೀರು ತುಂಬಿಕೊಂಡಿತು.

ಆದರೆ ಡ್ರೈವರ್ ಹತ್ತಿರದ ಕಿಟಕಿ ಸ್ವಲ್ಪ ತೆರೆದುಕೊಂಡಿದ್ದರಿಂದ ನಂತರ ಕೈ ಹೊರಗೆ ಹಾಕಿ ಸಮಯಪ್ರಜ್ಞೆಯಿಂದ ಡೋರ್ ತೆರೆದಿದ್ದಾರೆ.

ನಂತರ ಕಾರಿನಲ್ಲಿದ್ದ ಒಬ್ಬೊಬ್ಬರನ್ನೇ ಎಳೆದು ರಕ್ಷಣೆ ಮಾಡಲು ಮುಂದಾಗಿದ್ದಾನೆ. ಇಷ್ಟು ಹೊತ್ತಿಗೆ ಅವರಿಗೆ ಸ್ಥಳೀಯರು ಕೂಡ ಸಹಾಯ ಮಾಡಲು ಮುಂದಾದರು.

ಆದರೆ ಅಷ್ಟು ಹೊತ್ತಿಗೆ ಹಿಂದಿನ ಸೀಟಿನಲ್ಲಿದ್ದ ಭಾನುರೇಖಾ ಬಹುತೇಕ ನೀರು ಕುಡಿದಿದ್ದರು. ಇವರನ್ನು ರಕ್ಷಣೆ ಮಾಡುವಷ್ಟರಲ್ಲಾಗಲೇ ಬಹುತೇಕ ನೀರು ಕುಡಿದು ಉಸಿರಾಟ ಸಮಸ್ಯೆ ಉಂಟಾಗಿ ಜ್ಞಾನ ಕಳೆದುಕೊಂಡರು.

ಅಗ್ನಿಶಾಮಕ ಸಿಬ್ಬಂದಿ ಕೂಡ ಧಾವಿಸಿ ರಕ್ಷಣೆ ಮಾಡಿದ್ದಾರೆ. ಸೆಂಟ್ ಮಾರ್ಥಾಸ್ ಆಸ್ಪತ್ರೆಗೆ (St. Martha’s Hospital) ಎಲ್ಲರನ್ನೂ ಕರೆದುಕೊಂಡು ಬಂದಿದ್ದಾರೆ. ಭಾನುರೇಖಾಳನ್ನ ಆಸ್ಪತ್ರೆಗ ಬಂದ ಕೂಡಲೇ ವೈದ್ಯರು ಪರೀಕ್ಷೆ ಮಾಡಿದ್ದಾದರೂ ಈ ವೇಳೆಗಾಗಲೇ ಭಾನುರೇಖಾ ಮೃತ ಆಗಿದ್ದರು.

ಇದನ್ನೂ ಓದಿ : https://vijayatimes.com/siddaramaiah-takes-oath-2023/

ಸದ್ಯ ಎಫ್‌ಐಆರ್ (FIR) ದಾಖಲು ಮಾಡಿಕೊಂಡಿರುವ ಪೊಲೀಸರು ಹಲಸೂರು ಗೇಟ್‌ನಲ್ಲಿ ದೂರಿನ ಅನ್ವಯ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

ಸದ್ಯ ಮೃತ ಭಾನುರೇಖಾ ದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದ್ದು ಆಂಧ್ರಪ್ರದೇಶಕ್ಕೆ ಮೃತದೇಹವನ್ನು ತೆಗೆದುಕೊಂಡು ಹೋಗುವುದಾಗಿ ಕುಟುಂಬ ಸದಸ್ಯರು ಹೇಳಿದ್ದಾರೆ ಎಂದು ವರದಿ ಆಗಿವೆ.

ಸೇಂಟ್ ಮಾರ್ಥಾಸ್ ಆಸ್ಪತ್ರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಭೇಟಿ ನೀಡಿದ್ದಾರೆ ಮತ್ತು ಮೃತ ಭಾನುರೇಖಾ ಅವರ ಕುಟುಂಬದವರನ್ನು ಭೇಟಿಮಾಡಿ ಸಾಂತ್ವನ ಹೇಳಿದರು.

5 ಲಕ್ಷ ಪರಿಹಾರ ಹಾಗೂ ಸಾವನ್ನಪ್ಪಿದ ಯುವತಿಯ ಕುಟುಂಬದ ಎಲ್ಲರ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸುವುದಾಗಿ ತಿಳಿಸಿದರು.

Exit mobile version