ಬೆಂಗಳೂರು ಮತ್ತೆ ಲಾಕ್ಡೌನ್ ಆಗುತ್ತಾ..? ಸಚಿವ ಸುಧಾಕರ್ ಹೇಳಿದ್ದೇನು..?

ಬೆಂಗಳೂರು,ಫೆ.17: ಕೇರಳದಿಂದ ನಗರಕ್ಕೆ ಬಂದವರಿಗೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದ್ದರೂ ರಾಜ್ಯದಲ್ಲಿ ಮತ್ತೆ ಲಾಕ್‍ಡೌನ್ ಜಾರಿ ಮಾಡುವ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಆರೋಗ್ಯ ಮತ್ತು ವೈದ್ಯಕೀಯ ಸಚಿವ ಡಾ.ಕೆ.ಸುಧಾಕರ್ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದ ಅಪಾರ್ಟ್‍ಮೆಂಟ್‍ವೊಂದರಲ್ಲಿ ತಡರಾತ್ರಿಯವರೆಗೂ ಪಾರ್ಟಿ ಮಾಡಿದ ಕಾರಣ ಕೆಲವರಿಗೆ ಕೊರೊನಾ ಪಾಸಿಟಿವ್ ಬಂದಿದೆ.

ಈಗಾಗಲೇ ಅವರಿಗೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಕೇರಳದಿಂದ ಬರುತ್ತಿರುವವರ ಮೇಲೆ ತೀವ್ರವಾಗಿ ನಿಗಾ ಇಡುತ್ತಿದ್ದೇವೆ. ಯಾರೊಬ್ಬರೂ ಆತಂಕಪಡುವ ಅಗತ್ಯವಿಲ್ಲ ಎಂದು ಸದ್ಯಕ್ಕೆ ಸ್ಪಷ್ಟಪಡಿಸಿದ್ದಾರೆ. ನಮ್ಮ ಮುಂದೆ ಸೀಲ್ಡ್‍ಡೌನ್ ಪ್ರಸ್ತಾವನೆ ಇಲ್ಲವೇಇಲ್ಲ ಎಂದು ಪುನರುಚ್ಚರಿಸಿದರು.

ಕೇರಳದ ನರ್ಸಿಂಗ್ ಕಾಲೇಜಿನಿಂದ ಬಂದ ಕೆಲವರಿಗೆ ಕೊರೊನಾ ಪಾಸಿಟಿವ್ ಬಂದಿದೆ. ನಾವು ಈಗಾಗಲೇ ಮುಂಜಾಗ್ರತ ಕ್ರಮಗಳನ್ನು ಕೈಗೊಂಡಿದ್ದು, ಆ ಜಾಗವನ್ನು ಕಂಟೋನ್ಮೆಂಟ್ ವಲಯ ಎಂದು ಘೋಷಿಸಿದ್ದೇವೆ. ಜನರು ಅತಂಕ ಪಡುವ ಅವಶ್ಯವಿಲ್ಲ.

Exit mobile version