ರಾಮನಗರ: ದಶಪಥ ಹೆದ್ದಾರಿಯಲ್ಲಿ ಹೆಚ್ಚಿದ ಟೋಲ್ (Bangalore Mysore toll hike) ದರಗಳಿಂದಾಗಿ ವಾಹನ ಸವಾರರು ದಶಪಥ ಹೆದ್ದಾರಿಯಲ್ಲಿ ಸಂಚರಿಸಲು ಹಿಂಜರಿಯುತ್ತಿದ್ದಾರೆ.
ರಾಷ್ಟ್ರೀಯ ರಸ್ತೆ ಪ್ರಾಧಿಕಾರದ (Bangalore Mysore toll hike) ವಿರುದ್ಧವೂ ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು-ಮೈಸೂರು(BengaluruMysore) ಟೋಲ್ ರಸ್ತೆಯಲ್ಲಿ ಇಂದು ವಾಹನ ಸಂಚಾರ ಕಡಿಮೆಯಾಗಿದ್ದು, ವಾಹನ ಸವಾರರು ಟೋಲ್ ರಸ್ತೆ ಬಿಟ್ಟು ಸರ್ವಿಸ್ ರಸ್ತೆಗೆ (Service Road) ತಿರುಗಿದ್ದಾರೆ.
ಹೀಗಾಗಿ ಅಲ್ಲೊಂದು ಇಲ್ಲೊಂದು ಟ್ರಾಫಿಕ್ ಜಾಮ್ ಆಗಿದೆ. ದಶಪಥ ಹೆದ್ದಾರಿಯಲ್ಲಿ ವಾಹನಗಳ ಸಂಖ್ಯೆ ಕಡಿಮೆ ಇದ್ದು, ಬಿಕೋ ಎನ್ನುತ್ತಿದೆ ಟೋಲ್ ರಸ್ತೆ.
ಟೋಲ್ ಹೆಚ್ಚಳದ ನಂತರ ರಸ್ತೆ ಅಧಿಕಾರಿಗಳ ನಿರ್ಧಾರಕ್ಕೆ ವಾಹನ ಸವಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದರಿಂದ ಕಣಿಮಿಣಿಕಿ ಟೋಲ್ ಪ್ಲಾಜಾ ಬಳಿ ಟೋಲ್ ಸಂಗ್ರಹಕಾರರು ಹಾಗೂ
ವಾಹನ ಸವಾರರ ನಡುವೆ ವಾಗ್ವಾದ ನಡೆಯಿತು.
ಇದನ್ನು ಓದಿ: ಬಿಜೆಪಿ ಸರಕಾರದ ವಿರುದ್ಧ ಇರುವ 40 ಪರ್ಸೆಂಟ್ ಆರೋಪದ ಬಗ್ಗೆ ತನಿಖೆ ನಡೆಸಿ: ಕಾಂಗ್ರೆಸ್ಗೆ ಕುಮಾರಸ್ವಾಮಿ ಸವಾಲು
ಕನ್ನಡ ಬರದ ಅಧಿಕಾರಿಯನ್ನು ವಾಹನ ಸವಾರರು ತಡೆದರು. ಕನ್ನಡ ಮಾತನಾಡಿ ಸರಿಯಾದ ಮಾಹಿತಿ ನೀಡುವಂತೆ ಸಲಹೆ ನೀಡಿದರು.ಈ ಬಗ್ಗೆ ಸಿಟ್ಟನ್ನು ಹೊರಹಾಕಿದ ವಾಹನ ಸವಾರರು ,
ಕನ್ನಡ ಬರದಿದ್ದರೆ ಕನ್ನಡ ಮಾತನಾಡುವವರನ್ನು ಕರೆದು ಮಾತನಾಡಿಸಿ ಎಂದು ಆಕ್ರೋಶ ಹೊರಹಾಕಿದರು. ರಾಷ್ಟ್ರೀಯ ರಸ್ತೆಗಳ ಸಂಸ್ಥೆ ಟೋಲ್ ದರವನ್ನು ಪರಿಷ್ಕರಿಸಿದೆ.
ಜೂನ್ 1 ರಿಂದ, ಟೋಲ್ ಗಳು ಶೇ.22 ರಷ್ಟು ಹೆಚ್ಚಿಸಿದೆ. ರೂಪಾಯಿಂದ 200 ರೂ. ವರೆಗೆ ಟೋಲ್ ದರ ಏರಿಕೆಯಾಗಿದೆ.

ರಾಮನಗರ (Ramanagara)ಸಮೀಪ ಇರುವ ಕಣಮಿಣಿಕೆ ಮತ್ತು ಶೇಷಗಿರಿ ಹಳ್ಳಿ ಟೋಲ್ ಪ್ಲಾಜಾ ಬಳಿ ಹೆದ್ದಾರಿ ಪ್ರಾಧಿಕಾರವು ಪರಿಷ್ಕೃತ ದರದ ನಾಮಫಲಕವನ್ನು ಈಗಾಗಲೇ ಅಳವಡಿಸಿದೆ.
ಟೋಲ್ನಲ್ಲಿ ಎಷ್ಟೆಷ್ಟು ದರ ಏರಿಕೆ ಮಾಡಲಾಗಿದೆ?
- ಕಾರು, ವ್ಯಾನ್, ಜೀಪ್ ಏಕಮುಖ ಸಂಚಾರ ದರ 135-165ಕ್ಕೆ ಏರಿಕೆ ಮಾಡಿದ್ದು 30 ರೂಪಾಯಿ ಹೆಚ್ಚಳ
- ಲಘು ವಾಹನಗಳು, ಮಿನಿ ಬಸ್‌ಗಳ ಏಕಮುಖ ಟೋಲ್ ದರ 220-270ಕ್ಕೆ ಏರಿಕೆ (50 ರೂ. ಹೆಚ್ಚಳ)
- ಟ್ರಕ್, ಬಸ್, 2 ಆ್ಯಕ್ಸೆಲ್ ವಾಹನ ಏಕಮುಖ ಸಂಚಾರ ಟೋಲ್ ದರ ₹460-565ಕ್ಕೆ ಏರಿಕೆ (105 ಹೆಚ್ಚಳ)
- 3 ಆ್ಯಕ್ಸೆಲ್ ವಾಹನಗಳ ಏಕಮುಖ ಸಂಚಾರ ಟೋಲ್ ದರ ₹500-615ಕ್ಕೆ ಏರಿಕೆ (115 ರೂ. ಹೆಚ್ಚಳ)
- ಭಾರಿ ವಾಹನಗಳ ಏಕಮುಖ ಸಂಚಾರ ಟೋಲ್ ದರ ₹720ರಿಂದ ₹885ಕ್ಕೇರಿಕೆ (165 ರೂ.ಗೆ ಹೆಚ್ಚಳ)
- 7 ಅಥವಾ ಅದಕ್ಕಿಂತ ಹೆಚ್ಚಿನ ಆ್ಯಕ್ಸೆಲ್ ವಾಹನಗಳ ಟೋಲ್ ₹880-1,080ಕ್ಕೇರಿಕೆ (200 ಹೆಚ್ಚಳ)
ರಶ್ಮಿತಾ ಅನೀಶ್